Site icon Vistara News

Air India: ಏರ್‌ ಇಂಡಿಯಾ ವಿಮಾನದಲ್ಲಿ ಧೂಮಪಾನ, ಗಲಾಟೆ; ಪ್ರಯಾಣಿಕನ ಕೈಕಾಲು ಕಟ್ಟಿ ಕೂರಿಸಿದ ಸಿಬ್ಬಂದಿ

Indian-origin man booked for smoking onboard London-Mumbai Air India flight

ಏರ್‌ ಇಂಡಿಯಾ

ಮುಂಬೈ: ಏರ್‌ ಇಂಡಿಯಾ ವಿಮಾನದಲ್ಲಿ ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಜೈಲು ಸೇರಿದ ಪ್ರಸಂಗ ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಲಂಡನ್‌ನಿಂದ ಮುಂಬೈಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ (Air India) ವಿಮಾನದಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬ ಧೂಮಪಾನ ಮಾಡಿ, ಗಲಾಟೆ ನಡೆಸಿದ್ದಾನೆ. ಹಾಗಾಗಿ, ವಿಮಾನದ ಸಿಬ್ಬಂದಿಯು ಆತನ ಕೈಕಾಲು ಕಟ್ಟಿ ಸೀಟಿನಲ್ಲಿ ಕೂರಿಸಿದ್ದಾರೆ. ಹಾಗೆಯೇ, ಮುಂಬೈಗೆ ಆಗಮಿಸುತ್ತಲೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾರ್ಚ್‌ 10ರಂದು ಲಂಡನ್‌ನಿಂದ ಮುಂಬೈಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ರಮಾಕಾಂತ್‌ ಎಂಬ 37 ವರ್ಷದ ವ್ಯಕ್ತಿಯು ವಿಮಾನ ಹಾರಾಟ ನಡೆಸುವಾಗಲೇ ಬಾತ್‌ರೂಮ್‌ಗೆ ತೆರಳಿದ್ದಾನೆ. ಅಲ್ಲಿ ಹೋಗಿ ಸಿಗರೇಟ್‌ ಸೇದಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿಯು ಸಿಗರೇಟ್‌ ಬಿಸಾಕಿದ್ದಾರೆ. ಇದರಿಂದ ಕುಪಿತಗೊಂಡ ರಮಾಕಾಂತ್‌ ಗಲಾಟೆ ನಡೆಸಿದ್ದಾನೆ ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ.

ಸಿಗರೇಟ್‌ ಕಸಿದುಕೊಂಡ ಕಾರಣ ಪ್ರಯಾಣಿಕನು ಜೋರಾಗಿ ಕೂಗಿದ್ದಾನೆ. ವಿಮಾನದ ಬಾಗಿಲು ತೆಗೆಯಲು ಯತ್ನಿಸಿದ್ದಾನೆ. ಸಹ ಪ್ರಯಾಣಿಕರಿಗೂ ತೊಂದರೆ ಕೊಟ್ಟಿದ್ದಾನೆ. ಇದರಿಂದ ಬೇಸತ್ತ ಸಿಬ್ಬಂದಿಯು ಆತನ ಕೈಕಾಲು ಕಟ್ಟಿದ್ದಾರೆ. ಬಳಿಕ ಅತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ. ಭಾರತ ಮೂಲದ ರಮಾಕಾಂತ್‌, ಅಮೆರಿಕದಲ್ಲಿಯೇ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gold Smuggling : ಏರ್‌ ಇಂಡಿಯಾ ಸಿಬ್ಬಂದಿ ಕೈಗಳಲ್ಲಿತ್ತು 1.4 ಕೆ.ಜಿ. ಚಿನ್ನ! ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಸಿಬ್ಬಂದಿ

Exit mobile version