Site icon Vistara News

Independence Day | ಕೊರೆವ ಚಳಿಯಲ್ಲೂ ಸಿಯಾಚಿನ್‌ನಲ್ಲಿ ತಿರಂಗಾ ಹಾರಿಸಿದ ಯೋಧರು

Indian Army

ಲಡಾಕ್‌: ಜಗತ್ತಿನಲ್ಲಿಯೇ ಅತಿ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿಯಾಗಿರುವ, ಮೈ ಕೊರೆಯುವ ಚಳಿಯಿಂದ ಕೂಡಿರುವ, ಮೈನಸ್‌ ಡಿಗ್ರಿ ಹವಾಮಾನ ಇರುವ ಸಿಯಾಚಿನ್‌ನಲ್ಲಿ ಭಾರತೀಯ ಯೋಧರು ತಿರಂಗಾ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನ (Independence Day) ಆಚರಿಸಿದ್ದಾರೆ.

ಭಾರತೀಯ ಸೇನೆಯ “ಸಿಯಾಚಿನ್‌ ವಾರಿಯರ್ಸ್”‌ ಯೋಧರು ಧ್ವಜಾರೋಹಣ ಮಾಡಿ, ತಿರಂಗಾ ಹಿಡಿದು ಹಿಮದ ರಾಶಿ ಮಧ್ಯೆ ಸಂಚರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಸೇನೆಯ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಸಿಯಾಚಿನ್‌, ಜಗತ್ತಿನಲ್ಲಿಯೇ ಅತಿ ಎತ್ತರದ ಯುದ್ಧಭೂಮಿಯಾಗಿದೆ. ಸುಮಾರು ೫,೭೦೦ ಮೀಟರ್‌ ಎತ್ತರದ ಪ್ರದೇಶದಲ್ಲಿ, ನೀರ್ಗಲ್ಲುಗಳ ಮಧ್ಯೆ, ಕೊರೆವ ಚಳಿಯನ್ನೂ ಲೆಕ್ಕಿಸದೆ ಯೋಧರು ದೇಶಕ್ಕೆ ರಕ್ಷಣೆ ಒದಗಿಸುತ್ತಾರೆ. ಪ್ರತಿ ವರ್ಷವೂ ಹೀಗೆ ಎತ್ತರದ ಸಮರಭೂಮಿಯಲ್ಲಿ ತಿರಂಗಾ ಹಾರಿಸುವ ಮೂಲಕ ಯೋಧರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ.

ಇದನ್ನೂ ಓದಿ | Independence Day | ಧ್ವಜಾರೋಹಣ ನೆರೆವೇರಿಸುತ್ತಲೇ ಕುಸಿದು ಬಿದ್ದ ನಿವೃತ್ತ ಸೈನಿಕ ಸಾವು!

Exit mobile version