ಜೆಡ್ಡಾ, ಸೌದಿ ಅರೆಬಿಯಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಭಿತ್ತಿ ಪತ್ರವನ್ನು ಪವಿತ್ರ ಕ್ಷೇತ್ರವಾಗಿರುವ ಕಾಬಾ ಮೆಕ್ಕಾದಲ್ಲಿ ಪ್ರದರ್ಶಿಸಿದ ಭಾರತದ ವ್ಯಕ್ತಿಯೊಬ್ಬನನ್ನು ಅರೆಬಿಯಾ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ. 26 ವರ್ಷದ, ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ರಹವಾಸಿ ರಾಝಾ ಖಾದ್ರಿ ಸೌದಿ ಪೊಲೀಸರ ಅತಿಥಿಯಾದ ವ್ಯಕ್ತಿಯಾಗಿದ್ದಾರೆ.
ಭಿತ್ತಿ ಪತ್ರವನ್ನು ಪ್ರದರ್ಶಿಸಿದ್ದು ಮಾತ್ರವಲ್ಲದೇ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ. ಎರಡು ದಿನಗಳ ಬಳಿಕ ಸೌದಿ ಅರೆಬಿಯಾದ ಪೊಲೀಸರು ಖಾದ್ರಿಯನ್ನು ಪತ್ತೆ ಹಚ್ಚಿ, ಹೊಟೇಲ್‌ನಲ್ಲಿ ತಂಗಿದ್ದ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆಂದು ಮೂಲಗಳನ್ನು ಉಲ್ಲೇಖಿಸಿ ತೆಲಂಗಾಣ ಟುಡೇ ವರದಿ ಮಾಡಿದೆ.
ಇದನ್ನೂ ಓದಿ: Shahrukh Khan | ಮೆಕ್ಕಾ ಬಳಿಕ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಶಾರುಖ್ ಖಾನ್: ವಿಡಿಯೊ ವೈರಲ್!
ಸೌದಿ ಅರೆಬಿಯಾದ ಪವಿತ್ರ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಧ್ವಜ, ಭಿತ್ತ ಪತ್ರವನ್ನು ಪ್ರದರ್ಶಿಸುವುದ ಕಾನೂನು ಬಾಹಿರವಾಗಿದೆ. ಈ ಬಗ್ಗೆ ಭಾರತೀಯ ರಾಜಯಭಾರ ಕಚೇರಿಯ ಯಾತ್ರಿಗಳಿಗೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ನೀಡಿರುತ್ತದೆ. ಪವಿತ್ರ ಕ್ಷೇತ್ರದಲ್ಲಿ ಯಾವುದೇ ರೀತಿಯ ಧ್ವಜ ಪ್ರದರ್ಶಿಸಬಾರದು ಎಂದು ಸೂಚಿಸಿರುತ್ತದೆ. ಅಲ್ಲದೇ, ಆ ಜಾಗದಲ್ಲಿ ಬಿದ್ದಿರುವ ಯಾವುದೇ ವಸ್ತುಗಳನ್ನು ಕೂಡ ಎತ್ತಿಕೊಳ್ಳುವಂತಿಲ್ಲ ಎನ್ನಲಾಗುತ್ತಿದೆ.