Fact Check Day: ಅಂತಾರಾಷ್ಟ್ರೀಯ ಫ್ಯಾಕ್ಟ್​ಚೆಕ್​ ದಿನ ಇಂದು; ಸುಳ್ಳು-ನಕಲಿ ಸುದ್ದಿಗಳ ಹರಡುವಿಕೆ ತಡೆಯೋಣ - Vistara News

ದೇಶ

Fact Check Day: ಅಂತಾರಾಷ್ಟ್ರೀಯ ಫ್ಯಾಕ್ಟ್​ಚೆಕ್​ ದಿನ ಇಂದು; ಸುಳ್ಳು-ನಕಲಿ ಸುದ್ದಿಗಳ ಹರಡುವಿಕೆ ತಡೆಯೋಣ

International fact check day 2023: ಪ್ರಸಕ್ತ ವರ್ಷ, ಉಕ್ರೇನ್​-ರಷ್ಯಾ ನಡುವಿನ ಯುದ್ಧದ ವಿಷಯದಲ್ಲಿ ಜಗತ್ತಿನಾದ್ಯಂತ ಹರಡುತ್ತಿರುವ ತಪ್ಪು ಸುದ್ದಿಗಳ ಮೇಲೆ ಫ್ಯಾಕ್ಟ್​​ಚೆಕ್​ ದಿನವನ್ನು ಕೇಂದ್ರೀಕರಿಸಲಾಗಿದೆ.

VISTARANEWS.COM


on

Fact Check
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್: ಸೋಷಿಯಲ್​ ಮೀಡಿಯಾಗಳ ವ್ಯಾಪ್ತಿ ಹೆಚ್ಚಿ, ಅದರಲ್ಲಿ ನಕಲಿ/ಸುಳ್ಳು ಸುದ್ದಿಗಳೂ ಹರಡಲು ಪ್ರಾರಂಭವಾದ ನಂತರ ‘ಫ್ಯಾಕ್ಟ್​ಚೆಕ್​ (ಸತ್ಯಶೋಧನೆ-Fact Check Day)’ ಎಂಬುದೊಂದು ಜಾಲವೂ ಶುರುವಾಯಿತು. ಯಾವುದೇ ಫೋಟೋ, ಟ್ವೀಟ್​ ಮತ್ತು ಇನ್ನಿತರ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳು/ವಿಡಿಯೊಗಳು ತಪ್ಪಾದ ಮಾಹಿತಿಯನ್ನು ಭಿತ್ತರಿಸುತ್ತಿದ್ದರೆ, ಆ ಬಗ್ಗೆ ಸತ್ಯವನ್ನು ಶೋಧಿಸಿ-ಜನರಿಗೆ ತಿಳಿಸುವ ಕೆಲಸವನ್ನು ಅನೇಕ ಮಾಧ್ಯಮಗಳು, ಸಂಸ್ಥೆಗಳು ಈ ಫ್ಯಾಕ್ಟ್​ ಚೆಕ್​’ ಮೂಲಕ ಮಾಡುತ್ತಿವೆ. ಈಗೀಗ ಫ್ಯಾಕ್ಟ್​ಚೆಕ್​ ಎಂಬ ಪದ ಹೆಚ್ಚೆಚ್ಚು ಬಳಕೆಗೆ ಬರುತ್ತಿದೆ. ಪ್ರತಿವರ್ಷ ಏಪ್ರಿಲ್​ 2ರಂದು ಅಂತಾರಾಷ್ಟ್ರೀಯ ಫ್ಯಾಕ್ಟ್​ಚೆಕ್​ ಡೇಯನ್ನು ಆಚರಿಸಲಾಗುತ್ತದೆ.

ಜನರಲ್ಲಿ, ಅದರಲ್ಲೂ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ನಕಲಿ/ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಸತ್ಯಶೋಧಕ (ಫ್ಯಾಕ್ಟ್​ಚೆಕ್​) ದಿನದ ಆಚರಣೆ ಶುರುವಾಗಿದೆ. ವಿಶ್ವದಾದ್ಯಂತ ಇರುವ ಎಲ್ಲ ಫ್ಯಾಕ್ಟ್​ಚೆಕ್​ ಸಂಸ್ಥೆಗಳೂ ಸೇರಿ, ಸಾಧ್ಯವಾದಷ್ಟು ಸತ್ಯವನ್ನೇ ಜನರಿಗೆ ಉಣಬಡಿಸಬೇಕು ಎಂಬ ಮಹದುದ್ದೇಶದಿಂದ 2017ರಿಂದ, ಪ್ರತಿವರ್ಷ ಏಪ್ರಿಲ್​ 2ರಂದು ಅಂತಾರಾಷ್ಟ್ರೀಯ ಸತ್ಯ ಶೋಧನಾ ದಿನವನ್ನು ಆಚರಿಸುತ್ತಿವೆ. ಅಂದಿನಿಂದಲೂ ಪತ್ರಕರ್ತರು, ಶಿಕ್ಷಣತಜ್ಞರು, ರಾಜಕೀಯ ನಾಯಕರು, ಸರ್ಕಾರಗಳು, ಆರೋಗ್ಯ ಕಾರ್ಯಕರ್ತರು, ಜಾಹೀರಾತುದಾರರು ಮತ್ತು ಕೆಲವರ್ಗದ ಸಾಮಾನ್ಯ ಜನರೂ ಇದಕ್ಕೆ ಕೈಜೋಡಿಸಿದ್ದಾರೆ. ಪ್ರತಿಯೊಬ್ಬರೂ ತಾವು ಸೋಷಿಯಲ್ ಮೀಡಿಯಾ, ವೆಬ್​ಸೈಟ್​ಗಳು ಅಥವಾ ಇನ್ಯಾವುದೇ ಡಿಜಿಟಲ್​ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಳ್ಳುತ್ತಿರುವ ಮಾಹಿತಿ ಸತ್ಯವಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಸುಳ್ಳುಸುದ್ದಿಗಳನ್ನು ಯಾರೂ, ಯಾರಿಗೂ ಕೊಡಬಾರದು ಎಂಬ ಸದಾಶಯವನ್ನು ಅಂತಾರಾಷ್ಟ್ರೀಯ ಫ್ಯಾಕ್ಟ್​ಚೆಕ್​ ದಿನ ಒಳಗೊಂಡಿದೆ.

ಪ್ರಸಕ್ತ ವರ್ಷ, ಉಕ್ರೇನ್​-ರಷ್ಯಾ ನಡುವಿನ ಯುದ್ಧದ ವಿಷಯದಲ್ಲಿ ಜಗತ್ತಿನಾದ್ಯಂತ ಹರಡುತ್ತಿರುವ ತಪ್ಪು ಸುದ್ದಿಗಳ ಮೇಲೆ ಫ್ಯಾಕ್ಟ್​​ಚೆಕ್​ ದಿನವನ್ನು ಕೇಂದ್ರೀಕರಿಸಲಾಗಿದೆ. ‘ಉಕ್ರೇನ್​-ರಷ್ಯಾ ಯುದ್ಧಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷಗಳಿಂದಲೂ ಹಲವು ಸುಳ್ಳು ಸುದ್ದಿಗಳು ಹರಡುತ್ತಿವೆ. ಹೀಗಾಗಿ 2022ರ ಫ್ಯಾಕ್ಟ್​ ಚೆಕ್​ ದಿನವೂ ಕೂಡ ಇದೇ ವಿಷಯವನ್ನು ಮುಖ್ಯವಾಗಿಟ್ಟುಕೊಳ್ಳಲಾಗಿತ್ತು. ಅದಕ್ಕೂ ಹಿಂದಿನ ವಿಷಯಗಳಲ್ಲಿ ಕೊರೊನಾ ಸಾಂಕ್ರಾಮಿಕದ ವಿಚಾರದಲ್ಲಿ ಹರಡುತ್ತಿದ್ದ ಸುಳ್ಳು ಸುದ್ದಿಗಳ ಬಗ್ಗೆ ಸತ್ಯ ತಿಳಿಸುವ ಥೀಮ್​​ ಇಟ್ಟುಕೊಳ್ಳಲಾಗಿತ್ತು.

ಇದನ್ನೂ ಓದಿ: Fact Check : ಮುದ್ರಾ ಯೋಜನೆಯಡಿ 1 ಲಕ್ಷ ರೂ. ಸಾಲ ಕೊಡುವುದು ಸತ್ಯವೇ? ಇಲ್ಲಿದೆ ಫ್ಯಾಕ್ಟ್‌ಚೆಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

VK Pandian: ಉತ್ತರಾಧಿಕಾರಿ ವದಂತಿ ಬೆನ್ನಲ್ಲೇ ವಿ.ಕೆ.ಪಾಂಡಿಯನ್‌ ರಾಜಕೀಯ ನಿವೃತ್ತಿ; ಬಿಜೆಡಿ ಸೋಲಿಗೆ ಹೊಣೆ ಹೊತ್ತು ವಿದಾಯ!

VK Pandian: ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದ್ದು, ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ 14 ಕ್ಷೇತ್ರಗಳಲ್ಲಿ ಗೆದ್ದಿದೆ. ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಡಿ ಹಿನ್ನಡೆ ಅನುಭವಿಸಿದೆ. ಹಾಗಾಗಿ, ವಿ.ಕೆ.ಪಾಂಡಿಯನ್‌ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

VK Pandian
Koo

ಭುವನೇಶ್ವರ: ಒಡಿಶಾ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾದಳ ಪಕ್ಷವು (BJD) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ (Naveen Patnaik) ಅವರ ಆಪ್ತ, ಬಿಜೆಡಿ ನಾಯಕ ವಿ.ಕೆ. ಪಾಂಡಿಯನ್‌ (VK Pandian) ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಅವರಿಗೆ ವಿ.ಕೆ. ಪಾಂಡಿಯನ್‌ ಅವರೇ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ವಿ.ಕೆ.ಪಾಂಡಿಯನ್‌ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.

“ನವೀನ್‌ ಪಟ್ನಾಯಕ್‌ ಅವರಿಗೆ ನೆರವು ನೀಡಬೇಕು, ಅವರ ಜತೆ ನಿಲ್ಲಬೇಕು ಎಂಬ ಒಂದೇ ಕಾರಣದಿಂದ ನಾನು ರಾಜಕೀಯ ಪ್ರವೇಶಿಸಿದೆ. ಆದರೆ, ನಾನೀಗ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ. ನನ್ನ ರಾಜಕೀಯ ಪಯಣದಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ, ಅದಕ್ಕೆ ಕ್ಷಮೆಯಾಚಿಸುತ್ತೇನೆ. ಚುನಾವಣೆ ಪ್ರಚಾರದಲ್ಲಿ ನನ್ನ ವಿರುದ್ಧ ಅಭಿಯಾನ ಶುರುವಾಗಿ, ಅದು ಪಕ್ಷದ ಸೋಲಿಗೆ ಕಾರಣವಾಗಿದ್ದರೆ ಅದಕ್ಕೂ ಕ್ಷಮೆಯಾಚಿಸುತ್ತೇನೆ. ಬಿಜು ಪರಿವಾರಕ್ಕೂ ನಾನು ಕ್ಷಮೆ ಕೇಳುತ್ತೇನೆ” ಎಂದು ಅವರು ಹೇಳಿದ್ದಾರೆ.

ನವೀನ್ ಪಟ್ನಾಯಕ್‌ ಅವರಿಗೆ ವಿ.ಕೆ. ಪಾಂಡಿಯನ್‌ ಅವರು ತುಂಬ ಆಪ್ತರಾಗಿದ್ದರು. ನವೀನ್‌ ಪಟ್ನಾಯಕ್‌ ಅವರ ವಯಸ್ಸಿನ ಕಾರಣದಿಂದಾಗಿ ವಿ.ಕೆ.ಪಾಂಡಿಯನ್‌ ಅವರೇ ಬಿಜೆಡಿಯ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಚುನಾವಣೆ ಪ್ರಚಾರದ ವೇಳೆ, ಬಿಜೆಪಿ ಗೆದ್ದರೆ ಒಡಿಶಾ ಮೂಲದವರೇ ಸಿಎಂ ಆಗುತ್ತಾರೆ ಎಂದಿದ್ದರು. ವಿ.ಕೆ.ಪಾಂಡಿಯನ್‌ ಅವರು ತಮಿಳು ಮೂಲದವರಾದ ಕಾರಣ ಮೋದಿ ಪರೋಕ್ಷವಾಗಿ ತಿರುಗೇಟು ನೀಡಿದ್ದರು.

ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದ್ದು, ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ 14 ಕ್ಷೇತ್ರಗಳಲ್ಲಿ ಗೆದ್ದಿದೆ. ಒಡಿಶಾದ 21 ಲೋಕಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಡಿಯು ತೀವ್ರ ಮುಖಭಂಗ ಅನುಭವಿಸಿದೆ. 21 ಕ್ಷೇತ್ರಗಳ ಪೈಕಿ ಬಿಜೆಪಿಯು 20 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 1 ಕ್ಷೇತ್ರದಲ್ಲಿ ಗೆದ್ದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಡಿ ಈ ಬಾರಿ ಒಂದೂ ಕ್ಷೇತ್ರ ಗೆದ್ದಿಲ್ಲ.

ಇದನ್ನೂ ಓದಿ: Odisha: ಒಡಿಶಾದಲ್ಲಿ ಬಿಜೆಪಿಗೆ ಗೆಲುವು; ಸಿಎಂ ರೇಸ್‌ನಲ್ಲಿದ್ದಾರೆ ಐವರು ನಾಯಕರು, ಯಾರವರು?

Continue Reading

ಉದ್ಯೋಗ

Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆಗೆ ಜೂ. 13 ಕೊನೆಯ ದಿನ

Job Alert: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಪ್ರೊಫೆಸರ್, ಟ್ರೈನಿಂಗ್ ಆಫೀಸರ್, ಎಂಜಿನಿಯರ್ ಮತ್ತು ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೇರಿ ಸುಮಾರು 312 ಹುದ್ದೆಗಳಿವೆ. ಪದವಿ, ಡಿಪ್ಲೋಮಾ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 13.

VISTARANEWS.COM


on

Job Alert
Koo

ನವದೆಹಲಿ: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಪ್ರೊಫೆಸರ್, ಟ್ರೈನಿಂಗ್ ಆಫೀಸರ್, ಎಂಜಿನಿಯರ್ ಮತ್ತು ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೇರಿ ಸುಮಾರು 312 ಹುದ್ದೆಗಳಿವೆ (UPSC Specialist Grade III, Assistant Director Grade-II & Other Recruitment 2024). ಪದವಿ, ಡಿಪ್ಲೋಮಾ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 13. ಅಪ್ಲಿಕೇಶನ್‌ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ ಜೂನ್‌ 14 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಉಪ ಅಧೀಕ್ಷಕ ಪುರಾತತ್ವ ರಸಾಯನ ಶಾಸ್ತ್ರಜ್ಞ – 4 ಹುದ್ದೆ, ವಿದ್ಯಾರ್ಹತೆ- ಪದವಿ / ಸ್ನಾತಕೋತ್ತರ ಪದವಿ (ರಸಾಯನ ಶಾಸ್ತ್ರ)
ಉಪ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ – 67 ಹುದ್ದೆ, ವಿದ್ಯಾರ್ಹತೆ- ಪಿಜಿ (ಪುರಾತತ್ವಶಾಸ್ತ್ರ / ಭಾರತೀಯ ಇತಿಹಾಸ)
ಸಿವಿಲ್ ಹೈಡ್ರೋಗ್ರಾಫಿಕ್ ಆಫೀಸರ್, ಇಂಟಿಗ್ರೇಟೆಡ್ ಹೆಡ್‌ಕ್ವಾರ್ಟಸ್‌ (ನೌಕಾಪಡೆ) – 4 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಫೋರೆನ್ಸಿಕ್ ಮೆಡಿಸಿನ್) – 6 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಮೆಡಿಸಿನ್) – 61 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಸರ್ಜರಿ) – 39 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ ನೆಫ್ರಾಲಜಿ) 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ಸ್) – 23 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್-3 (ಅನಸ್ತೇಶಿಯಾಲಜಿ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಡರ್ಮಟಾಲಜಿ, ವೆನೆರಿಯಾಲಜಿ ಮತ್ತು ಕುಷ್ಠರೋಗ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಮೆಡಿಸಿನ್) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಸರ್ಜರಿ) – 7 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ರಸೂತಿ ಮತ್ತು ಜ್ಞಾನಶಾಸ್ತ್ರ) – 5 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ನೇತ್ರಶಾಸ್ತ್ರ) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಆರ್ಥೋಪೆಡಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 ಓಟೊ-ರೈನೋ-ಲಾರಿಂಗಲಜಿ (ಕಿವಿ, ಮೂಗು ಮತ್ತು ಗಂಟಲು) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪೀಡಿಯಾಟ್ರಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ಯಾಥಾಲಜಿ) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಸೈಕಿಯಾಟ್ರಿ) – 1 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಟೆಕ್ನಿಕಲ್) (ಡಿಸಿಐಒ / ಟೆಕ್) 9 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸಹಾಯಕ ನಿರ್ದೇಶಕರು (ತೋಟಗಾರಿಕೆ) 4 ಹುದ್ದೆ, ವಿದ್ಯಾರ್ಹತೆ ಎಂಎಸ್‌ಸಿ ತೋಟಗಾರಿಕೆ
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಕೆಮಿಕಲ್) 5 ಹುದ್ದೆ, ವಿದ್ಯಾರ್ಹತೆ: ಡಿಪದವಿ (ಸಂಬಂಧಿತ ವಿಭಾಗ)/ ಪಿಜಿ (ರಸಾಯನಶಾಸ್ತ್ರ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಆಹಾರ) 19 ಹುದ್ದೆ, ವಿದ್ಯಾರ್ಹತೆ: ಪದವಿ (ಫುಡ್ ಟೆಕ್ನಾಲಜಿ)/ ಪಿಜಿ ಡಿಪ್ಲೋಮಾ (ಫ್ರೂಟ್ಸ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಹೊಸೇರಿ) 12 ಹುದ್ದೆ, ವಿದ್ಯಾರ್ಹತೆ: ಪದವಿ (ಟೆಕ್ಸ್ ಟೈಲ್ ಟೆಕ್ನಾಲಜಿ ಅಥವಾ ಹೋಸಿಯರಿ ಟೆಕ್ನಾಲಜಿ ಅಥವಾ ನೈಟಿಂಗ್‌ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಲೆದರ್ & ಪಾದರಕ್ಷೆ) – 8 ಹುದ್ದೆ, ವಿದ್ಯಾರ್ಹತೆ: ಪದವಿ (ಲೆದರ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಮೆಟಲ್ ಫಿನಿಶಿಂಗ್) – 2 ಹುದ್ದೆ, ವಿದ್ಯಾರ್ಹತೆ: ಪದವಿ (ಕೆಮಿಕಲ್)
ಟೆಕ್ನಾಲಜಿ ಅಥವಾ ಕೆಮಿಕಲ್ ಎಂಜಿನಿಯರಿಂಗ್) / ಪಿಜಿ (ಕೆಮಿಸ್ಟ್ರಿ)
ಎಂಜಿನಿಯರ್ ಮತ್ತು ಹಡಗು ಸರ್ವೇಯರ್ ಕಮ್-ಡೆಪ್ಯುಟಿ ಡೈರೆಕ್ಟರ್ ಜನರಲ್ (ಟೆಕ್ನಿಕಲ್) – 2 ಹುದ್ದೆ, ವಿದ್ಯಾರ್ಹತೆ: ಮೆರೈನ್ ಎಂಜಿನಿಯರ್ ಆಫೀಸರ್ ಕ್ಲಾಸ್ -1ರ ಪ್ರಮಾಣ ಪತ್ರ
ತರಬೇತಿ ಅಧಿಕಾರಿ (ಮಹಿಳಾ ತರಬೇತಿ)- ಉಡುಪು ತಯಾರಿಕೆ – 5 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – ಎಲೆಕ್ಟ್ರಾನಿಕ್ ಮಕಾನಿಕ್ – 3 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ಅಸಿಸ್ಟೆಂಟ್‌ ಫೊಫೆಸರ್‌ – 1 ಹುದ್ದೆ, ವಿದ್ಯಾರ್ಹತೆ: ಎಂ.ಸಿ.ಎಚ್. ಯುರಾಲಜಿ ಅಥವಾ ಡಿಎನ್‌ಬಿ (ಯುರಾಲಜಿ)

ಅರ್ಜಿ ಶುಲ್ಕ ಮತ್ತು ವಯೋಮಿತಿ

ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗ ಅಭ್ಯರ್ಥಿಗಳಿ 25 ರೂ. ಪಾವತಿಸಬೇಕು. ಮೀಸಲಾತಿ ಹೊಂದಿರುವವರಿಗೆ ಅರ್ಜಿ ಶುಲ್ಕವಿಲ್ಲ. ಇನ್ನು ಒಂದೊಂದು ಹುದ್ದೆಗೆ ಒಂದೊಂದು ರೀತಿಯ ವಯೋಮಾನ ನಿಗದಿಪಡಿಸಲಾಗಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಬರೋಬ್ಬರಿ 9,923 ಬ್ಯಾಂಕ್‌ ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್‌; ಇಂದೇ ಅರ್ಜಿ ಸಲ್ಲಿಸಿ

Continue Reading

ದೇಶ

Modi 3.0 Cabinet: ಪ್ರಧಾನಿಯಾಗಿ ಮೋದಿ ಐದು ವರ್ಷ ಪೂರೈಸುತ್ತಾರಾ? ಜ್ಯೋತಿಷಿಗಳು ಹೇಳುವುದು ಹೀಗೆ

Modi 3.0 Cabinet: ಇಂದು ಸಂಜೆ 7.15ಕ್ಕೆ ಮೋದಿ ಪದಗ್ರಹಣ ನಡೆಯಲಿದೆ. ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುತ್ತಿರುವ ಇಂದಿನ ದಿನ ಹೇಗಿದೆ. ಜೋತಿಷ್ಯದ ಪ್ರಕಾರ ಇಂದಿನ ದಿನ ವಿಶೇಷ ಹೇಗಿದೆ ಎನ್ನುವುದನ್ನು ನೋಡುವುದಾದರೆ ಈ ದಿನ ಜ್ಯೇಷ್ಠ ಮಾಸದ ಶುದ್ಧ ತದಿಗೆ ಪುನರ್ವಸು ನಕ್ಷತ್ರ. ಈ ದಿನ ಸಂಜೆ 7.15 ಕ್ಕೆ ವೃಶ್ಚಿಕ ಲಗ್ನದಲ್ಲಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭ ನಡೆಯುತ್ತಿದೆ.

VISTARANEWS.COM


on

Modi 3.0 Cabinet
Koo

ನವದೆಹಲಿ: ನರೇಂದ್ರ ಮೋದಿ(Modi 3.0 Cabinet) ಮೂರನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಲು ಇನ್ನೇನು ಕ್ಷಣಗಣನೆ ಶುರುವಾಗಿದೆ. ಸಂಜೆ 7.15ಕ್ಕೆ ಪ್ರಮಾಣವಚನ(Modi’s swearing-in) ಕಾರ್ಯಕ್ರಮ ಆರಂಭವಾಗಲಿದೆ. ನೆರೆಯ 7 ರಾಷ್ಟ್ರಗಳ ಗಣ್ಯರು ಸೇರಿದಂತೆ ಒಟ್ಟು 10,000ಕ್ಕೂ ಅಧಿಕ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಯಾವ್ಯಾವ ರೀತಿಯ ವ್ಯವಸ್ಥೆ ಮಾಡಲಾಗಿದೆ? ಇನ್ನು ಪ್ರಧಾನಿ ಮೋದಿ ಐದು ವರ್ಷಗಳನ್ನು ಪೂರೈಸುತ್ತಾರೋ..ಇಲ್ಲವೋ ಎಂಬ ಬಗ್ಗೆ ಜ್ಯೋತಿಷಿಗಳು ಹೇಳೋದೇನು ಎಂಬುದ್ನು ನೋಡೋಣ.

ಮೋದಿ ಐದು ವರ್ಷಗಳ ಅವಧಿ ಪೂರ್ಣಗೊಳಿಸ್ತಾರಾ?

ಇಂದು ಸಂಜೆ 7.15ಕ್ಕೆ ಮೋದಿ ಪದಗ್ರಹಣ ನಡೆಯಲಿದೆ. ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುತ್ತಿರುವ ಇಂದಿನ ದಿನ ಹೇಗಿದೆ. ಜ್ಯೋತಿಷ್ಯದ ಪ್ರಕಾರ ಇಂದಿನ ದಿನ ವಿಶೇಷ ಹೇಗಿದೆ ಎನ್ನುವುದನ್ನು ನೋಡುವುದಾದರೆ ಈ ದಿನ ಜ್ಯೇಷ್ಠ ಮಾಸದ ಶುದ್ಧ ತದಿಗೆ ಪುನರ್ವಸು ನಕ್ಷತ್ರ. ಈ ದಿನ ಸಂಜೆ 7.15 ಕ್ಕೆ ವೃಶ್ಚಿಕ ಲಗ್ನದಲ್ಲಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭ ನಡೆಯುತ್ತಿದೆ.

ಈ ದಿನ‌ ಭಾನುವಾರ ರಾಜರಿಗೆ ಒಳ್ಳೆಯದು. ಭಾನುವಾರದ ಅಧಿಪತಿ ಸೂರ್ಯ ಗ್ರಹಗಳ ರಾಜ. ಆದ್ದರಿಂದ ಈ ಮಹೂರ್ತಕ್ಕೆ ರಾಜಬಲ. ಮೋದಿಯವರದು ವೃಶ್ಚಿಕ ರಾಶಿ. ಪುನರ್ವಸು ನಕ್ಷತ್ರ ಗುರುವಿನ ನಕ್ಷತ್ರ. ಈ ನಕ್ಷತ್ರದಲ್ಲಿ ಏನೇ ಶುಭಕಾರ್ಯ ಮಾಡಿದರೂ ಪುನಃ ಪುನಃ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಪ್ರಮಾಣವಚನದ ಸಮಯದ ಮಹೂರ್ತ ಬಹಳ ಪ್ರಶಸ್ತವಾಗಿದೆ. ದಿನ ತಿಥಿ ವಾರ ನಕ್ಷತ್ರ ಲಗ್ನ ಎಲ್ಲವೂ ಮಹೋನ್ನತವಾಗಿದೆ. ಮೋದಿಯವರ ರಾಶಿಗೆ ಗುಣಾತ್ಮಕವಾಗಿದೆ ಎಂದು ಜೋತಿಷಿಗಳು ಹೇಳುತ್ತಾರೆ. ಹೀಗಾಗಿ ಮೋದಿ ಈ ಬಾರಿಯೂ ಐದು ವರ್ಷ ಪೂರೈಸುವುದು ಖಚಿತ ಎಂದು ಹೇಳುತ್ತಾರೆ.

ಅತಿಥಿಗಳಿಗೆ ಭರ್ಜರಿ ಊಟದ ವ್ಯವಸ್ಥೆ

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ದೇಶ-ವಿದೇಶಗಳ ಗಣ್ಯರಿಗೆ ಭಾರತದ ಪ್ರಮುಖ ಸಾಂಪ್ರಾದಾಯಿಕ ಭಕ್ಷ್ಯಗಳ ಥಾಲಿಯನ್ನು ನೀಡಲಾಗುತ್ತದೆ. ಮೋದಿ ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಇಬ್ಬರೂ ಸಸ್ಯಾಹಾರಿಗಳಾಗಿದ್ದು, ಪ್ರಮುಖವಾಗಿ ಗುಜರಾತಿ ಮತ್ತು ಒಡಿಯಾ ಸಾಂಪ್ರದಾಯಿಕ ಆಹಾರವನ್ನು ಗಣ್ಯರಿಗೆ ಬಡಿಸಲಾಗುತ್ತದೆ. ಎಲ್ಲಾ ಅತಿಥಿಗಳಿಗೆ ಶುದ್ಧ ಸಸ್ಯಾಹಾರಿ ಊಟವನ್ನು ನೀಡಲಾಗುತ್ತದೆ. ಚಾಟ್, ಧೋಕ್ಲಾ, ಕೇಸರಿ ಭಾತ್, ಮಶ್ರೂಮ್ ಕಬಾಬ್ ಮತ್ತು ಹರೇ ಭರೇ ಕಬಾಬ್ಈ ಎಲ್ಲಾ ಭಕ್ಷ್ಯಗಳು ಡಿನ್ನರ್‌ನಲ್ಲಿರಲಿರಲಿವೆ.

ಭಾನುವಾರ ಸಂಜೆ 7.15ಕ್ಕೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ. ಸುಮಾರು 8 ಸಾವಿರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ದೆಹಲಿಯ ಎಲ್ಲೆಡೆ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಸುಮಾರು 500 ಸಿಸಿಟಿವಿಗಳ ಕಣ್ಗಾವಲು ಇದೆ. ನೋ ಫ್ಲೈಯಿಂಗ್‌ ಜೋನ್‌ ಎಂದು ಘೋಷಿಸಿದ ಕಾರಣ ಯಾವುದೇ ಡ್ರೋನ್‌ಗಳ ಹಾರಾಟ ನಡೆಸುವಂತಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ಭವನಕ್ಕೂ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

Continue Reading

Lok Sabha Election 2024

Modi 3.0 Cabinet: ಮೂರನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ; ಅಭಿನಂದನೆ ತಿಳಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

Modi 3.0 Cabinet: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಇಂದು (ಜೂನ್‌ 9) ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ. ಅನಾರೋಗ್ಯ ಕಾರಣದಿಂದ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

VISTARANEWS.COM


on

Modi 3.0 Cabinet
Koo

ಬೆಂಗಳೂರು: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ(NDA) ಅಧಿಕಾರಕ್ಕೆ ಬಂದಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಇಂದು (ಜೂನ್‌ 9) ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ. ಈ ಬಾರಿ ಬಿಜೆಪಿಗೆ ಜೆಡಿಎಸ್‌ ಕೂಡ ಬೆಂಬಲ ಸೂಚಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆದರೆ ಅನಾರೋಗ್ಯ ಕಾರಣದಿಂದ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ (HD Deve Gowda) ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡ ಅವರು ಅದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅನಾರೋಗ್ಯದ ಕಾರಣದಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತವಾಗಿಯೂ ನಾನು ಟಿವಿಯಲ್ಲಿ ಲೈವ್‌ನಲ್ಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಕಾಂಗ್ರೆಸ್ ಏನೇ ಹೇಳಲಿ, ಭಾರತೀಯ ಪ್ರಜಾಪ್ರಭುತ್ವವು ದೃಢವಾಗಿದೆʼʼ ಎಂದು ದೇವೇಗೌಡ ಅವರು ಬರೆದುಕೊಂಡಿದ್ದಾರೆ.

ಮೋದಿ ಪ್ರಮಾಣವಚನಕ್ಕೆ ಸಿದ್ಧತೆ

ಜವಾಹರ ಲಾಲ್‌ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾದ ಖ್ಯಾತಿಗೆ ನರೇಂದ್ರ ಮೋದಿ ಭಾಜನರಾಗಲಿದ್ದಾರೆ. ಇಂದು ಸಂಜೆ 7.15ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಜತೆಗೆ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಬಿಗಿ ಬಂದೋಬಸ್ತ್‌

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ದೆಹಲಿಯ ಎಲ್ಲೆಡೆ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಸುಮಾರು 500 ಸಿಸಿಟಿವಿಗಳ ಕಣ್ಗಾವಲು ಇದೆ. ನೋ ಫ್ಲೈಯಿಂಗ್‌ ಜೋನ್‌ ಎಂದು ಘೋಷಿಸಿದ ಕಾರಣ ಯಾವುದೇ ಡ್ರೋನ್‌ಗಳ ಹಾರಾಟ ನಡೆಸುವಂತಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ಭವನಕ್ಕೂ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Modi 3.0 Cabinet: ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿ?

ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ

ಭಾನುವಾರ ರಾಜಘಾಟ್‌ಗೆ ತೆರಳಿ, ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದ ಮೋದಿ, ತದನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ತೆರಳಿ ಗೌರವ ವಂದನೆ ಸಲ್ಲಿಸಿದರು. ರಾಷ್ಯ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಮೂರು ಸೇನಾಪಡೆಗಳು ಮುಖ್ಯಸ್ಥರು ಮೋದಿ ಅವರಿಗೆ ಸಾಥ್ ನೀಡಿದರು.

Continue Reading
Advertisement
VK Pandian
ದೇಶ18 mins ago

VK Pandian: ಉತ್ತರಾಧಿಕಾರಿ ವದಂತಿ ಬೆನ್ನಲ್ಲೇ ವಿ.ಕೆ.ಪಾಂಡಿಯನ್‌ ರಾಜಕೀಯ ನಿವೃತ್ತಿ; ಬಿಜೆಡಿ ಸೋಲಿಗೆ ಹೊಣೆ ಹೊತ್ತು ವಿದಾಯ!

INDvsPAK
ಕ್ರೀಡೆ20 mins ago

INDvsPAK : ಪಾಕ್​ ಮತ್ತು ಭಾರತ ಪಂದ್ಯದ ಕುರಿತು ನಟ ಕಮಲ್​ ಹಾಸನ್​ ನೀಡಿರುವ ಹೇಳಿಕೆಯ ವಿಡಿಯ ಇಲ್ಲಿದೆ

Job Alert
ಉದ್ಯೋಗ24 mins ago

Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆಗೆ ಜೂ. 13 ಕೊನೆಯ ದಿನ

Modi 3.0 Cabinet
ದೇಶ38 mins ago

Modi 3.0 Cabinet: ಪ್ರಧಾನಿಯಾಗಿ ಮೋದಿ ಐದು ವರ್ಷ ಪೂರೈಸುತ್ತಾರಾ? ಜ್ಯೋತಿಷಿಗಳು ಹೇಳುವುದು ಹೀಗೆ

IND vs PAK
ಕ್ರೀಡೆ40 mins ago

IND vs PAK: ನಂ.1 ಬ್ಯಾಟರ್​ ಆಗಿದ್ದರೆ ಪಾಕ್​ ವಿರುದ್ಧ ಆಡಿ ತೋರಿಸು; ಸೂರ್ಯಕುಮಾರ್​ಗೆ ಸವಾಲೆಸೆದ ಪಾಕ್​ ಆಟಗಾರ

Modi 3.0 Cabinet
Lok Sabha Election 202442 mins ago

Modi 3.0 Cabinet: ಮೂರನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ; ಅಭಿನಂದನೆ ತಿಳಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

Ramoji Rao Funeral
ಸಿನಿಮಾ1 hour ago

Ramoji Rao Funeral: ರಾಮೋಜಿ ರಾವ್ ಪಾರ್ಥಿವ ಶರೀರ ಹೊತ್ತ ಚಂದ್ರಬಾಬು ನಾಯ್ಡು; ವಿಡಿಯೊ ನೋಡಿ

Karnataka Rain
ಮಳೆ1 hour ago

Karnataka Rain : ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಹೊರ ಬಂತು ಸವಾರನ ಕರುಳು! ಮತ್ತಿಬ್ಬರು ಗಂಭೀರ

Modi 3.0 Cabinet
ದೇಶ2 hours ago

Modi 3.0 Cabinet: ಈ ನಾಲ್ಕು ಮಹತ್ವದ ಖಾತೆಗಳು ಬಿಜೆಪಿ ಕೈಯಲ್ಲೇ ಉಳಿಯಲಿವೆ!

Kangana Ranaut Slapped incident Hrithik Roshan Backs Post
ಬಾಲಿವುಡ್2 hours ago

Kangana Ranaut: ಕಂಗನಾ ರಣಾವತ್‌ಗೆ ಕಪಾಳಮೋಕ್ಷ; ಹೃತಿಕ್ ರೋಷನ್ ರಿಯಾಕ್ಷನ್‌ ಏನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌