Site icon Vistara News

Narendra Modi | ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ 81ರಿಂದ 46ನೇ ಸ್ಥಾನಕ್ಕೆ, ಮೋದಿ ಮೆಚ್ಚುಗೆ

BBC Documentary On PM Modi

ನವದೆಹಲಿ: ಭಾರತವು ಜಾಗತಿಕ ನಾವೀನ್ಯತೆ ಸೂಚ್ಯಂಕ (Global Innovation Index)ದಲ್ಲಿ ೮೧ನೇ ಸ್ಥಾನದಿಂದ ೪೬ನೇ ಸ್ಥಾನಕ್ಕೇರಿರುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ. “೨೦೧೪ರ ಬಳಿಕ ದೇಶದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚಿನ ಹೂಡಿಕೆಯಾಗುತ್ತಿದೆ. ವಿಜ್ಞಾನ ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಕಾರಣ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ ಜಿಗಿತ ಕಂಡಿದೆ” ಎಂದಿದ್ದಾರೆ.

ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, “ದೇಶವು ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಮುನ್ನುಗ್ಗುತ್ತಿದೆ. ಅಚ್ಚರಿಯಾದುದನ್ನು ಸೃಷ್ಟಿಸುವಲ್ಲಿ ನಮ್ಮ ವಿಜ್ಞಾನಿಗಳು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅಲ್ಬರ್ಟ್‌ ಐನ್‌ಸ್ಟೀನ್‌, ನಿಕೋಲಾ ಟೆಲ್ಸಾ ಅವರಂತೆ, ಭಾರತದಲ್ಲೂ ಸಿ.ವಿ.ರಾಮನ್‌ ಅವರಂತಹ ಶ್ರೇಷ್ಠ ವಿಜ್ಞಾನಿಗಳು ಇದ್ದರು. ಈಗಲೂ ಚಾಣಾಕ್ಷ ವಿಜ್ಞಾನಿಗಳು ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ” ಎಂದು ಹೇಳಿದರು.

“ವಿಜ್ಞಾನವು ಸಮಾಜ ಹಾಗೂ ಸಂಸ್ಕೃತಿಯಲ್ಲಿಯೂ ಹಾಸುಹೊಕ್ಕಾಗಿದೆ. ಹಾಗಾಗಿಯೇ, ನಮ್ಮಲ್ಲಿ ಸೃಜನಶೀಲತೆ, ನಾವೀನ್ಯತೆಗೆ ಕೊರತೆಯಿಲ್ಲ. ವಿಜ್ಞಾನಿಗಳ ಸಾಧನೆಯನ್ನು ನಾವೆಲ್ಲರೂ ಸಂಭ್ರಮಿಸಬೇಕು. ಇದರಿಂದ ಮತ್ತಷ್ಟು ಸಾಧನೆ, ನಾವೀನ್ಯತೆ ಹೊರಹೊಮ್ಮಲಿದೆ” ಎಂದು ಜನತೆಗೆ ಕರೆ ನೀಡಿದರು.

ಇದನ್ನೂ ಓದಿ | Niti Aayog | ನಾವೀನ್ಯತಾ ಸೂಚ್ಯಂಕ ಬಿಡುಗಡೆ: ಮೂರನೇ ವರ್ಷವೂ ಕರ್ನಾಟಕ ನಂ.1

Exit mobile version