Site icon Vistara News

Instagram Down | ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌, ಪೋಸ್ಟ್‌, ರೀಲ್ಸ್‌ ಇಲ್ಲದೆ ಪೇಚಾಡಿದ ಕೋಟ್ಯಂತರ ಜನ

Insta

ನವದೆಹಲಿ: ಫೋಟೊ, ವಿಡಿಯೊ, ರೀಲ್ಸ್‌ ಮಾಡುವವರಿಗೆ, ಮೀಮ್ಸ್‌ಗಳನ್ನು ಪೋಸ್ಟ್‌ ಮಾಡುವವರಿಗೆ ಇನ್‌ಸ್ಟಾಗ್ರಾಮ್‌ ಹೇಳಿಮಾಡಿಸಿದ ಸಾಮಾಜಿಕ ಜಾಲತಾಣ. ಹಾಗಾಗಿಯೇ, ನಿತ್ಯವೂ ಕೋಟ್ಯಂತರ ಜನ ಗಂಟೆಗಟ್ಟಲೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಇರುತ್ತಾರೆ. ಆದರೆ, ಗುರುವಾರ ರಾತ್ರಿ ಏಕಾಏಕಿ ಇನ್‌ಸ್ಟಾಗ್ರಾಮ್‌ ಸರ್ವರ್‌ ಡೌನ್‌ (Instagram Down) ಆಗಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ಇನ್‌ಸ್ಟಾ ಪ್ರಿಯರು ಪೇಚಾಟ ಅನುಭವಿಸಿದ್ದಾರೆ.

ಗುರುವಾರ ರಾತ್ರಿ ೧೦ ಗಂಟೆಗೆ ಕೋಟ್ಯಂತರ ಜನರು ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್‌ ಬಳಸಲು ಆಗಿಲ್ಲ. ಇದರಿಂದ ರೀಲ್ಸ್‌ ಮಾಡುವವರು, ಪೋಸ್ಟ್‌ ಹಾಕುವವರು ಕೆಲ ಕಾಲ ಪೇಚಾಟ ಅನುಭವಿಸಿದ್ದಾರೆ. ಕೆಲವೊಬ್ಬರಿಗೆ ಸಂದೇಶ ಕಳುಹಿಸಲು ಆಗಿಲ್ಲ. ಇನ್ನೂ ಕೆಲವರು ರೀಲ್ಸ್‌ಗಳನ್ನು ಪೋಸ್ಟ್‌ ಮಾಡಲು ಆಗಿಲ್ಲ. ಒಂದಷ್ಟು ಜನರಿಗೆ ಇನ್‌ಸ್ಟಾ ಖಾತೆಯೇ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ ಆಗಿರುವುದನ್ನು ಸಂಸ್ಥೆಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಹಾಗೆಯೇ, ಎರಡು ಗಂಟೆ ಬಳಿಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ತಾಂತ್ರಿಕ ದೋಷಕ್ಕೆ ಕಾರಣ ಏನು ಎಂಬುದಕ್ಕೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಭಾರತದಲ್ಲಿ ೨೩ ಕೋಟಿಗೂ ಅಧಿಕ ಜನ ಇನ್‌ಸ್ಟಾಗ್ರಾಮ್‌ ಬಳಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ | Instagram Bug | ಇನ್‌ಸ್ಟಾಗ್ರಾಮ್‌ನ ತಪ್ಪು ಕಂಡು ಹಿಡಿದ ಭಾರತದ ವಿದ್ಯಾರ್ಥಿಗೆ 38 ಲಕ್ಷ ರೂ. ಪ್ರೈಜ್!

Exit mobile version