Site icon Vistara News

Uddhav Thackeray: ಭಾರತೀಯ ರಾಜಕಾರಣ ಐಪಿಎಲ್ ರೀತಿಯಾಗಿದೆ! ಬಿಜೆಪಿ ವಿರುದ್ದ ಉದ್ಧವ್ ಠಾಕ್ರೆ ಟೀಕೆ

Uddhav Thackeray

ನವದೆಹಲಿ: ಭಾರತದಲ್ಲಿ ರಾಜಕಾರಣವು (Indian Politics) ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್ – IPL) ರೀತಿಯಾಗಿದೆ. ಯಾರು ಯಾವ ತಂಡದ ಪರವಾಗಿ ಆಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ (BJP) ವಿರುದ್ಧ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ (Former CM Uddhav Thackeray) ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಹಾಗೂ ಮಹಾರಾಷ್ಟ್ರದ ರಾಜಕಾರಣವು ಕೀಳಮಟ್ಟವನ್ನು ತಲುಪಿದೆ. ಜನರಿಗೆ ಬೇಜಾರಾಗಿದೆ. ಸರ್ಕಾರ ಇನ್ನೂ ಜನರ ಸಮಸ್ಯೆಗಳಿಗೆ ಕಿವಿಯಾಗುತ್ತಿಲ್ಲ. ಜನರ ಮನೆಗಳ ಬಾಗಿಲಲ್ಲಿ ಸರ್ಕಾರದ ಕಾರ್ಯಕ್ರಮಗಳಿವೆ. ಆದರೆ, ಮನೆಗಳ ಸ್ಥಿತಿ ಏನಾಗಿದೆ? ಆ ಬಗ್ಗೆ ಈಗಿರುವ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದರು.

ಇದೇ ವೇಳೆ, ದೇವೇಂದ್ರ ಫಡ್ನವೀಸ್ ವಿರುದ್ಧವೂ ಟೀಕೆಯನ್ನು ಮಾಡಿದ ಠಾಕ್ರೆ ಅವರು, ಈ ಹಿಂದೇ ಇದೇ ಫಡ್ನವೀಸ್ ಅವರು ಎಂದಿಗೂ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅವರ ತಮ್ಮ ಮಾತನ್ನು ಮೀರಿದ್ದಾರೆ. ಫಡ್ನ ವೀಸ್ ಅವರ ತವರು ನೆಲವಾದ ನಾಗಪುರಕ್ಕೆ ಒಂದು ಕಳಂಕವಾಗಿದ್ದಾರೆ ಎಂದು ದೂರಿದರು.

ಉದ್ಧವ್ ಠಾಕ್ರೆ ಅವರು, ದೇವೇಂದ್ರ ಫಡ್ನವೀಸ್ ಅವರನ್ನು ನಾಗಪುರಕ್ಕೆ ಕಳಂಕ ಎಂದು ಹೇಳಿರುವುದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೆರಳಿಸಿದೆ. ಠಾಕ್ರೆ ಅವರು ಅಧಿಕಾರದಲ್ಲಿರುವ ಸರ್ಕಾರದ ಅಭಿವೄದ್ಧಿ ಕಾರ್ಯಗಳ ಕುರಿತು ಚರ್ಚಿಸಬಹುದು. ಆದರೆ, ಕೀಳು ಮಟ್ಟದ ವೈಯಕ್ತಿಕ ಆರೋಪಗಳನ್ನು ಮಾಡುವುದು ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಗೆ ಸರಿ ಹೊಂದುವುದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Shiv Sena Party Symbol: ಅಮಿತ್ ಶಾರನ್ನು ಮೊಗ್ಯಾಂಬೋಗೆ ಹೋಲಿಸಿ, ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ

ನಿತಿನ್ ಗಡ್ಕರಿ ಅವರ ಟೀಕೆ ಪ್ರತ್ಯುತ್ತರ ನೀಡಿದ ಠಾಕ್ರೆ ಅವರು, ತಮ್ಮ ವಿರುದ್ದ ಬಿಜೆಪಿ ನಾಯಕರು ಬಳಸುತ್ತಿರುವ ಪದಗಳ ಬಗ್ಗೆ ಗಮನ ಸೆಳೆದರು. ನಾನು ಒಂದು ಪದವನ್ನು ಬಳಸಿದ್ದಕ್ಕೆ ನಿಮಗೆ (ನಿತಿನ್ ಗಡ್ಕರಿ) ಬೇಜಾರಾಯಿತು. ನೀವು ಕುಟುಂಬಗಳನ್ನೇ ನಾಶ ಮಾಡಿದ್ದೀರಿ. ನಾನು ಅವರಿಗೆ ಕನ್ನಡಿಯನ್ನು ತೋರಿಸುತ್ತಿದ್ದೇನೆ. ನನ್ನ ಆರೋಗ್ಯದ ಕುರಿತು ಟೀಕೆ ಮಾಡಲಾಯಿತು. ನಾನು ಕಳಂಕ ಎಂದಷ್ಟೇ ಹೇಳಿದ್ದೇನೆ ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version