ಇಟಾನಗರ: ಜಮ್ಮು-ಕಾಶ್ಮೀರದ ಲಡಾಕ್ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ವರ್ಷಗಟ್ಟಲೇ ಬಿಕ್ಕಟ್ಟು ಸೃಷ್ಟಿಸಿದ್ದ ಕುತಂತ್ರಿ ಚೀನಾ ಈಗ ಅರುಣಾಚಲ ಪ್ರದೇಶ ತವಾಂಗ್ ಸೆಕ್ಟರ್‌ನ ಗಡಿಯಲ್ಲಿ ಉಪಟಳ ಆರಂಭಿಸಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಡಿಸೆಂಬರ್ ೯ರಂದು ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ (India China Clash) ನಡೆದಿದ್ದು, ಚೀನಾ ಸೈನಿಕರನ್ನು ಭಾರತದ ಸೈನಿಕರು ಬಗ್ಗುಬಡಿದಿದ್ದಾರೆ ಎಂದು ತಿಳಿದುಬಂದಿದೆ.
ಅರುಣಾಚಲ ಪ್ರದೇಶದ ಮೇಲೆ ಮೊದಲಿನಿಂದಲೂ ಚೀನಾ ಹಿಡಿತ ಸಾಧಿಸಲು ಯತ್ನಿಸುತ್ತಿದ್ದು, ಅದು ಸಾಧ್ಯವಾಗಿಲ್ಲ. ಇದರ ಬದಲಾಗಿ ಗಡಿಯಲ್ಲಿ ಚೀನಾ ಉಪಟಳ ಮಾಡುತ್ತದೆ. ಇಂತಹ ಉಪಟಳದ ಭಾಗವಾಗಿಯೇ ಡಿಸೆಂಬರ್ ೯ರಂದು ಭಾರತದ ಸೈನಿಕರನ್ನು ಕೆಣಕಿದ್ದಾರೆ. ಇದಕ್ಕೆ ಭಾರತದ ಯೋಧರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಸಂಘರ್ಷದಲ್ಲಿ ನಮ್ಮ ದೇಶದ 6 ಯೋಧರು ಗಾಯಗೊಂಡಿದ್ದಾರೆ. ಆದರೆ, ಕಮ್ಯುನಿಸ್ಟ್ ರಾಷ್ಟ್ರದ ಹೆಚ್ಚಿನ ಯೋಧರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಗಾಯಾಳು ಯೋಧರಿಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
೨೦೨೦ರ ಜೂನ್ ೧೫ರಂದೂ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿಯೂ ಭಾರತ-ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿತ್ತು. ಆಗಲೂ ದೇಶದ ಸೈನಿಕರು ತಿರುಗೇಟು ನೀಡಿದ್ದರು. ಎರಡು ವರ್ಷದ ಬಳಿಕ ಗಡಿಯಲ್ಲಿ ಇದೇ ಮೊದಲ ಬಾರಿಗೆ ಹೊಡೆದಾಟ ನಡೆದಿದೆ.
ಇದನ್ನೂ ಓದಿ | G20 Summit | 2 ವರ್ಷದ ಬಳಿಕ ಚೀನಾ ಅಧ್ಯಕ್ಷ ಜಿನ್ ಪಿಂಗ್- ಪ್ರಧಾನಿ ಮೋದಿ ಮಾತುಕತೆ!