Site icon Vistara News

ದೇಶಿ ನಿರ್ಮಿತ ‘ಆ್ಯಂಟಿ ಶಿಪ್ ಮಿಸೈಲ್’ ಯಶಸ್ವಿ ಪರೀಕ್ಷೆ; ನೌಕಾಪಡೆಗೆ ಭೀಮ ಬಲ!

indigenously developed ‘anti-ship missile’ Successfully tested

ನವದೆಹಲಿ: ಕಳೆದ ವರ್ಷ ಮೇ ತಿಂಗಳಲ್ಲಿ ತನ್ನ ಆರಂಭಿಕ ಪ್ರಯೋಗಗಳ ನಂತರ ಭಾರತವು ತನ್ನ ದೇಶಿ ನಿರ್ಮಿತ (indigenously developed missile) ನಾವಲ್ ಆ್ಯಂಟಿ ಶಿಪ್ ಮಿಸೈಲ್ (anti-ship missile) ಎರಡನೇ ಪ್ರಯೋಗವನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿತು. ಈ ಪರೀಕ್ಷೆಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯ (Indian Navy) ನಡುವಿನ ಸಹಯೋಗದ ಪ್ರಯತ್ನವಾಗಿದೆ.

ಡಿಆರ್‌ಡಿಒ ಜತೆಗೂಡಿ ಭಾರತೀಯ ನೌಕಾ ಪಡೆಯು ಮೊದಲ ದೇಶಿ ನಿರ್ಮಿದ ನಾವಲ್ ಆ್ಯಂಡಿ ಶಿಪ್ ಕ್ಷಿಪಣಿಯನ್ನು ನವೆಂಬರ್ 21ರಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಸ್ಥಾಪಿತ ಕ್ಷಿಪಣಿ ತಂತ್ರಜ್ಞಾನದಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ನೌಕಾ ಪಡೆಯು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದೆ. ಅಷ್ಟೇ ಅಲ್ಲದೇ, ಸೀ ಕಿಂಗ್ 42ಬಿ ಹೆಲಿಕಾಪ್ಟರ್‌ನಿಂದ ಕ್ಷಿಪಣಿ ಉಡಾವಣೆ ಮಾಡಿರುವ ದೃಶ್ಯಾವಳಿಯ ವಿಡಿಯೋವನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದೆ.

ಇದಕ್ಕೂ ಮೊದಲು, 2022ರ ಮೇ ತಿಂಗಳಲ್ಲಿ ನಾವಲ್ ಆ್ಯಂಟಿ ಶಿಪ್ ಮಿಸೈಲ್ ಶಾರ್ಟ್ ರೇಂಜ್ (NASM-SR) ಮೊದಲ ಬಾರಿಗೆ ಪ್ರಯೋಗಕ್ಕೆ ಒಳಗಾಗಿತ್ತು. ಒಡಿಶಾ ಕರಾವಳಿಯ ಚಂಡಿಪುರದಲ್ಲಿ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಲ್ಲಿ ಭಾರತೀಯ ನೌಕಾಪಡೆಯ ಸೀ ಕಿಂಗ್ ಹೆಲಿಕಾಪ್ಟರ್‌ನಿಂದ ಕ್ಷಿಪಣಿಯನ್ನು ಹಾರಿಸಲಾಗಿತ್ತು.

ಇದಲ್ಲದೆ, ಭಾರತೀಯ ನೌಕಾಪಡೆಯು 500 ಕಿ.ಮೀ ವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಮೀರಿಸುವಂತಹ ಹೊಸ ಲಾಂಗ್ ರೇಂಜ್ ಆಂಟಿ-ಶಿಪ್ ಕ್ಷಿಪಣಿಯ ಮೊದಲ ಪ್ರಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವುದಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಘೋಷಿಸಿತ್ತು. ಭಾರತ-ರಷ್ಯಾ ಕ್ರೂಸ್ ಕ್ಷಿಪಣಿಯಾಗಿರುವ ಬ್ರಹ್ಮೋಸ್ ಮೂಲತಃ 290 ಕಿ.ಮೀ ವ್ಯಾಪ್ತಿಯನ್ನು ಹೊದಿದೆ. ಈ ಕ್ಷಿಪಣಿಯ ಟಾರ್ಗೆಟ್ ವ್ಯಾಪ್ತಿಯನ್ನು 350 ಕಿ.ಮೀ.ನಿಂದ 400 ಕಿ.ಮೀ.ನವರೆಗೆ ಹೆಚ್ಚಿಸಲಾಗುತ್ತಿದೆ.

ಈ ವರ್ಷದ ಮಾರ್ಚ್‌ನಲ್ಲಿ ಭಾರತೀಯ ನೌಕಾಪಡೆಯು ಐಎನ್‌ಎಸ್ ವಿಶಾಖಪಟ್ಟಣದಿಂದ ಎಂಆರ್‌ಎಸ್‌ಎಎಂ ಕ್ಷಿಪಣಿ (ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ) ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಿತು. ಇದು ಆ್ಯಂಟಿ ಶಿಪ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಮಧ್ಯಮ ವ್ಯಾಪ್ತಿಯ ಮತ್ತು ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯನ್ನು ಡಿಆರ್‌ಡಿಒ ಮತ್ತು ಇಸ್ರೇಲಿ ಏರೋಸ್ಪೇಸ್ ಇಂಡ್‌ಸ್ಟ್ರೀಸ್(ಐಎಐ) ಸಹಯೋಗದೊಂದಿಗೆ ಭಾರತ್ ಡೈನಾಮಿಕ್ಸ್ ಲಿ. ಕಂಪನಿಯಲ್ಲಿ ತಯಾರಿಸಲಾಗಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ: Agni v | ಬೀಜಿಂಗ್ ತಲುಪಬಲ್ಲ ಪರಮಾಣು ಸಾಮರ್ಥ್ಯದ ಅಗ್ನಿ v ಕ್ಷಿಪಣಿ ಪರೀಕ್ಷೆ ಯಶಸ್ವಿ

Exit mobile version