ನವದೆಹಲಿ: 2023ರಲ್ಲಿ ಇಡೀ ಜಗತ್ತೇ ಹುಬ್ಬೇರಿಸುವಂತೆ (india stunned the world in 2023) ಮಾಡಿದ ಟಾಪ್ 10 ಭಾರತದ (India) ಸಾಧನೆಗಳನ್ನು (Top 10 Moments) ಒಳಗೊಂಡ ವಿಡಿಯೋವೊಂದನ್ನು ಭಾರತ ಸರ್ಕಾರವು (Indian Government) ಷೇರ್ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಭಾರತವು ಸಾಧಿಸಿದ ವಿಕ್ರಮಗಳು, ಪ್ರಥಮಗಳು, ವಿಶ್ವದಾಖಲೆಗಳನ್ನು ಒಳಗೊಂಡ ಪಟ್ಟಿ ಇದಾಗಿದೆ(Year Ender 2023).
ಐತಿಹಾಸಿಕ ಚಂದ್ರಯಾನ-3ರಿಂದ ಹಿಡಿದು ನಾಗಾಲೋಟದಲ್ಲಿ ಅಭಿವೃದ್ಧಿಯಾಗುತ್ತಿರುವ ಭಾರತದ ಆರ್ಥಿಕತೆಯವರೆಗೆ 10 ಸಾಧನೆಗಳನ್ನು ಈ ವಿಡಿಯೋದಲ್ಲಿ ಪಟ್ಟಿ ಮಾಡಲಾಗಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಮಾಡುತ್ತಿರುವ ಯೋಗದ ದಿನಚರಿ ಕೂಡ ಸೇರಿಸಲಾಗಿದೆ. ಹಾಗೆಯೇ, ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿರುವ, ಜಗತ್ತಿನ ಅತಿದೊಡ್ಡ ಧ್ಯಾನಕೇಂದ್ರ ಸ್ವರವೇದ ಮಹಾ ಮಂದಿರ ಸೇರಿದಂತೆ ಅನೇಕ ಸ್ಮರಣೀಯ ಭಾರತದ ಕ್ಷಣಗಳನ್ನು ಸ್ಮರಿಸಲಾಗಿದೆ.
From reaching the South Pole of Moon to claiming the title of the world's fastest-growing economy, here are 10 moments that showcased India's prowess in 2023.
— MyGovIndia (@mygovindia) December 21, 2023
Cheers to India's resounding crescendo in 2023#NewIndia pic.twitter.com/lcP0FyMfs4
2023ರ ಮುಕ್ತಾಯ ಹಂತದಲ್ಲಿ ದೇಶವು ಈ ವರ್ಷ ಸಾಧಿಸಿದ ಸಾಧನೆಗಳನ್ನು ಮೆಲುಕು ಹಾಕುವ ವಿಶಿಷ್ಟ ಪ್ರಯತ್ನವನ್ನು ಭಾರತವು ಮಾಡಿದೆ. ಈ ಪಟ್ಟಿಯಲ್ಲಿ ಏರ್ ಇಂಡಿಯಾ ಪೂರ್ತಿಗೊಳಿಸಿದ ಏರ್‌ಕ್ರಾಫ್ಟ್ ಡೀಲ್, ಭಾರತದ ಡಿಜಿಟಲ್ ಪೇಮೆಂಟ್, ಜಗತ್ತಿನ ಅತಿದೊಡ್ಡ ಕಚೇರಿ ಕಟ್ಟಡ ಸೇರಿದಂತೆ ಇತರ ಸಾಧನೆಗಳನ್ನು ತೋರಿಸಲಾಗಿದೆ.
1.ಚಂದ್ರಯಾನ-3
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಇಸ್ರೋ ವಿಶಿಷ್ಠ ಸಾಧನೆ ಮಾಡಿತು. ಚಂದ್ರನ ದಕ್ಷಿಣ ಧ್ರುವನ್ನು ಸ್ಪರ್ಶಿದ ಜಗತ್ತಿನ ಮೊದಲ ರಾಷ್ಟ್ರ ಭಾರತವಾಗಿದೆ.
2.ಫಾಸ್ಟೆಸ್ಟ್ 5ಜಿ
ಭಾರತವು 2023ರಲ್ಲಿ 5ಜಿ ತಂತ್ರಜ್ಞಾನಕ್ಕೆ ತೆರೆದುಕೊಂಡಿತು. ಇದರೊಂದಿಗೆ 5ಜಿ ಸೇವೆಯನ್ನು ಒದಗಿಸುತ್ತಿರುವ ಜಗತ್ತಿನ ಎಲೈಟ್ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಯಿತು.
3.ಸ್ವರವೇದ ಧ್ಯಾನಕೇಂದ್ರ
ವಾರಾಣಸಿಯಲ್ಲಿ ತಲೆ ಎತ್ತಿ ನಿಂತಿರುವ ಸ್ವರವೇದ ಧ್ಯಾನ ಕೇಂದ್ರವು ಜಗತ್ತಿನ ಅತ್ಯಂತ ದೊಡ್ಡ ಧ್ಯಾನಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ಮೋದಿ ಅವರು ಮೊನ್ನೆಯಷ್ಟೇ ಈ ಧ್ಯಾನ ಕೇಂದ್ರವನ್ನು ಉದ್ಘಾಟಿಸಿದರು.
4.ಗಂಗಾ ವಿಲಾಸ ಕ್ರೂಸ್
2023ರಲ್ಲಿ ಭಾರತವು ಮತ್ತೊಂದು ವೈಭವಕ್ಕೆ ಸಾಕ್ಷಿಯಾಯಿತು. ಜಗತ್ತಿನ ಅತ್ಯಂತ ಉದ್ದ ನದಿ ಕ್ರೂಸ್-ಎಂವಿ ಹಡಗಿಗೆ ಚಾಲನೆ ನೀಡಲಾಯಿತು. ಗಂಗಾ ವಿಲಾಸ ನದಿಯಲ್ಲಿ ಕಾರ್ಯನಿರ್ವಹಣೆ ಮಾಡುವ ಜಗತ್ತಿನ ಅತ್ಯಂತದ ಉದ್ದದ ಕ್ರೂಸ್ ಆಗಿದೆ.
5.ವಿಶ್ವಸಂಸ್ಥೆಯಲ್ಲಿ ಮೋದಿ ಯೋಗ
2023ರ ಯೋಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಆಚರಿಸಿದರು. ಈ ವೇಳೆ ಅವರು ಭಾಗವಹಿಸಿದ ಯೋಗ ದಿನಚರಿಯು ವಿಶ್ವ ದಾಖಲೆಯನ್ನು ಬರೆಯಿತು.
6.ಏರ್ ಇಂಡಿಯಾ ಡೀಲ್
ಟಾಟಾ ಕಂಪನಿ ಒಡೆತನದಲ್ಲಿರುವ ಏರ್ ಇಂಡಿಯಾ 70 ಶತಕೋಟಿ ಡಾಲರ್ ವೆಚ್ಚದಲ್ಲಿ ವಿಮಾನ ಖರೀದಿ ಒಪ್ಪಂದವನ್ನು ಮಾಡಿಕೊಂಡಿತು. ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಮಾನ ಖರೀದಿ ಒಪ್ಪಂದವು ಈ ಹಿಂದೆ ನಡೆದಿಲ್ಲ.
7.ವೇಗದ ಆರ್ಥಿಕತೆ
ಪ್ರಸಕ್ತ ಸಾಲಿನಲ್ಲಿ ಭಾರತದ ಪಾಲಿಗೆ ಆರ್ಥಿಕಾಭಿವೃದ್ಧಿ ಹೊಸ ಮಜಲು ಮುಟ್ಟಿದೆ. ಜಗತ್ತಿನಲ್ಲೇ ಅತ್ಯಂತ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆ ಎಂಬ ಖ್ಯಾತಿ ಭಾರತಕ್ಕೆ ಬಂತು.
8.ಡಿಜಿಟಲ್ ಪೇಮೆಂಟ್ಸ್
ಡಿಜಿಟಲ್ ಇಂಡಿಯಾ ಮೂಲಕ ಭಾರತವು ಡಿಜಿಟಲ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಡಿಜಿಟಲ್ ಪೇಮೆಂಟ್ಸ್‌ಗೆ ಭಾರತವು ಸಾಕ್ಷಿಯಾಗಿದೆ.
9.ಬೃಹತ್ ಕಚೇರಿ ಕಟ್ಟಡ
ಗುಜರಾತ್‌ನ ಸೂರತ್‌ನಲ್ಲಿ ನಿರ್ಮಾಣವಾದ, ಸೂರತ್ ಡೈಮಂಡ್ ಬೌರ್ಸ್ ಜಗತ್ತಿನ ಅತಿದೊಡ್ಡ ಕಚೇರಿ ಕಟ್ಟಡ ಎಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಧಾನಿ ಮೋದಿ ಅವರು ಇತ್ತೀಚೆಗಷ್ಟೇ ಈ ಕಟ್ಟಡವನ್ನು ಉದ್ಘಾಟಿಸಿದ್ದರು.
10.ಅಯೋಧ್ಯೆ ದೀಪೋತ್ಸವ
ಪ್ರತಿ ವರ್ಷವೂ ಅಯೋಧ್ಯೆಯಲ್ಲಿ ದೀಪೋತ್ಸವದ ವೈಭವ ನಡೆಯುತ್ತದೆ. ಈ ವರ್ಷ 22.23 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಯಾಯಿತು.
ಈ ಸುದ್ದಿಯನ್ನೂ ಓದಿ: Year Ender 2023: ಗೂಗಲ್‌ನಲ್ಲಿ ಪ್ರವಾಸಿಗರು ಹುಡುಕಿದ ಜಾಗತಿಕ ಟಾಪ್ 10 ಪಟ್ಟಿಯಲ್ಲಿ ಕರ್ನಾಟಕದ ಸ್ಥಳವೂ ಇದೆ!