Site icon Vistara News

Indian Embassy in Kabul |  ಅಫಘಾನಿಸ್ತಾನದಲ್ಲಿ ಭಾರತದ ರಾಯಭಾರ ಕಚೇರಿ ಪುನರಾರಂಭ

Indian Embassy in Kabul

ಕಾಬೂಲ್‌ : ಅಮೆರಿಕದ ನೇತೃತ್ವದ ನ್ಯಾಟೊ ಪಡೆ ಅಫಘಾನಿಸ್ತಾನದಿಂದ ತೆರಳಿದ ಬಳಿಕ ಹಾಗೂ ತಾಲಿಬಾನ್‌ ಆಡಳಿತ ಮರುಸ್ಥಾಪನೆಗೊಂಡ ಅವಧಿಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ ಕಾಬೂಲ್‌ನ ರಾಯಭಾರ ಕಚೇರಿ ಆಗಸ್ಟ್ ೧೫ರಂದು ಪುನರಾರಂಭಗೊಂಡಿದೆ.

ಕಳೆದ ವರ್ಷ ಆಗಸ್ಟ್‌ ೨೧ರಂದು ಅಫಘಾನಿಸ್ತಾನದ ಆಡಳಿತ ಚುಕ್ಕಾಣಿ ತಾಲಿಬಾನಿಗಳ ಕೈವಶವಾಗಿತ್ತು. ಈ ವೇಳೆ ಭಾರತ ಹಾಗೂ ಅಫಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ಕೊನೆಯಾಗಿತ್ತು. ಇದೀಗ ಭಾರತದ ಸ್ವಾತಂತ್ರ್ಯ ದಿನದಂದು ಮತ್ತೆ ರಾಯಭಾರ ಕಚೇರಿಯ ಕಾರ್ಯಾಚರಣೆ ಅರಂಭಗೊಂಡಿದೆ.

ಅಫಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ವಕ್ತಾರ ಅಬ್ದುಲ್‌ ಕಹಾರ್‌ ಭಲ್ಕಿ ಮಾತನಾಡಿ “ಭಾರತದ ರಾಯಭಾರ ಅಧಿಕಾರಿಗಳು ಆಗಸ್ಟ್‌ ೧೩ರಂದು ಅಫಘಾನಿಸ್ತಾನದಲ್ಲಿ ಬಂದು ಇಳಿದಿದ್ದಾರೆ. ಕಾನ್ಸುಲೇಟ್‌ನಲ್ಲಿ ಅವರು ತಮ್ಮ ಕೆಲಸವನ್ನು ಮುಂದುವರಿಸಲಿದ್ದಾರೆ. ಭಾರತದ ಅಧಿಕಾರಿಗಳಿಗೆ ನಾವು ಎಲ್ಲ ರೀತಿಯ ಸಹಕಾರ ಹಾಗೂ ಭದ್ರತೆ ಕೊಡಲು ಬದ್ಧರಾಗಿದ್ದೇವೆ,” ಎಂದು ಹೇಳಿದ್ದಾರೆ.

ತಾಲಿಬಾನ್‌ ಸರಕಾರ ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತಿದೆ ಎಂದು ಹೇಳಿದ, ಅಬ್ದುಲ್‌ ಕಹಾರ್‌, ಭಾರತ ಆರಂಭಿಸಿದ ಹಲವಾರು ಯೋಜನೆಗಳು ಅಫಘಾನಿಸ್ತಾನದಲ್ಲಿ ಅರ್ಧದಲ್ಲೇ ಬಾಕಿ ಉಳಿದಿವೆ. ಅದನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಇದನ್ನೂ ಓದಿ | ಅಫಘಾನಿಸ್ತಾನದ ಜತೆ ಭಾರತದ ಪಾಲುದಾರಿಕೆ ಮುಂದುವರಿಯಲಿದೆ ಎಂದ ಎನ್ ಎಸ್‌ಎ ಅಜಿತ್ ದೊವಲ್

Exit mobile version