ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಸೇರಿ ಬೇರೆ ರಾಷ್ಟ್ರಗಳು ಯಾವುದೇ ರೀತಿಯ ಸಂಬಂಧ ಹೊಂದಲು ಜಾಗತಿಕ ಸಮುದಾಯದ ಆಕ್ಷೇಪವಿದೆ. ಆಕ್ಷೇಪದ ಹೊರತಾಗಿಯೂ ಭಾರತವು ಉಕ್ರೇನ್‌ನಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲೂ, ಭಾರತದ ಆಮದು ಪ್ರಮಾಣವು (India’s Crude Oil Import) ಕಳೆದ ಫೆಬ್ರವರಿಯಲ್ಲಿ ದಾಖಲೆಯಾಗಿದೆ. ಅದರಲ್ಲೂ, ಸಾಂಪ್ರದಾಯಿಕ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರಗಳಾದ ಇರಾಕ್ ಹಾಗೂ ಸೌದಿ ಅರೇಬಿಯಾಗಿಂತ ಭಾರತವು ರಷ್ಯಾದಿಂದಲೇ ಹೆಚ್ಚು ಆಮದು ಮಾಡಿಕೊಂಡಿದೆ.
ಕಳೆದ ಫೆಬ್ರವರಿಯಲ್ಲಿ ಭಾರತ ನಿತ್ಯ ಸರಾಸರಿ 16 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಕಳೆದ ಐದು ತಿಂಗಳಿಂದಲೂ ಭಾರತ ಆಮದು ಮಾಡಿಕೊಳ್ಳುವ ತೈಲದ ಮೂರನೇ ಒಂದು ಭಾಗದಷ್ಟು ರಷ್ಯಾ ಪೂರೈಕೆ ಮಾಡಿದೆ. ಭಾರತ ಆಮದು ಮಾಡಿಕೊಂಡ ಒಟ್ಟು ತೈಲದಲ್ಲಿ ರಷ್ಯಾದಿಂದ ಆಮದು ಮಾಡಿಕೊಂಡಿದ್ದೇ ಶೇ.35ರಷ್ಟಿದೆ ಎಂದು ವೊರ್ಟೆಕ್ಸಾ ವರದಿ ತಿಳಿಸಿದೆ.
ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಕಚ್ಚಾ ತೈಲ ಆಮದುಮಾಡಿಕೊಳ್ಳುವ ಮೂರನೇ ರಾಷ್ಟ್ರವಾಗಿದೆ. ಚೀನಾ ಹಾಗೂ ಅಮೆರಿಕ ಕ್ರಮವಾಗಿ ಮೊದಲು ಹಾಗೂ ಎರಡನೇ ಸ್ಥಾನದಲ್ಲಿವೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಬಳಿಕ ಜಗತ್ತಿನ ಬಲಿಷ್ಠ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ, ವ್ಯಾಪಾರ ನಿರ್ಬಂಧ ಹೇರಿವೆ. ಇದರ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: Tax on crude oil : ಕಚ್ಚಾ ತೈಲ, ಎಟಿಎಫ್, ಡೀಸೆಲ್ ರಫ್ತಿನ ಮೇಲಿನ ತೆರಿಗೆ ಇಳಿಕೆ