Site icon Vistara News

Antibiotic Tablet | ವರ್ಷದಲ್ಲಿ 500 ಕೋಟಿ ಮಾತ್ರೆ ನುಂಗಿದ ಭಾರತೀಯರು, ಯಾವ ಮಾತ್ರೆ ಪಾಲು ಹೆಚ್ಚು?

Tablet

ನವದೆಹಲಿ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಮ ಫೇವರಿಟ್‌ ಸ್ನ್ಯಾಕ್‌ ಯಾವುದು ಎಂಬ ಪ್ರಶ್ನೆಗೆ, ಡೋಲೊ-650 ಮಾತ್ರೆ ಎನ್ನುಷ್ಟರಮಟ್ಟಿಗೆ ಹೆಚ್ಚಿನ ಜನ ಅದನ್ನು ಸೇವಿಸುತ್ತಿದ್ದರು. ಹಾಗೆಯೇ, ಭಾರತೀಯರು ಎಷ್ಟರಮಟ್ಟಿಗೆ ಮಾತ್ರೆಗಳಿಗೆ ಅಡಿಕ್ಟ್‌ ಆಗಿದ್ದಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ದೊರೆತಿದೆ. 2019ರಲ್ಲಿ ಭಾರತದಲ್ಲಿ 500 ಕೋಟಿ ಆ್ಯಂಟಿಬಯೋಟಿಕ್‌ (Antibiotic Tablet) ಮಾತ್ರೆ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾತ್ರೆಗಳ ಸೇವನೆ ಪ್ರಮಾಣದ ಕುರಿತು ಲ್ಯಾನ್ಸೆಟ್‌ ರೀಜನಲ್‌ ಹೆಲ್ತ್‌ ಸೌತ್‌ಈಸ್ಟ್‌ ಏಷ್ಯಾ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ. “ಭಾರತದಲ್ಲಿ ಹೆಚ್ಚಿನ ಜನ ಆ್ಯಂಟಿಬಯೋಟಿಕ್‌ ಮಾತ್ರೆಗಳನ್ನು ಸೇವಿಸುತ್ತಾರೆ. 2019ರಲ್ಲಿ 500 ಕೋಟಿ ಆ್ಯಂಟಿಬಯೋಟಿಕ್‌ ಮಾತ್ರೆಗಳನ್ನು ಜನ ನುಂಗಿದ್ದಾರೆ. ಇದರಲ್ಲಿ ಅಜಿತ್ರೊಮೈಸಿನ್‌ (ಅತಿಸಾರ, ಮಲೇರಿಯಾ, ಗಂಟಲಿನ ಊತ, ನ್ಯುಮೋನಿಯಾ ಸೇರಿ ಹಲವು ಕಾಯಿಲೆಗಳಿಗೆ ಬಳಸುವ ಮಾತ್ರೆ) ಪಾಲು ಹೆಚ್ಚಿದೆ” ಎಂದು ಉಲ್ಲೇಖಿಸಲಾಗಿದೆ.

“ದೇಶದ ಒಟ್ಟು ಜನರಲ್ಲಿ ಶೇ.7.6ರಷ್ಟು ಜನ ಅಜಿತ್ರೊಮೈಸಿನ್‌ ಮಾತ್ರೆಗಳನ್ನು ಸೇವಿಸಿದ್ದಾರೆ. ಅತಿ ಹೆಚ್ಚು ಜನ ಸೇವಿಸಿದ ಮಾತ್ರೆಗಳಲ್ಲಿ ಸೇಫಿಕ್ಸಿಮ್‌ 200 ಎಂಜಿ (ಬ್ಯಾಕ್ಟೀರಿಯಾ ಸಂಬಂಧಿ ಕಾಯಿಲೆಗಳಿಗೆ ಬಳಸುವ ಮಾತ್ರೆ) ಎರಡನೇ ಸ್ಥಾನದಲ್ಲಿದೆ. ಶೇ.6.5ರಷ್ಟು ಜನ ಇದನ್ನು ಸೇವಿಸಿದ್ದಾರೆ” ಎಂದು ವರದಿ ತಿಳಿಸಿದೆ.

ಇದನ್ನೂ ಓದಿ | Dolo 65O | ಡೋಲೊ 650 ಮಾತ್ರೆಗಳನ್ನೇ ಸೂಚಿಸಲು ವೈದ್ಯರಿಗೆ ಕಂಪನಿ ಆಮಿಷ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ

Exit mobile version