Site icon Vistara News

Lakhimpur Kheri Case : ಕೇಂದ್ರ ಸಚಿವರ ಪುತ್ರ ಆಶೀಷ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ (Lakhimpur Kheri Case) ಪ್ರಮುಖ ಆರೋಪಿ, ಕೇಂದ್ರ ಸಚಿವ ಕೇಂದ್ರ ಸಚಿವ ಅಜಯಕುಮಾರ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಕುರಿತು ಜನವರಿ 19ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಜ.19ರಂದು ಜಸ್ಟೀಸ್ ಸೂರ್ಯಕಾಂತ್ ಮತ್ತು ಜಸ್ಟೀಸ್ ಜೆ ಕೆ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠವು, ಲಖೀಂಪುರ ಖೇರಿ ಹಿಂಸಾಚಾರದ ಆರೋಪಿ ಆಶೀಷ್ ಮಿಶ್ರಾ ಜಾಮೀನು ಅರ್ಜಿ ವಿಚಾರಣೆ ನಡೆಸಿ, ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಅಲ್ಲದೇ, ಅಪರಾಧ ಸಾಬೀತಾಗಾದೇ ಅನಿರ್ದಿಷ್ಟಾವಧಿಗೆ ಆರೋಪಿಯನ್ನು ಜೈಲಿನಲ್ಲಿಡುವಂತಿಲ್ಲ ಎದು ಅಭಿಪ್ರಾಯಪಟ್ಟಿತ್ತು.

ಅಂದು ಸುಪ್ರೀಂ ಕೋರ್ಟ್ ಏನು ಹೇಳಿತ್ತು?

ಲಖೀಂಪುರ ಖೇರಿ ಹಿಂಸಾಚಾರದ ನಿಜವಾದ ಬಲಿಪಶುಗಳಾಗಿರುವ ರೈತರು ಜೈಲಿನಲ್ಲಿದ್ದಾರೆ. ಒಂದು ವೇಳೆ, ಆಶೀಷ್ ಮಿಶ್ರಾ ಅವರಿಗೆ ನಾವು ಜಾಮೀನು ನೀಡದಿದ್ದರೆ ಅವರು ಜೈಲಿನಲ್ಲೇ ಉಳಿಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯವು ಜಾಮೀನು ನಿರಾಕರಣೆ ಮಾಡಿದೆ.

ಇದನ್ನೂ ಓದಿ: Lakhimpur Kheri violence | ಅಪರಾಧ ಸಾಬೀತಾಗದೇ ಆರೋಪಿಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡುವಂತಿಲ್ಲ: ಸುಪ್ರೀಂ ಕೋರ್ಟ್

ಜಸ್ಟೀಸ್ ಸೂರ್ಯಕಾಂತ್ ಮತ್ತು ಜಸ್ಟೀಸ್ ಜೆ ಕೆ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠವು, ಲಖೀಂಪುರ ಖೇರಿ ಹಿಂಸಾಚಾರದ ಆರೋಪಿ ಆಶೀಷ್ ಮಿಶ್ರಾ ಜಾಮೀನು ಅರ್ಜಿ ವಿಚಾರಣೆ ನಡೆಸಿ, ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮೊದಲು ವಿಚಾರಣೆ ವೇಳೆ, ಉತ್ತರ ಪ್ರದೇಶ ಸರ್ಕಾರವು ಜಾಮೀನು ನೀಡುವುದನ್ನು ವಿರೋಧಿಸಿತ್ತು.

ಏನಿದು ಪ್ರಕರಣ?

2021 ಅಕ್ಟೋಬರ್ 3ರಂದು ಲಖೀಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಎಸ್‌ಯುವಿ ಹರಿಸಲಾಗಿತ್ತು. ಈ ಎಸ್‌ಯುವಿಯನ್ನು ಆರೋಪಿ ಆಶೀಷ್ ಮಿಶ್ರಾ ಚಲಾಯಿಸುತ್ತಿದ್ದರು. ಈ ಘಟನೆಯಲ್ಲಿ ನಾಲ್ವರು ರೈತರು ಮೃತರಾಗಿದ್ದರು. ಅಲ್ಲದೇ, ರೊಚ್ಚಿಗೆದ್ದ ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಚಾಲಕನನ್ನು ಹೊಡೆದು ಸಾಯಿಸಿದ್ದರು. ಈ ಘಟನೆಯಲ್ಲಿ ಒಬ್ಬ ಪತ್ರಕರ್ತ ಕೂಡ ಮೃತಪಟ್ಟಿದ್ದರು.

Exit mobile version