Site icon Vistara News

Hydrogen Bus: ದೇಶದ ಮೊದಲ ಜಲಜನಕ ಇಂಧನದ ಬಸ್‌ ಕಾರ್ಯಾರಂಭ

hydrogen bus

ಹೊಸದಿಲ್ಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ಇಂದು ಹೊಸದಿಲ್ಲಿಯಲ್ಲಿ ಭಾರತದ ಮೊದಲ ಹಸಿರು (Green fuel) ಹೈಡ್ರೋಜನ್ (ಜಲಜನಕ) ಇಂಧನ ಬಸ್‌ಗೆ (Fuel Cell Hydrogen Bus) ಚಾಲನೆ ನೀಡಿದರು.

ಇದು ಸುಮಾರು 350 ಕಡೆಗಳಲ್ಲಿ ಜಲಜನಕ ಇಂಧನದ ವಿತರಣೆ ಹಾಗೂ ಅದರಿಂದ ಓಡುವ ವಸ್ಸುಗಳ ನಿರ್ವಹಣೆಯ ಮೊದಲ ಉಪಕ್ರಮವಾಗಿದೆ. ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಗುರುತಿಸಲಾದ ಮಾರ್ಗಗಳಲ್ಲಿ ಗ್ರೀನ್ ಹೈಡ್ರೋಜನ್ ಚಾಲಿತ 15 ಫ್ಯುಯೆಲ್ ಸೆಲ್ ಬಸ್‌ಗಳ ಕಾರ್ಯಾಚರಣೆಯ ಪ್ರಯೋಗಗಳನ್ನು ತೈಲ ಕಂಪನಿ ಇಂಡಿಯನ್‌ ಆಯಿಲ್‌ (Indian Oil) ಆರಂಭಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಇಂಡಿಯಾ ಗೇಟ್‌ನಿಂದ ಮೊದಲ ಸೆಟ್ 2 ಇಂಧನ ಸೆಲ್ ಬಸ್‌ಗಳನ್ನು ಪ್ರಾರಂಭಿಸಲಾಗಿದೆ.

ಈ ಹೊಸ ತಂತ್ರಜ್ಞಾನದ ಕಾರ್ಯಕ್ಷಮತೆ ಮತ್ತು ಬಾಳಿಕೆಯ ದೀರ್ಘಾವಧಿಯ ಮೌಲ್ಯಮಾಪನಕ್ಕಾಗಿ ಎಲ್ಲಾ ಬಸ್‌ಗಳಲ್ಲಿ 3 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ಸಂಚಿತ ಮೈಲೇಜ್ ಅನ್ನು ಪಡೆಯಲಾಗುತ್ತದೆ. ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ಉತ್ಪಾದಿಸಲಾದ ಹಸಿರು ಹೈಡ್ರೋಜನ್ ಕಡಿಮೆ ಕಾರ್ಬನ್ ಉಗುಳುವ ಮತ್ತು ಸ್ವಾವಲಂಬಿ ಆರ್ಥಿಕ ಮಾರ್ಗಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೈಡ್ರೋಜನ್‌ ಇಂಧನ ಕೋಶ ತಂತ್ರಜ್ಞಾನವು ಇ-ಮೊಬಿಲಿಟಿ ಮಾದರಿಯಲ್ಲಿ ಪ್ರಮುಖವಾಗಿ ಹೊರಹೊಮ್ಮುತ್ತಿದೆ. ಹೈಡ್ರೋಜನ್ ಅನ್ನು ಇಂಧನ ಕೋಶಗಳಿಗೆ ಇಂಧನವಾಗಿ ಬಳಸಬಹುದು. ಎಲೆಕ್ಟ್ರೋಕೆಮಿಕಲ್ ಕ್ರಿಯೆಯು ಆನೋಡ್‌ನಲ್ಲಿ ಹೈಡ್ರೋಜನ್ ಮತ್ತು ಕ್ಯಾಥೋಡ್‌ನಲ್ಲಿ ಗಾಳಿಯಿಂದ ಆಮ್ಲಜನಕ ಸೇರಿ ನೀರಾಗಿ ಪರಿವರ್ತಿಸುತ್ತದೆ ಮತ್ತು ಎಲೆಕ್ಟ್ರಾನ್‌ಗಳ ರೂಪದಲ್ಲಿ ವಿದ್ಯುತ್ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇತರ ಸೆಲ್‌ಗಳಿಗೆ ಹೋಲಿಸಿದರೆ ಇಂಧನ ಕೋಶಗಳು ಹೆಚ್ಚು ಪರಿಣಾಮಕಾರಿಯಾಗಿವೆ.

ಬ್ಯಾಟರಿ ವಾಹನಗಳಿಗೆ ಹೋಲಿಸಿದರೆ ಇಂಧನ ಕೋಶಗಳ ವಾಹನಗಳ ಬಾಳಿಕೆ ದೀರ್ಘ, ಮತ್ತು ಕಡಿಮೆ ಇಂಧನ ಸಾಕಾಗುತ್ತದೆ. ಹೈಡ್ರೋಜನ್ ಅನಿಲವನ್ನು ಸಿಲಿಂಡರ್‌ಗಳಲ್ಲಿ ಸಂಕುಚಿತಗೊಳಿಸಿ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ.

Green Hydrogen Mission | 19 ಸಾವಿರ ಕೋಟಿ ರೂ. ಮೌಲ್ಯದ ಗ್ರೀನ್‌ ಹೈಡ್ರೋಜನ್‌ ಮಿಷನ್‌ಗೆ ಕೇಂದ್ರ ಅಸ್ತು, ಏನಿದು ಯೋಜನೆ?ಇದನ್ನೂ ಓದಿ:

Exit mobile version