ನವದೆಹಲಿ: ಭಾರತದ (India) ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ (IndiGo) ಕಂಪನಿಯು 500 ಏರ್‌ಬಸ್‌ಗಳನ್ನು (Airbus) ಖರೀದಿಸುವುದಾಗಿ ಹೇಳಿದೆ. ವಿಮಾನಯಾನ ವಲಯದಲ್ಲೇ ಇದು ಅತಿದೊಡ್ಡ ಖರೀದಿಯಾಗಿದೆ. ಇತ್ತೀಚೆಗಷ್ಟೇ ಏರ್ ಇಂಡಿಯಾ (Air India) ಕಂಪನಿಯು 470 ಏರ್‌ಬಸ್‌ಗಳನ್ನು ಖರೀದಿಸುವುದಾಗಿ ಹೇಳಿಕೊಂಡಿತ್ತು. ಈಗ ಇಂಡಿಗೋ ಕಂಪನಿಯು ಏರ್ ಇಂಡಿಯಾ ಖರೀದಿಯನ್ನು ಮುರಿದು, ದಾಖಲೆ ಮಾಡಿದೆ.
ಜೂನ್ 19 ರಂದು ನಡೆದ ಪ್ಯಾರಿಸ್ ಏರ್ ಶೋನಲ್ಲಿ ಇಂಡಿಗೋ ಮಂಡಳಿಯ ಅಧ್ಯಕ್ಷ ವಿ ಸುಮಂತ್ರನ್, ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್, ಏರ್‌ಬಸ್‌ನ ಸಿಇಒ ಗಿಲ್ಲೌಮ್ ಫೌರಿ ಮತ್ತು ಏರ್‌ಬಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಮತ್ತು ಇಂಟರ್‌ನ್ಯಾಶನಲ್ ಕ್ರಿಸ್ಟಿಯನ್ ಸ್ಕೆರೆರ್ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಏರ್ ಬಸ್‌ಗಳ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
500 A320 ಫ್ಯಾಮಿಲಿ ಏರ್‌ಕ್ರಾಫ್ಟ್‌ಗಳ ಖರೀದಿ ಒಪ್ಪಂದವು, ವಾಣಿಜ್ಯ ವಿಮಾನಯಾನ ಇತಿಹಾಸದಲ್ಲಿ ಅತಿದೊಡ್ಡ ಏಕ ಖರೀದಿ ಒಪ್ಪಂದದ ದಾಖಲೆಯಾಗಿದೆ ಎಂದು ಎಂದು ಏರ್‌ಬಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚಿನ ಈ ಒಪ್ಪಂದವು ಇಂಡಿಗೋದಿಂದ ಆರ್ಡರ್ ಮಾಡಿದ ಒಟ್ಟು ಏರ್‌ಬಸ್ ವಿಮಾನಗಳ ಸಂಖ್ಯೆಯನ್ನು 1,330ಕ್ಕೆ ಏರಿಕೆಯಾಗುವಂತೆ ಮಾಡಿದೆ. ಇದು ವಿಶ್ವದ ಅತಿದೊಡ್ಡ A320 ಫ್ಯಾಮಿಲಿ ಏರ್‌ಕ್ರಾಫ್ಟ್ ಗ್ರಾಹಕರಾಗಿ ದಾಖಲೆ ಬರೆದಿದೆ ಎಂದು ಎಂದು ಏರ್‌ಬಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Air India Deal: 250 ವಿಮಾನ ಖರೀದಿಗೆ ಏರ್ ಇಂಡಿಯಾ ಒಪ್ಪಂದ, ಐತಿಹಾಸಿಕ ಎಂದ ಮೋದಿ, ಬೋಯಿಂಗ್ ಜತೆ ಮತ್ತೊಂದು ಡೀಲ್
ಕಳೆದ ಫೆಬ್ರವರಿಯಲ್ಲಿ ಏರ್ ಇಂಡಿಯಾ ಒಡೆತನವನ್ನು ಹೊಂದಿರುವ ಟಾಟಾ ಗ್ರೂಪ್ 470 ಏರ್‌ಬಸ್‌ಗಳ ಖರೀದಿಗೆ ಬೋಯಿಂಗ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ ಟಾಟಾ ಗ್ರೂಪ್ ಒಟ್ಟು 70 ಶತಕೋಟಿ ಡಾಲರ್ ವೆಚ್ಚ ಮಾಡಲು ಮುಂದಾಗಿದೆ. 300ಕ್ಕೂ ಹೆಚ್ಚು ವಿಮಾನಗಳ ಫ್ಲೀಟ್‌ನೊಂದಿಗೆ ಇಂಡಿಗೋ ಪ್ರಸ್ತುತ ದಿನಕ್ಕೆ 1,800ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದೆ. 78 ದೇಶೀಯ ಸ್ಥಳಗಳು ಮತ್ತು 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳನ್ನು ಸಂಪರ್ಕಿಸುತ್ತದೆ. 500 ಏರ್‌ಬಸ್‌ಗಳ ಖರೀದಿಗೆಯೊಂದಿಗೆ ಇಂಡಿಗೋ ಹಾರಾಟದ ಸಾಮರ್ಥ್ಯವೂ ಮತ್ತಷ್ಟು ಹೆಚ್ಚಾಗಲಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.