Site icon Vistara News

S Jaishankar: ಕಾರ್ಯದರ್ಶಿ ಸ್ಥಾನದಿಂದ ನನ್ನ ತಂದೆಯನ್ನು ಕಿತ್ತು ಹಾಕಿದ್ದ ಇಂದಿರಾ ಗಾಂಧಿ: ಸಚಿವ ಜೈಶಂಕರ್

Indira Gandhi removed my father from his post union secretary, Says S JaiShankar

ನವದೆಹಲಿ: 1980ರಲ್ಲಿ ಇಂದಿರಾ ಗಾಂಧಿ (Indira Gandhi) ಅವರು ಅಧಿಕಾರಕ್ಕೆ ಮರಳಿದ ಕೂಡಲೇ ಡಿಫೆನ್ಸ್ ಪ್ರೋಡಕ್ಷನ್ ಕಾರ್ಯದರ್ಶಿಯಾಗಿದ್ದ ನಮ್ಮ ತಂದೆಯನ್ನು ಆ ಸ್ಥಾನದಿಂದ ಕಿತ್ತು ಹಾಕಿದರು. ಅಲ್ಲದೇ, ರಾಜೀವ್ ಗಾಂಧಿ (Rajeev Gandhi) ಪ್ರಧಾನಿಯಾದಾಗ ನನ್ನ ತಂದೆಗಿಂತಲೂ ಜ್ಯೂನಿಯರ್ ಆಗಿದ್ದವರನ್ನು ಸಂಪುಟ ಕಾರ್ಯದರ್ಶಿಯಾಗಿ ನೇಮಕ ಮಾಡಿದರು ಎಂದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಹೇಳಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಜೈಶಂಕರ್, ವಿದೇಶಾಂಗ ಸೇವೆ ನೌಕರಿಯಿಂದ ರಾಜಕಾರಣದವರೆಗಿನ ತಮ್ಮ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಅವರು ಯಾವಾಗಲೂ ಅತ್ಯುತ್ತಮ ಅಧಿಕಾರಿಯಾಗುವ ಕನಸು ಕಂಡಿದ್ದರು ಮತ್ತು ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗುವ ಗುರಿಯಿಟ್ಟುಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಜೈಶಂಕರ್ ಅವರು 2015ರಿಂದ 2018ರವರೆಗೆ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಇದಕ್ಕೂ ಮೊದಲು ಅವರು ಚೀನಾ ಮತ್ತು ಅಮರಿಕ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ರಾಯಭಾರಿಯಾಗಿದ್ದರು. 2011ರಲ್ಲಿ ನಿಧನರಾದ ಜೈಶಂಕರ್ ಅವರ ತಂದೆ, ಕೆ ಸುಬ್ರಹ್ಮಣ್ಯಮ್ ಅವರು ದೇಶದ ಪ್ರಮುಖ ರಾಷ್ಟ್ರೀಯ ಭದ್ರತಾ ನಿಪುಣರಲ್ಲಿ ಒಬ್ಬರು ಎಂದು ಖ್ಯಾತರಾಗಿದ್ದರು.

ಇದನ್ನೂ ಓದಿ: ಯುರೋಪ್ ದೇಶಗಳಿಗೆ ತಮ್ಮ ಸಮಸ್ಯೆ ಜಗತ್ತಿನ ಸಮಸ್ಯೆ ಎಂಬ ಭ್ರಮೆ: ವಿದೇಶಾಂಗ ಸಚಿವ ಜೈ ಶಂಕರ್ ಖಡಕ್‌ ಮಾತು

ನಾನು ಅತ್ಯುತ್ತಮ ವಿದೇಶಿ ಸೇವಾ ಅಧಿಕಾರಿಯಾಗಬೇಕೆಂದು ಬಯಸಿದ್ದೆ. ಅತ್ಯುತ್ತಮ ಎನ್ನುವುದಕ್ಕೆ ನಮ್ಮ ಮನೆಯಲ್ಲಿ ವ್ಯಾಖ್ಯೆ ಇದ್ದದ್ದು ವಿದೇಶಾಂಗ ಕಾರ್ಯದರ್ಶಿಯಾಗುವುದು. ಇದು ನನ್ನ ಮನಸ್ಸಿನಲ್ಲೂ ಇತ್ತು. ನಮ್ಮ ಮನೆಯಲ್ಲಿ ಈ ಬಗ್ಗೆ ಮಾತುಗಳಿದ್ದವು. ಇದನ್ನು ನಾನು ಒತ್ತಡ ಎಂದು ಕರೆಯುವುದಿಲ್ಲ. ನಮ್ಮದು ಅಧಿಕಾರಶಾಹಿ ಮನೆ. ತಂದೆ ಕಾರ್ಯದರ್ಶಿಯಾಗಿದ್ದರು. ಆದರೆ, ಅವರನ್ನುಆ ಸ್ಥಾನದಿಂದ ತೆಗೆದು ಹಾಕಲಾಯಿತು ಎಂದು ಹೇಳಿದರು. ಏತನ್ಮಧ್ಯೆ, ಬಿಜೆಪಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರು ಜೈಶಂಕರ್ ಹೇಳಿಕೆಯನ್ನು ಟೀಕಿಸಿದ್ದಾರೆ.

ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್‌ನಲ್ಲಿ ಏನಿದೆ?

Exit mobile version