ನವದೆಹಲಿ: ದೇಶದ ಮೊದಲ ಸೆಮಿ ಹೈಸ್ಪೀಡ್ ಎನಿಸಿರುವ, ದೇಶದ ಮೊದಲ ಪ್ರಾದೇಶಿಕ ರೈಲು ಎಂದೇ ಖ್ಯಾತಿಯಾಗುತ್ತಿರುವ ರ‍್ಯಾಪಿಡ್ ಎಕ್ಸ್ (Rapid X) ರೈಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಅಕ್ಟೋಬರ್ 20) ಚಾಲನೆ ನೀಡಲಿದ್ದಾರೆ. ಸಾಹಿಬಾಬಾದ್ ಹಾಗೂ ದುಹೈ ಡಿಪೋ ನಡುವಿನ 17 ಕಿ.ಮೀ ಪ್ರಯಾಣದ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ಚಾಲನೆ ನೀಡುವ ಮೊದಲು ರೈಲಿಗೆ ‘ನಮೋ ಭಾರತ್’ (Namo Bharat) ಎಂಬುದಾಗಿ ನಾಮಕರಣ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ನಮೋ ಭಾರತ್ ಎಂದು ರ‍್ಯಾಪಿಡ್ ಎಕ್ಸ್ ರೈಲುಗಳಿಗೆ ಹೆಸರಿಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕ ಪವನ್ ಖೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಾರತ ಎಂದಾದರೂ ಏಕೆ ಇಡುತ್ತೀರಿ? ದೇಶದ ಹೆಸರನ್ನೇ ‘ನಮೋ’ ಎಂಬುದಾಗಿ ಬದಲಿಸಿಬಿಡಿ” ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಜೈರಾಮ್ ರಮೇಶ್, “ನಮೋ ಸ್ಟೇಡಿಯಂ ಬಳಿಖ ಈಗ ರೈಲುಗಳಿಗೆ ನಮೋ ಎಂದು ಹೆಸರಿಡಲಾಗಿದೆ. ಇದು ಸ್ವಯಂ ಗೀಳಿಗೆ ಮಿತಿಯೇ ಇಲ್ಲ” ಎಂದಿದ್ದಾರೆ. ನರೇಂದ್ರ ಮೋದಿ ಅವರನ್ನು ಚಿಕ್ಕದಾಗಿ ನಮೋ ಎಂದು ಕೂಡ ಕರೆಯಲಾಗುತ್ತದೆ. ಹಾಗಾಗಿ, ನಮೋ ಭಾರತ್ ಎಂಬುದಾಗಿ ರೈಲುಗಳಿಗೆ ಹೆಸರಿಟ್ಟಿರುವುದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.
After Namo stadium now Namo trains. There is simply no limit to his self-obsession. https://t.co/tEt6zU8h5e
— Jairam Ramesh (@Jairam_Ramesh) October 19, 2023
ಏನಿದು ಆರ್‌ಆರ್‌ಟಿಎಸ್ ಯೋಜನೆ?
ದೆಹಲಿಯಿಂದ ಬೇರೆ ನಗರಗಳಿಗೆ ವೇಗದ ಹಾಗೂ ಅತ್ಯಾಧುನಿಕ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೇ ಪ್ರಾದೇಶಿಕ ಕ್ಷಿಪ್ರ ಸಾಗಣೆ ವ್ಯವಸ್ಥೆ (RRTS) ಆಗಿದೆ. ಸುಮಾರು 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರ‍್ಯಾಪಿಡ್ ಎಕ್ಸ್ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸಲಿದೆ.
ವಿಮಾನಗಳಲ್ಲಿ ಇರುವಂತೆ ಪ್ರತಿಯೊಂದು ಸೀಟ್‌ನಲ್ಲೂ ಹಲವು ಸೌಲಭ್ಯಗಳಿವೆ. ನೀರಿನ ಬಾಟಲಿ ಇಡಲು ಜಾಗ, ಮ್ಯಾಗಜಿನ್ ಹೋಲ್ಡರ್, ಕೋಟ್ ಹ್ಯಾಂಗರ್, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು ಪ್ರತಿ ಪ್ಯಾಸೆಂಜರ್‌ಗೆ ಸಿಗಲಿವೆ. ಪ್ರೀಮಿಯಂ ಕೋಚ್‌ಗಳಲ್ಲಿ ತಿಂಡಿ ಹಾಗೂ ಪಾನೀಯಗಳ ವೆಂಡಿಂಗ್ ಮಷೀನ್ ಕೂಡ ಇರಲಿವೆ.
ಇದನ್ನೂ ಓದಿ: Vande Bharat Train: ಬರಲಿವೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು, ಒಳಗಡೆ ಹೇಗಿದೆ ನೋಡಿ
ಏನಿದು ಆರ್‌ಆರ್‌ಟಿಎಸ್ ಯೋಜನೆ?
ದೆಹಲಿಯಿಂದ ಬೇರೆ ನಗರಗಳಿಗೆ ವೇಗದ ಹಾಗೂ ಅತ್ಯಾಧುನಿಕ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೇ ಪ್ರಾದೇಶಿಕ ಕ್ಷಿಪ್ರ ಸಾಗಣೆ ವ್ಯವಸ್ಥೆ (RRTS) ಆಗಿದೆ. ಸುಮಾರು 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರ‍್ಯಾಪಿಡ್ ಎಕ್ಸ್ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸಲಿದೆ.