ಬೆಂಗಳೂರು: 2022-23ನೇ ಸಾಲಿನಲ್ಲಿ ಇನ್ಫೋಸಿಸ್ (Infosys) ಸುಮಾರು 6 ಸಾವಿರ ಫ್ರೆಶರ್ಸ್ ನೇಮಕ ಮಾಡಿಕೊಂಡಿದೆ. ವಿತ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಈ ಪ್ರಮಾಣವು 50 ಸಾವಿರವರೆಗೂ ತಲುಪಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಮೊದಲರ್ಧ ವರ್ಷದಲ್ಲಿ ಸುಮಾರು 40 ಸಾವಿರ ಫ್ರೆಶರ್ಸ್ ನೇಮಕ ಮಾಡಿಕೊಳ್ಳಲಿದೆ.
ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್ ಅವರು ವರ್ಷದಲ್ಲಿ ಕಂಪನಿಯು ತನ್ನ ವಾರ್ಷಿಕ ಗುರಿಯನ್ನು ಪೂರೈಸಲಿದೆ. ನಾವು ವರ್ಷವನ್ನು ಕೊನೆಗೊಳಿಸುವ ಹೊತ್ತಿಗೆ ನಾವು ಆ ಸಂಖ್ಯೆಯ ಸುತ್ತಲೂ ಇರಬೇಕು ಎಂದು ನಾನು ಭಾವಿಸುತ್ತೇನೆ. ನಾವು ನೇಮಕವನ್ನು ಮುಂದುವರಿಸಿದ್ದೇವೆ ಎಂದು ಅವರು ಹೇಳಿದರು.
ಇನ್ಫೋಸಿಸ್ ಫ್ರೆಶರ್ಸ್ ನೇಮಕ ಮಾಡಿಕೊಂಡು, ತನ್ನ ಮೈಸೂರು ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ನೀಡಿ ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುತ್ತದೆ. ಫ್ರೆಶರ್ಸ್‌ರನ್ನು ನೇಮಕ ಮಾಡಿಕೊಂಡಿದ್ದು, ಅವರಿಗೆ ಕಂಪನಿಯು ಟ್ರೈನಿಂಗ್ ನೀಡಲಾಗುತ್ತಿದೆ. ಇನ್ಫೋಸಿಸ್ ಭಾರತದ ಪ್ರಮುಕ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಕರ್ನಾಟಕದವರೇ ಆದ ನಾರಾಯಣಮೂರ್ತಿ ಅವರು ಈ ಕಂಪನಿಯನ್ನು ಹುಟ್ಟು ಹಾಕಿದ್ದಾರೆ.
ಇದನ್ನೂ ಓದಿ | Infosys | ಇನ್ಫೋಸಿಸ್‌ಗೆ 6,586 ಕೋಟಿ ರೂ. ತ್ರೈಮಾಸಿಕ ನಿವ್ವಳ ಲಾಭ, 13% ಹೆಚ್ಚಳ