ನವದೆಹಲಿ: ಶತಮಾನ ಕಂಡ ಭೂಕಂಪದಿಂದ ಟರ್ಕಿ ಹಾಗೂ ಸಿರಿಯಾ ತತ್ತರಿಸಿಹೋಗಿವೆ. ಇತ್ತೀಚೆಗೆ ದೆಹಲಿ ಸುತ್ತಮುತ್ತ ಪದೇಪದೆ ಭೂಕಂಪ (Earthquakes In India) ಸಂಭವಿಸುತ್ತಿವೆ. ಇದರ ಬೆನ್ನಲ್ಲೇ, ಭವಿಷ್ಯತ್ತಿನಲ್ಲಿ ದೇಶಾದ್ಯಂತ ಭೂಕಂಪ ಸಂಭವಿಸುವ ಸಾಧ್ಯತೆ ಹೆಚ್ಚಿವೆ ಎಂದು ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (NGRI) ಮುಖ್ಯ ವಿಜ್ಞಾನಿ ಡಾ.ಎನ್.ಪೂರ್ಣಚಂದ್ರ ರಾವ್ (Dr N Purnachandra Rao) ಎಚ್ಚರಿಸಿದ್ದಾರೆ.
“ಭಾರತದ ಟೆಕ್ಟೋನಿಕ್ ಪ್ಲೇಟ್ (Tectonic Plate) ಪ್ರತಿ ವರ್ಷ ೫ ಸೆಂಟಿ ಮೀಟರ್ ಚಲಿಸುತ್ತಿದೆ. ಇದರಿಂದಾಗಿ ಹಿಮಾಲಯ ಪ್ರದೇಶಗಳಲ್ಲಿ ಒತ್ತಡದ ಶೇಖರಣೆಯಾಗುತ್ತಿದೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿ ಹಲವು ರಾಜ್ಯಗಳಲ್ಲಿ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ” ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ತಿಳಿಸಿದ್ದಾರೆ.
“ಉತ್ತರಾಖಂಡದಲ್ಲಿ ನಾವು ೧೮ ಭೂಕಂಪನ ಕೇಂದ್ರಗಳನ್ನು ಹೊಂದಿದ್ದೇವೆ. ಭೌಗೋಳಿಕ ಬದಲಾವಣೆ, ಭೂಕಂಪದ ಸಾಧ್ಯತೆ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ನೇಪಾಳ ಹಾಗೂ ಹಿಮಾಚಲದ ಭೂಕಂಪದ ಅಂತರದಿಂದಾಗಿ ಯಾವ ಸಂದರ್ಭದಲ್ಲಿ ಬೇಕಾದರೂ ಪ್ರಬಲ ಭೂಕಂಪ ಸಂಭವಿಸಬಹುದು” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Operation Dost: ಭೂಕಂಪಪೀಡಿತ ಟರ್ಕಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಿದ ಭಾರತೀಯ ತಂಡಗಳಿಗೆ ಮೋದಿ ಸೆಲ್ಯೂಟ್