ಹೈದರಾಬಾದ್: ಸೋಷಿಯಲ್ ಮೀಡಿಯಾಗಳ ವ್ಯಾಪ್ತಿ ಹೆಚ್ಚಿ, ಅದರಲ್ಲಿ ನಕಲಿ/ಸುಳ್ಳು ಸುದ್ದಿಗಳೂ ಹರಡಲು ಪ್ರಾರಂಭವಾದ ನಂತರ ‘ಫ್ಯಾಕ್ಟ್‌ಚೆಕ್ (ಸತ್ಯಶೋಧನೆ-Fact Check Day)’ ಎಂಬುದೊಂದು ಜಾಲವೂ ಶುರುವಾಯಿತು. ಯಾವುದೇ ಫೋಟೋ, ಟ್ವೀಟ್ ಮತ್ತು ಇನ್ನಿತರ ಸೋಷಿಯಲ್ ಮೀಡಿಯಾ ಪೋಸ್ಟ್ಗಳು/ವಿಡಿಯೊಗಳು ತಪ್ಪಾದ ಮಾಹಿತಿಯನ್ನು ಭಿತ್ತರಿಸುತ್ತಿದ್ದರೆ, ಆ ಬಗ್ಗೆ ಸತ್ಯವನ್ನು ಶೋಧಿಸಿ-ಜನರಿಗೆ ತಿಳಿಸುವ ಕೆಲಸವನ್ನು ಅನೇಕ ಮಾಧ್ಯಮಗಳು, ಸಂಸ್ಥೆಗಳು ಈ ಫ್ಯಾಕ್ಟ್ ಚೆಕ್’ ಮೂಲಕ ಮಾಡುತ್ತಿವೆ. ಈಗೀಗ ಫ್ಯಾಕ್ಟ್‌ಚೆಕ್ ಎಂಬ ಪದ ಹೆಚ್ಚೆಚ್ಚು ಬಳಕೆಗೆ ಬರುತ್ತಿದೆ. ಪ್ರತಿವರ್ಷ ಏಪ್ರಿಲ್ 2ರಂದು ಅಂತಾರಾಷ್ಟ್ರೀಯ ಫ್ಯಾಕ್ಟ್‌ಚೆಕ್ ಡೇಯನ್ನು ಆಚರಿಸಲಾಗುತ್ತದೆ.
ಜನರಲ್ಲಿ, ಅದರಲ್ಲೂ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ನಕಲಿ/ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಸತ್ಯಶೋಧಕ (ಫ್ಯಾಕ್ಟ್‌ಚೆಕ್) ದಿನದ ಆಚರಣೆ ಶುರುವಾಗಿದೆ. ವಿಶ್ವದಾದ್ಯಂತ ಇರುವ ಎಲ್ಲ ಫ್ಯಾಕ್ಟ್‌ಚೆಕ್ ಸಂಸ್ಥೆಗಳೂ ಸೇರಿ, ಸಾಧ್ಯವಾದಷ್ಟು ಸತ್ಯವನ್ನೇ ಜನರಿಗೆ ಉಣಬಡಿಸಬೇಕು ಎಂಬ ಮಹದುದ್ದೇಶದಿಂದ 2017ರಿಂದ, ಪ್ರತಿವರ್ಷ ಏಪ್ರಿಲ್ 2ರಂದು ಅಂತಾರಾಷ್ಟ್ರೀಯ ಸತ್ಯ ಶೋಧನಾ ದಿನವನ್ನು ಆಚರಿಸುತ್ತಿವೆ. ಅಂದಿನಿಂದಲೂ ಪತ್ರಕರ್ತರು, ಶಿಕ್ಷಣತಜ್ಞರು, ರಾಜಕೀಯ ನಾಯಕರು, ಸರ್ಕಾರಗಳು, ಆರೋಗ್ಯ ಕಾರ್ಯಕರ್ತರು, ಜಾಹೀರಾತುದಾರರು ಮತ್ತು ಕೆಲವರ್ಗದ ಸಾಮಾನ್ಯ ಜನರೂ ಇದಕ್ಕೆ ಕೈಜೋಡಿಸಿದ್ದಾರೆ. ಪ್ರತಿಯೊಬ್ಬರೂ ತಾವು ಸೋಷಿಯಲ್ ಮೀಡಿಯಾ, ವೆಬ್ಸೈಟ್ಗಳು ಅಥವಾ ಇನ್ಯಾವುದೇ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಹಂಚಿಕೊಳ್ಳುತ್ತಿರುವ ಮಾಹಿತಿ ಸತ್ಯವಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಸುಳ್ಳುಸುದ್ದಿಗಳನ್ನು ಯಾರೂ, ಯಾರಿಗೂ ಕೊಡಬಾರದು ಎಂಬ ಸದಾಶಯವನ್ನು ಅಂತಾರಾಷ್ಟ್ರೀಯ ಫ್ಯಾಕ್ಟ್‌ಚೆಕ್ ದಿನ ಒಳಗೊಂಡಿದೆ.
ಪ್ರಸಕ್ತ ವರ್ಷ, ಉಕ್ರೇನ್-ರಷ್ಯಾ ನಡುವಿನ ಯುದ್ಧದ ವಿಷಯದಲ್ಲಿ ಜಗತ್ತಿನಾದ್ಯಂತ ಹರಡುತ್ತಿರುವ ತಪ್ಪು ಸುದ್ದಿಗಳ ಮೇಲೆ ಫ್ಯಾಕ್ಟ್‌ಚೆಕ್ ದಿನವನ್ನು ಕೇಂದ್ರೀಕರಿಸಲಾಗಿದೆ. ‘ಉಕ್ರೇನ್-ರಷ್ಯಾ ಯುದ್ಧಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷಗಳಿಂದಲೂ ಹಲವು ಸುಳ್ಳು ಸುದ್ದಿಗಳು ಹರಡುತ್ತಿವೆ. ಹೀಗಾಗಿ 2022ರ ಫ್ಯಾಕ್ಟ್ ಚೆಕ್ ದಿನವೂ ಕೂಡ ಇದೇ ವಿಷಯವನ್ನು ಮುಖ್ಯವಾಗಿಟ್ಟುಕೊಳ್ಳಲಾಗಿತ್ತು. ಅದಕ್ಕೂ ಹಿಂದಿನ ವಿಷಯಗಳಲ್ಲಿ ಕೊರೊನಾ ಸಾಂಕ್ರಾಮಿಕದ ವಿಚಾರದಲ್ಲಿ ಹರಡುತ್ತಿದ್ದ ಸುಳ್ಳು ಸುದ್ದಿಗಳ ಬಗ್ಗೆ ಸತ್ಯ ತಿಳಿಸುವ ಥೀಮ್ ಇಟ್ಟುಕೊಳ್ಳಲಾಗಿತ್ತು.
ಇದನ್ನೂ ಓದಿ: Fact Check : ಮುದ್ರಾ ಯೋಜನೆಯಡಿ 1 ಲಕ್ಷ ರೂ. ಸಾಲ ಕೊಡುವುದು ಸತ್ಯವೇ? ಇಲ್ಲಿದೆ ಫ್ಯಾಕ್ಟ್‌ಚೆಕ್