ನವ ದೆಹಲಿ: ಭಾರತದಲ್ಲಿ ರೈಲ್ವೆ ಪ್ರವಾಸೋದ್ಯಮ (Indian Tourism) ದೊಡ್ಡ ಹೆಸರು ಪಡೆದಿರುವ ಪ್ರವಾಸೋದ್ಯಮ ಎಂದೇ ಹೇಳಬಹುದು. ರೈಲ್ವೆ ಇಲಾಖೆಯು ಐಆರ್‌ಸಿಟಿಸಿ ಸಹಯೋಗದೊಂದಿಗೆ ಹಲವಾರು ಪ್ರವಾಸಿ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಇತ್ತೀಚೆಗೆ ಕೆಲವು ಹೊಸ ಪ್ಯಾಕೇಜ್‌ಗಳನ್ನು ಆರಂಭಿಸಲಾಗಿದ್ದು, ಅದರ ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: Women’s Day 2023: ಪ್ರವಾಸ ಮಾಡುವ ಮಹಿಳೆಯರಿಗಾಗಿ ಇಲ್ಲಿವೆ ಟಾಪ್ 10 ಸ್ಥಳಗಳು
ಹೊಸದಾಗಿ ಮುಂಬೈನಿಂದ ಭಾರತ್ ಗೌರವ್ ರೈಲು ಪ್ಯಾಕೇಜ್ ಆರಂಭಿಸಲಾಗಿದೆ. ಈ ರೈಲು ಮಾರ್ಚ್ 9ರಂದು ಮುಂಬೈನಿಂದ ಪ್ರಯಾಣ ಆರಂಭಿಸಿದರೆ, ತಿರುಪತಿವರೆಗೆ ತಲುಪಿ ಮಾರ್ಚ್ 19ರಂದು ಮುಂಬೈಗೆ ವಾಪಸು ಬರಲಿದೆ. ಸರ್ಕಾರದ ʼದೇಖೋ ಅಪ್ನಾ ದೇಶ್ʼ ಯೋಜನೆಗೆ ಅನುಗುಣವಾಗಿ ಈ ಪ್ಯಾಕೇಜ್ ಮಾಡಲಾಗಿದೆ. ಮುಂಬೈನಿಂದ ಹೊರಡುವ ರೈಲು, ಕಲ್ಯಾಣ್, ಪುಣೆ, ವಾಡಿ, ಗುಂಟಕಲ್, ಬೆಂಗಳೂರು, ವೈಟ್‌ಫೀಲ್ಡ್, ತಿರುನೆಲ್ವೆಲಿ, ಕೊಚುಲಿಟಿ, ಮಧುರೈ ಮಾರ್ಗವಾಗಿ ರೆನಿಗುಂಟಾಕ್ಕೆ ತಲುಪಲಿದೆ. ವಾಪಸು ಬರುವಾಗ ದಂಡ್, ಪುಣೆ, ಕಲ್ಯಾಣ್ ಮಾರ್ಗವಾಗಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದೆ.
ಭಾರತ್ ಗೌರವ್ ಡಿಲಕ್ಸ್
ಅದಲ್ಲದೆ, ಭಾರತದ ಈಶಾನ್ಯ ರಾಜ್ಯಗಳ ಪ್ರವಾಸಕ್ಕೆಂದೇ ಭಾರತ್ ಗೌರವ್ ಡಿಲಕ್ಸ್ ಪ್ಯಾಕೇಜ್ ಆರಂಭಿಸಲಾಗಿದೆ. ಈ ಪ್ರವಾಸ ಮಾರ್ಚ್ 21 ರಂದು ನವದೆಹಲಿಯ ಸಫ್ದಾರ್ಜಂಗ್ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದೆ. ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರನ್ನು ಅರುಣಾಚಲ ಪ್ರದೇಶ, ಅಸ್ಸಾಂ, ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಸುತ್ತಿಸಲಾಗುವುದು. ಒಟ್ಟು 15 ದಿನಗಳ ಪ್ರವಾಸಿ ಇದಾಗಿದೆ. ಪ್ರವಾಸಿಗರಿಗೆ ಪ್ರಮುಖವಾಗಿ ಶಿವಸಾಗರ್, ಗುವಾಹಟಿ, ಜೋರ್ಹತ್, ಕಜಿರಂಗ, ಅಗಾರ್ತಲಾ, ಉನಕೋತಿ, ಕೊಹಿಮಾ, ಶಿಲ್ಲಾಂಗ್, ಚಿರಾಪುಂಜಿ ಮತ್ತು ದಿಮಾಪುರ ಸ್ಥಳವನ್ನು ತೋರಿಸಲಾಗುವುದು. ಪ್ರವಾಸಿಗರು ದೆಹಲಿ, ಆಲಿಗಢ, ಗಜಿಯಾಬಾದ್, ತುಂಡ್ಲಾ, ಲಕ್ನೋ, ಕಾನ್ಪುರದ ರೈಲು ನಿಲ್ದಾಣದಲ್ಲಿ ಈ ರೈಲನ್ನು ಹತ್ತಬಹುದು ಮತ್ತು ಇಳಿಯಬಹುದಾಗಿದೆ. ಡಿಲಕ್ಸ್ ಎಸಿ ರೈಲಾಗಿರುವ ಇದರಲ್ಲಿ 156 ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶವಿದೆ. ಎರಡು ಅತ್ಯುತ್ತಮ ರೆಸ್ಟೋರೆಂಟ್‌ಗಳು, ಅಡುಗೆಮನೆ, ಸ್ನಾನದ ಮನೆ ಸೇರಿ ಹಲವಾರು ವಿಶೇಷ ಸೌಲಭ್ಯಗಳು ಇದರಲ್ಲಿವೆ.
ಈ ರೈಲಿನಲ್ಲಿ ದರದ ವಿವರ ಈ ಕೆಳಗಿನಂತಿದೆ:
ಎಸಿ 2 ಟೈಯರ್ – 1,06,990 ರೂ.(ಒಬ್ಬರಿಗೆ)
ಎಸಿ 1 ಕ್ಯಾಬಿನ್ – 1,31,990 ರೂ. (ಒಬ್ಬರಿಗೆ)
ಎಸಿ 1 ಕೂಪ್ – 1,49,290 ರೂ.(ಒಬ್ಬರಿಗೆ)