Site icon Vistara News

Cheetah Helicopter: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್​ ಪತನ; ಲೆಫ್ಟಿನೆಂಟ್​ ಕರ್ನಲ್​ ಸೇರಿ ನಾಲ್ವರಿಗಾಗಿ ಹುಡುಕಾಟ

Indian Army Cheetah helicopter Crashed In Arunachal Pradesh

#image_title

ನವ ದೆಹಲಿ: ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್(Cheetah Helicopter)​ವೊಂದು ಅರುಣಾಚಲ ಪ್ರದೇಶದ ಮಂಡಲಾ ಬೆಟ್ಟಗಳ ಮಧ್ಯೆ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ ಇಬ್ಬರು ಪೈಲೆಟ್​ಗಳು, ಒಬ್ಬರು ಲೆಫ್ಟಿನೆಂಟ್ ಕರ್ನಲ್​ ಮತ್ತು ಒಬ್ಬರು ಮೇಜರ್​ ಇದ್ದರು. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಟೇಕ್​ಆಫ್​ ಆದ ಚೀತಾ ಹೆಲಿಕಾಪ್ಟರ್​ ಬೆಳಗ್ಗೆ 9.15ರ ಹೊತ್ತಿಗೆ ಏರ್ ಟ್ರಾಫಿಕ್​ ಕಂಟ್ರೋಲ್​​ನ ಸಂಪರ್ಕ ಕಳೆದುಕೊಂಡಿದೆ. ರಾಜ್ಯದ ಬೊಮ್​ಡಿಲಾ ಪಟ್ಟಣದ ಪಶ್ಚಿಮ ಭಾಗದಲ್ಲಿರುವ ಮಂಡಲ ಬೆಟ್ಟಗಳ ಬಳಿ ಇದು ಪತನಗೊಂಡಿದೆ ಎಂದು ಗುವಾಹಟಿ ರಕ್ಷಣಾ ಪಿಆರ್ಒ, ಲೆಫ್ಟಿನೆಂಟ್ ಕರ್ನಲ್​ ಮಹೇಂದ್ರ ರಾವತ್ ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದ ಮಿಗ್ಗಿಂಗ್ ಎಂಬಲ್ಲಿ 2022ರ ಅಕ್ಟೋಬರ್​​ನಲ್ಲಿ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಪತನವಾಗಿತ್ತು. ಅದರಲ್ಲಿದ್ದ ಐವರು ಮೃತಪಟ್ಟಿದ್ದರು. ಈ ವಿಮಾನದಲ್ಲಿ ಇಬ್ಬರು ಪೈಲೆಟ್​ಗಳು ಮತ್ತು ಮೂವರು ಸೇನಾ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಎಲ್ಲರ ಶವವೂ ಪತ್ತೆಯಾಗಿತ್ತು.

ಇದನ್ನೂ ಓದಿ: Helicopter Crashed | ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಸತ್ತವರ ಸಂಖ್ಯೆ 5ಕ್ಕೇರಿಕೆ

Exit mobile version