ಬೆಂಗಳೂರು: ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ (Kalpana Chawla Death Anniversary) ನಿಧನರಾಗಿ ಫೆ.1ಕ್ಕೆ 20 ವರ್ಷಗಳಾದವು. ವಿಶ್ವಾದ್ಯಂತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದ ಕಲ್ಪನಾ, ಬಾಹ್ಯಾಕಾಶಕ್ಕೆ ತೆರೆಳಿದ ಭಾರತದ ಮೊದಲ ಮಹಿಳೆ. ಆದರೆ, ಅವರು ಮತ್ತೆ ವಾಪಸ್ ಬರಲೇ ಎನ್ನುವುದು ಮಾತ್ರ ವಿಪರ್ಯಾಸ.
ಕಲ್ಪನಾ ಚಾವ್ಲಾ ಸಹಿತ ಇತರ ಗಗನಯಾತ್ರಿಗಳನ್ನು ಹೊಂದಿದ್ದ ಕೊಲಂಬಿಯಾ ಸ್ಪೇಸ್ ಕ್ರಾಫ್ಟ್ 2003ರ ಫೆಬ್ರವರಿ 1ರಂದು ಭೂಮಿಗೆ ಯಶಸ್ವಿಯಾಗಿ ಇಳಿಬೇಕಿತ್ತು. ಆದರೆ, ಈ ಗಗನ ನೌಕೆ, ಬಾಹ್ಯಾಕಾಶದಿಂದ ಭೂಮಿಯ ವಾತಾವರಣವನ್ನು ಸೇರುತ್ತಿದ್ದಂತೆ ದುರ್ಘಟನೆ ಸಂಭವಿಸಿ, ಕಲ್ಪನಾ ಚಾವ್ಲಾ ಸಹಿತ 6 ಗಗನಯಾತ್ರಿಗಳು ದುರಂತ ಸಾವು ಕಂಡರು.
ಇದನ್ನೂ ಓದಿ: Gaganyaan | ದೇಶದ ಗಗನ ಯಾನಕ್ಕೆ ಬಾಹ್ಯಾಕಾಶದಿಂದಲೇ ಶುಭ ಕೋರಿದ ಇಟಲಿ ಗಗನಯಾತ್ರಿ
ಯುಎಸ್ ಎಂಬೇಸಿ ಟ್ವೀಟ್
ಬಾಹ್ಯಾಕಾಶದಲ್ಲಿ ಭಾರತೀಯ ಮೂಲದ ಮೊದಲ ಮಹಿಳೆ ಕಲ್ಪನಾ ಚಾವ್ಲಾ ಮತ್ತು ಕೊಲಂಬಿಯಾ ಬಾಹ್ಯಾಕಾಶ ನೌಕೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಇತರ ಎಲ್ಲ ಸಿಬ್ಬಂದಿಯನ್ನು ಸ್ಮರಿಸುತ್ತಿದ್ದೇವೆ. ಕಲ್ಪನಾ ಚಾವ್ಲಾ ಅವರ ಪರಂಪರೆಯು ತಮ್ಮ ಕನಸುಗಳನ್ನು ಮುಂದುವರಿಸಲು #WomenInSTEM ಅನ್ನು ಪ್ರೇರೇಪಿಸುತ್ತದೆ ಎಂದು ಭಾರತದಲ್ಲಿ ಅಮೆರಿಕದ ರಾಯಭಾರ ಕಚೇರಿ ಟ್ವೀಟ್ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದೆ.