ಲಾಸ್ ವೇಗಸ್: ಭಾರತದ ಸರ್ಗಮ್ ಕೌಶಲ್ (Sargam Koushal) ಅವರಿಗೆ 2022ನೇ ಸಾಲಿನ ಮಿಸೆಸ್ ವರ್ಲ್ಡ್ ಕಿರೀಟ ಲಭಿಸಿದೆ. ಆ ಮೂಲಕ ಭಾರತಕ್ಕೆ 21 ವರ್ಷದ ಬಳಿಕ ಮಿಸೆಸ್ ವರ್ಲ್ಡ್ ಕಿರೀಟ ತಂದ ಖ್ಯಾತಿಗೆ ಸರ್ಗಮ್ ಕೌಶಲ್ ಭಾಜನರಾಗಿದ್ದಾರೆ. ಮಿಸೆಸ್ ಪಾಲಿನೇಷ್ಯಾ ಮೊದಲ ರನ್ನರ್ ಅಪ್ ಹಾಗೂ ಮಿಸೆಸ್ ಕೆನಡಾ ಎರಡನೇ ರನ್ನರ್ ಅಪ್ ಎನಿಸಿದರು.
ಅಮೆರಿಕದ ಲಾಸ್ ವೇಗಸ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸರ್ಗಮ್ ಅವರಿಗೆ ಮಿಸೆಸ್ ಇಂಡಿಯಾ ಕಿರೀಟ ತೊಡಿಸಲಾಗಿದೆ. ಸುಂದರಿಗೆ ಪ್ರಶಸ್ತಿ ಬಂದಿರುವ ಕುರಿತು ದಿ ಗ್ರೇಟ್ ಪೆಜೆಂಟ್ ಕಮ್ಯುನಿಟಿ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದೆ. ಭಾರತಕ್ಕೆ 21 ವರ್ಷದ ಬಳಿಕ ಈ ಪ್ರಶಸ್ತಿ ಲಭಿಸಿದೆ.
ಯಾರಿವರು ಸರ್ಗಮ್ ಕೌಶಲ್?
ಜಮ್ಮು-ಕಾಶ್ಮೀರದವರಾದ ಸರ್ಗಮ್ ಕೌಶಲ್ ಅವರು 2018ರಲ್ಲಿ ಮದುವೆಯಾಗಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿರುವ ಇವರು ರೂಪದರ್ಶಿಯೂ ಆಗಿದ್ದಾರೆ. ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಇವರಿಗೀಗ ವಿಶ್ವ ಕಿರೀಟ ದೊರೆತಿದೆ. ಮದುವೆಯಾದ ಸುಂದರಿಯರಿಗೆ 1984ರಿಂದಲೂ ಮಿಸೆಸ್ ವರ್ಲ್ಡ್ ಪ್ರಶಸ್ತಿ ನೀಡಲಾಗುತ್ತಿದೆ.
21 ವರ್ಷದ ಬಳಿಕ ಕಿರೀಟ
ದೇಶಕ್ಕೆ 21 ವರ್ಷದ ಬಳಿಕ ಮಿಸೆಸ್ ವರ್ಲ್ಡ್ ಕಿರೀಟ ದೊರೆತಿದೆ. 2001ರಲ್ಲಿ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಎನಿಸಿದ್ದರು. ಅಲ್ಲದೆ, ಮಿಸೆಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಮೊದಲ ಮಹಿಳೆ ಎನಿಸಿದ್ದಾರೆ.
ಇದನ್ನೂ ಓದಿ | Sushmita Sen | 15 ವರ್ಷ ಚಿಕ್ಕವನಿಂದ 10 ವರ್ಷ ಹಿರಿಯನವರೆಗೆ ಸರಸಮಯ ಜೀವನ!