Site icon Vistara News

Constitution Day 2022 | ಭಾರತವೇ ಪ್ರಜಾಪ್ರಭುತ್ವದ ತಾಯಿ, ಸಂವಿಧಾನದ ಘನತೆ ಕುರಿತು ಮೋದಿ ಮಾತು

Modi Constitution Day

ನವದೆಹಲಿ: “ವಿಶ್ವಕ್ಕೆ ಭಾರತವೇ ಪ್ರಜಾಪ್ರಭುತ್ವವನ್ನು ನೀಡಿದೆ. ಭಾರತಕ್ಕೆ ಪ್ರಜಾಪ್ರಭುತ್ವವೇ ಶಕ್ತಿಯಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನ ದಿವಸದ (Constitution Day 2022) ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, “ದೇಶದಲ್ಲಿ ಮುಂದಿನ ದಿನಗಳಲ್ಲೂ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ” ಎಂದು ತಿಳಿಸಿದರು.

“ಸಂವಿಧಾನ ದಿವಸವಾದ ಇಂದು ಡಾ.ಬಿ.ಆರ್.ಅಂಬೇಡ್ಕರ್‌ ಅವರು ಸೇರಿ ಸಂವಿಧಾನ ರಚನೆಗೆ ಶ್ರಮಿಸಿದ ಎಲ್ಲ ಮಹನೀಯರಿಗೂ ಗೌರವ ಸಲ್ಲಿಸೋಣ. ಸಂವಿಧಾನದ ಆಶಯಗಳಂತೆಯೇ ಮುನ್ನಡೆಯೋಣ. ಸದ್ಯ, ಜಾಗತಿಕವಾಗಿ ಎಲ್ಲರ ಗಮನ ಭಾರತದತ್ತ ಇದೆ. ನಾವು ವೇಗವಾಗಿ ಏಳಿಗೆ ಹೊಂದುತ್ತಿರುವ ಆರ್ಥಿಕತೆಯನ್ನು ಹೊಂದಿದ್ದೇವೆ. ಇದೆಲ್ಲ ಬಲಿಷ್ಠ ಪ್ರಜಾಪ್ರಭುತ್ವದಿಂದಲೇ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲೂ ಇದೇ ವೇಗ ಕಾಪಾಡಿಕೊಳ್ಳೋಣ” ಎಂದು ಹೇಳಿದರು.

1949ರ ನವೆಂಬರ್‌ 26ರಂದು ದೇಶದ ಸಂವಿಧಾನವನ್ನು ಸಂವಿಧಾನ ರಚನಾ ಸಮಿತಿಯು ಅಂಗೀಕರಿಸಿದ ಸ್ಮರಣಾರ್ಥ ಸಂವಿಧಾನ ದಿವಸವನ್ನು ಆಚರಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಸೇರಿ ಹಲವು ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು. ಇದೇ ವೇಳೆ, ಮೋದಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಇ-ಕೋರ್ಟ್‌ ಯೋಜನೆಗಳಿಗೂ ಚಾಲನೆ ನೀಡಿದರು.

ಇದನ್ನೂ ಓದಿ | Narendra Modi | ದೇಶದ ಮುಂದೆ ಯಾವ ವ್ಯಕ್ತಿ, ಸಂಬಂಧವೂ ಮಿಗಿಲಲ್ಲ, ನರೇಂದ್ರ ಮೋದಿ ಉವಾಚ

Exit mobile version