ನವದೆಹಲಿ: ಭಾರತದ ಸಿಂಗಲ್ ಮಾಲ್ಟ್ ವಿಸ್ಕಿಯೊಂದು (Single Malt Whisky) ಈಗ ಜಾಗತಿಕ ಬ್ರ್ಯಾಂಡ್‌ಗಳಿಗೆ ಸೆಡ್ಡು ಹೊಡೆದಿದೆ(Global Brands). ಹೌದು, ಭಾರತದ ಸಿಂಗಲ್ ಮಾಲ್ಟ್ ವಿಸ್ಕಿ ‘ಇಂದ್ರಿ’ (Indri Whisky) ಜಗತ್ತಿನ ಅತ್ಯುತ್ತಮ ವಿಸ್ಕಿ (Best Whisky) ಎಂಬ ಕೀರ್ತಿಗೆ ಪಾತ್ರವಾಗಿದೆ. ಎರಡು ವರ್ಷದ ಹಳೆಯ ಭಾರತೀಯ ಬ್ರ್ಯಾಂಡ್ ಮಾಲೀಕ ಪಿಕ್ಕಾಡಿಲಿ ವಿಸ್ಕಿ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದಾರೆ. ವಿಸ್ಕಿ ಪ್ರಿಯ ರಾಷ್ಟ್ರದಲ್ಲಿ ಮಧ್ಯ ಪ್ರಿಯರನ್ನು ಸೆಳೆಯಲು ಮತ್ತು ಮೂರು ರಂಧ್ರಗಳ ಗಾಲ್ಪ್ ಕೋರ್ಸ್ ಅನ್ನು ನಿರ್ಮಿಸುತ್ತಿದ್ದಾರೆ.
ಭಾರತವು ಕೇವಲ ವಿಸ್ಕಿ ಉಪಭೋಗ ಮಾಡುವುದು ಮಾತ್ರವಲ್ಲದೇ ಉತ್ಪಾದನೆಯಲ್ಲೂ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ಸಿಂಗಲ್ ಮಾಲ್ಟ್ ವಿಸ್ಕಿ ಬ್ರ್ಯಾಂಡುಗಳು ಭಾರತದ 33 ಬಿಲಿಯನ್ ಡಾಲರ್ ಮದ್ಯ ಮಾರುಕಟ್ಟೆಯನ್ನು ಮರುರೂಪಿಸುತ್ತಿವೆ ಎಂದು ಹೇಳಬಹುದು.
ಫ್ರಾನ್ಸ್‌ನ ಪೆರ್ನಾಡ್ ರಿಕಾರ್ಡ್ ತಯಾರಿಸಿದ ಗ್ಲೆನ್‌ಲೈವ್ಟ್ ಮತ್ತು ಬ್ರಿಟನ್‌ನ ಡಿಯಾಜಿಯೊದಿಂದ ತಾಲಿಸ್ಕರ್‌ನಂತಹ ಜಾಗತಿಕ ಬ್ರ್ಯಾಂಡ್‌ಗಳಿಗೆ ಸ್ಥಳೀಯ ಪ್ರತಿಸ್ಪರ್ಧಿಗಳಾದ ಇಂದ್ರಿ, ಅಮೃತ್ ಮತ್ತು ರಾಡಿಕೊ ಖೈತಾನ್‌ನ ರಾಂಪುರ್ ಅವರೊಂದಿಗೆ ಪೂರ್ಣ ಪ್ರಮಾಣದಲ್ಲಿ ಪೈಪೋಟಿ ನೀಡುತ್ತಿವೆ.
ಬಿಯರ್ ಆಲ್ಕೋಹಾಲ್ ಮಾರಾಟದಲ್ಲಿ ಪ್ರಾಬಲ್ಯ ಹೊಂದಿರುವ ಏಷ್ಯಾದ ಅನೇಕ ದೇಶಗಳಿಗಿಂತ ಭಿನ್ನವಾಗಿ, ಭಾರತವು ಪ್ರಧಾನವಾಗಿ ವಿಸ್ಕಿ-ಕುಡಿಯುವ ರಾಷ್ಟ್ರವಾಗಿದೆ. ಹೆಚ್ಚುತ್ತಿರುವ ಶ್ರೀಮಂತಿಕೆ ಮತ್ತು ಕೋವಿಡ್-19 ಸಮಯದಲ್ಲಿ ಹೊಸ ಬ್ರಾಂಡ್‌ಗಳನ್ನು ಪ್ರಯತ್ನಿಸುತ್ತಿರುವ ಬಹಳಷ್ಟು ಕುಡಿಯುವವರು ಭಾರತದ ವಿಸ್ಕಿಯ ಮಾರುಕಟ್ಟಿಗೆ ಜೀವ ತಂದಿದ್ದಾರೆ ಎನ್ನುತ್ತಾರೆ ಉದ್ಯಮದ ವಿಶ್ಲೇಷಕರು.
ಕೆಲವರು ಈವರೆಗೆ ವಿದೇಶಿ ಬ್ರ್ಯಾಂಡುಗಳನ್ನು ಕುಡಿಯುತ್ತಿದ್ದವರು ಈಗ ಸ್ವದೇಶಿ ಬ್ರ್ಯಾಂಡ್‌ಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ವಿದೇಶಿ ಬ್ರ್ಯಾಂಡುಗಳಿಗಿಂತ ಸ್ವದೇಶಿ ಬ್ರ್ಯಾಂಡುಗಳು ನಮ್ಮ ಊಟಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತವೆ. ಕೆಲವು ಮದ್ಯ ಪ್ರಿಯರಿಗೆ ಸ್ವದೇಶಿ ಬ್ರ್ಯಾಂಡ್ ವಿಸ್ಕಿ ಕುಡಿಯೋದು ಎಂದರೆ ರಾಷ್ಟ್ರೀಯ ಹೆಮ್ಮೆ ಎಂದು ಭಾವಿಸುತ್ತಾರೆ ಕೂಡ. ನಮ್ಮ ರೀತಿಯ ಆಹಾರದೊಂದಿಗೆ ಹೊಂದಾಣಿಕೆಯಾಗಬಲ್ಲ ಭಾರತೀಯ ಮಾಲ್ಟ್‌ಗಳನ್ನು ಮೀರಿಸುವಂಥದ್ದು ಯಾವುದೂ ಇಲ್ಲ ಎಂಬುದು ಅನೇಕ ಮಧ್ಯ ಪ್ರಿಯರ ಅನಿಸಿಕೆಯಾಗಿದೆ.
ಇಂದ್ರಿ ದೀಪಾವಳಿ ಕಲೆಕ್ಟರ್ ಎಡಿಷನ್ ಬೆಲೆ ಅಂದಾಜು 421 ಡಾಲರ್ ಅಂದರೆ 34,960 ರೂಪಾಯಿ! ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಿಸ್ಕಿಸ್ ಆಫ್ ಎ ವರ್ಲ್ಡ್ ಅವಾರ್ಡ್ಸ್ ಬ್ಲೈಂಡ್ ಟೇಸ್ಟಿಂಗ್‌ನಲ್ಲಿ ಸ್ಕಾಟಿಷ್ ಮತ್ತು ಅಮೆರಿಕದ ಪ್ರತಿಸ್ಪರ್ಧಿಗಳನ್ನು ಸೋಲಿಸಿ “ಬೆಸ್ಟ್ ಇನ್ ಶೋ” ಪ್ರಶಸ್ತಿಯನ್ನು ಇಂದ್ರಿ ಗೆದ್ದಿದೆ.
ಈ ಸುದ್ದಿಯನ್ನೂ ಓದಿ: Liquor Price : ಕುಡುಕರ ಕಿಕ್ಕಿಳಿಸಿತು ಎಣ್ಣೆ ರೇಟು; 18 ಸ್ಲ್ಯಾಬ್‌ಗಳಿಗೆ ಬಿತ್ತು ಸುಂಕದೇಟು!