ನವದೆಹಲಿ: ಭಾರತದ ನೌಕಾಪಡೆಯು ಬ್ರಹ್ಮೋಸ್ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆಯನ್ನು (BrahMos Missile Test) ಯಶಸ್ವಿಯಾಗಿ ಕೈಗೊಂಡಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ದೇಶೀಯ ಸೀಕರ್ ಹಾಗೂ ಬೂಸ್ಟರ್‌ಗಳೊಂದಿಗೆ ಕ್ಷಿಪಣಿಯನ್ನು ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ.
“ಕೋಲ್ಕೊತಾ ಕ್ಲಾಸ್ ಗೈಡೆಡ್ ಕ್ಷಿಪಣಿ ನಿಗ್ರಹ ಯುದ್ಧನೌಕೆಯ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಬ್ರಹ್ಮೋಸ್ ಕ್ಷಿಪಣಿಯಲ್ಲಿ ದೇಶೀಯತೆ ತರಲು ನೌಕಾಪಡೆ ಹಲವು ಪ್ರಯೋಗ ಮಾಡುತ್ತಿದೆ. ಕ್ಷಿಪಣಿಯ ಯಶಸ್ವಿ ಪ್ರಯೋಗದಿಂದ ಇದರಿಂದ ಭಾರತವು ಆತ್ಮನಿರ್ಭರತೆ ಸಾಧಿಸಲು ನೌಕಾಪಡೆಯ ಬದ್ಧತೆಯು ದ್ವಿಗುಣಗೊಂಡಂತಾಗಿದೆ” ಎಂದು ನೌಕಾಪಡೆ ತಿಳಿಸಿದೆ.
ಕಳೆದ ತಿಂಗಳು ಎಲ್‌ಸಿಎ ತೇಜಸ್ ಹಾಗೂ ಮಿಗ್-29 ಕೆ ಯುದ್ಧವಿಮಾನಗಳನ್ನು ಐಎನ್‌ಎಸ್ ವಿಕ್ರಾಂತ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಇದರ ಬೆನ್ನಲ್ಲೇ ನೌಕಾಪಡೆಯು ಮತ್ತೊಂದು ಯಶಸ್ವಿ ಪ್ರಯೋಗ ಮಾಡಿದೆ. ಐಎನ್‌ಎಸ್ ವಿಕ್ರಾಂತ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ವಿಮಾನ ವಾಹಕ ಆಗಿದೆ.
ಇದನ್ನೂ ಓದಿ: BrahMos Missile | ಆಗಸದಿಂದಲೇ ಬ್ರಹ್ಮೋಸ್ ಕ್ಷಿಪಣಿಯ ಪ್ರಯೋಗ ಯಶಸ್ವಿ, 400 ಕಿ.ಮೀ ದೂರದ ಗುರಿಗಳೂ ಇನ್ನು ಧ್ವಂಸ