Site icon Vistara News

Army Jawans Died: ಪೂಂಚ್​​ನಲ್ಲಿ ಬೆಂಕಿಯಿಂದ ಹೊತ್ತಿ ಉರಿದ ಸೇನಾ ವಾಹನ; ನಾಲ್ವರು ಯೋಧರ ಸಜೀವ ದಹನ

Indian Army vehicle catches fire 3 Died

#image_title

ಶ್ರೀನಗರ: ಜಮ್ಮು ಕಾಶ್ಮೀರದ ಪೂಂಚ್​ ವಲಯದಲ್ಲಿ ದುರಂತವೊಂದು ಘಟಿಸಿದೆ. ಭಾರತೀಯ ಸೇನೆಯ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು, ಅದರಲ್ಲಿದ್ದ ಯೋಧರಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ (Army Jawans Died). ಪೂಂಚ್​ ಪಟ್ಟಣದ ಬಿಜಿ ಸೆಕ್ಟರ್​​ನಲ್ಲಿರುವ ಭಟ್ಟಾ ಡುರಿಯಾನ್​ ಅರಣ್ಯದ ಬಳಿಯೇ ಈ ದುರ್ಘಟನೆ ನಡೆದಿದೆ. ಈ ವಾಹನಕ್ಕೆ ಬೆಂಕಿ ತಗುಲಿದ್ದು ಹೇಗೆ? ವಾಹನದಲ್ಲಿ ದೋಷವಿತ್ತಾ? ಉಗ್ರ ಕೃತ್ಯವಾ ಎಂಬಿತ್ಯಾದಿ ಆಯಾಮದಲ್ಲಿ ಭಾರತೀಯ ಸೇನೆ ತನಿಖೆ ಆರಂಭಿಸಿದೆ.

ಸೇನಾ ವಾಹನಕ್ಕೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮೊದಲು ಅಲ್ಲಿಗೆ ಓಡಿದ್ದಾರೆ. ಪೊಲೀಸರಿಗೂ ತಕ್ಷಣವೇ ಮಾಹಿತಿ ರವಾನೆಯಾಗಿದೆ. ಸ್ಥಳೀಯ ಜನರು, ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸೇನೆಯ ಹಿರಿಯ ಅಧಿಕಾರಿಗಳೂ ಅಲ್ಲಿಗೆ ಧಾವಿಸಿ, ಪರಿಶೀಲನೆ ಮಾಡಿದ್ದಾರೆ. ಆ ವಾಹನದಲ್ಲಿ ಎಷ್ಟು ಯೋಧರು ಇದ್ದರು, ಯಾರಾದರೂ ಬಚಾವ್ ಆಗಿದ್ದಾರಾ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಸದ್ಯದಲ್ಲೇ ಸರಿಯಾದ ಮಾಹಿತಿ ಹಂಚಿಕೊಳ್ಳುವುದಾಗಿ ಸೇನೆ ತಿಳಿಸಿದೆ.

ಸಿಡಿಲು ಬಡಿಯಿತಾ?
ಪೂಂಚ್​ ವಲಯದಲ್ಲಿ ಇಂದು ಹವಾಮಾನ ಅತ್ಯಂತ ಕೆಟ್ಟದಾಗಿತ್ತು. ಗುಡುಗು-ಸಿಡಿಲಿನ ಮಧ್ಯೆ ಈ ವಾಹನ ಸಂಚರಿಸುತ್ತಿತ್ತು. ಅರಣ್ಯದ ಬಳಿ ಹೋಗುತ್ತಿದ್ದಾಗ ಸೇನಾ ವಾಹನಕ್ಕೆ ಸಿಡಿಲು ಬಡಿದು, ಬೆಂಕಿ ಹೊತ್ತಿಕೊಂಡಿದೆ ಎಂದು ಟೈಮ್ಸ್​ ನೌ ವರದಿ ಮಾಡಿದೆ. ಆದರೂ ಸೇನೆ ಇನ್ನೂ ಏನನ್ನೂ ಹೇಳಿಲ್ಲ.

ಇದನ್ನೂ ಓದಿ: Missiles Misfired: ಭಾರತೀಯ ಸೇನೆ ಫೈರಿಂಗ್ ಅಭ್ಯಾಸದ ವೇಳೆ ತಪ್ಪಾಗಿ ಹಾರಿದ 3 ಕ್ಷಿಪಣಿಗಳು; ದೊಡ್ಡಮಟ್ಟದ ಸ್ಫೋಟ

Exit mobile version