Site icon Vistara News

Instagram Outage | ಲಕ್ಷಾಂತರ ಜನರಿಗೆ ಕೈಕೊಟ್ಟ ಇನ್‌ಸ್ಟಾಗ್ರಾಂ, ನಿಮ್ಮ ಅಕೌಂಟ್‌ ವರ್ಕ್‌ ಆಗುತ್ತಿದೆಯೇ?

Instagram Outage

ನವದೆಹಲಿ: ಮೆಟಾ (ಮೊದಲಿನ ಫೇಸ್‌ಬುಕ್‌) ಅಂಗಸಂಸ್ಥೆಗಳಾದ ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂಗೆ ಹಿಡಿದ ಗ್ರಹಣ ಬಿಡುವಂತೆ ಕಾಣುತ್ತಿಲ್ಲ. ಕಳೆದ ವಾರ ವಾಟ್ಸ್‌ಆ್ಯಪ್ ಡೌನ್‌ ಆಗಿ ಜಗತ್ತಿನಾದ್ಯಂತ ಕೋಟ್ಯಂತರ ಜನ ತೊಂದರೆ ಅನುಭವಿಸಿದ ಬೆನ್ನಲ್ಲೇ ಈಗ ಫೋಟೊ ಶೇರಿಂಗ್‌ ಜಾಲತಾಣವಾದ ಇನ್‌ಸ್ಟಾಗ್ರಾಂ (Instagram Outage) ಕೂಡ ಡೌನ್‌ ಆಗಿದೆ.

ಲಕ್ಷಾಂತರ ಜನ ಇನ್‌ಸ್ಟಾಗ್ರಾಂ ಜಾಲತಾಣ ಬಳಕೆಯಲ್ಲಾಗುತ್ತಿರುವ ತೊಂದರೆ ಕುರಿತು ದೂರು ನೀಡಿದ್ದಾರೆ. ಕೆಲವೊಬ್ಬರಿಗೆ ಇ-ಮೇಲ್‌ ಹಾಗೂ ಪಾಸ್‌ವರ್ಡ್‌ ಕೇಳಿ, ಲಾಗ್‌ ಇನ್‌ ಆದರೂ ಜಾಲತಾಣವನ್ನು ಬಳಸಲು ಆಗುತ್ತಿಲ್ಲ. ಇನ್ನೂ ಕೆಲವರಿಗೆ ಇನ್‌ಸ್ಟಾಗ್ರಾಂ ಸ್ಟೋರಿಗಳನ್ನು ವೀಕ್ಷಿಸಲು ಆಗುತ್ತಿಲ್ಲ. ಹೀಗೆ ಸಾಲು ಸಾಲು ಸಮಸ್ಯೆಗಳ ಕುರಿತು ಜನ ದೂರಿದ್ದಾರೆ. ಕಳೆದ ವಾರವೂ ಬ್ರಿಟನ್‌ ಸೇರಿ ಹಲವೆಡೆ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ತೊಂದರೆ ಆಗಿತ್ತು.

ಸ್ಪಷ್ಟನೆ ನೀಡಿದ ಸಂಸ್ಥೆ

ಲಕ್ಷಾಂತರ ಜನರು ಜಾಲತಾಣ ಬಳಕೆಯಲ್ಲಾದ ವ್ಯತ್ಯಯದ ಕುರಿತು ದೂರಿದ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂ ಸ್ಪಷ್ಟನೆ ನೀಡಿದೆ. “ಜನರಿಗೆ ಇನ್‌ಸ್ಟಾಗ್ರಾಂ ಬಳಸಲು ಆಗುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ತಾಂತ್ರಿಕ ತಂಡವು ಈ ಕುರಿತು ಕಾರ್ಯನಿರ್ವಹಿಸುತ್ತಿದೆ. ವ್ಯತ್ಯಯವಾಗಿದ್ದಕ್ಕೆ ಕ್ಷಮೆಯಿರಲಿ” ಎಂದು ಪ್ರತಿಕ್ರಿಯಿಸಿದೆ. ಅಕ್ಟೋಬರ್‌ 25ರಂದು ಎರಡು ಗಂಟೆ ವಾಟ್ಸ್‌ಆ್ಯಪ್ ಡೌನ್‌ ಆಗಿ ಕೋಟ್ಯಂತರ ಜನರಿಗೆ ತೊಂದರೆಯಾಗಿತ್ತು. ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂಗೆ ಮೆಟಾ ಮಾತೃಸಂಸ್ಥೆಯಾಗಿದೆ.

ಇದನ್ನೂ ಓದಿ | Instagram Down | ವಾಟ್ಸ್‌ಆ್ಯಪ್ ಆಯ್ತು, ಈಗ ಇನ್‌ಸ್ಟಾಗ್ರಾಂ ಡೌನ್‌, ರೀಲ್ಸ್‌, ಫೋಟೊ ಇಲ್ಲದೆ ಜನರಿಗೆ ಪೇಚಾಟ

Exit mobile version