Site icon Vistara News

International Women’s Day 2023: ಮಹಿಳಾ ದಿನದ ಶುಭಾಶಯ ಕೋರಿದ ಮೋದಿ, ನಾರಿಶಕ್ತಿಗೆ ಮೆಚ್ಚುಗೆ, ವಿಶೇಷ ವಿಡಿಯೊ ಶೇರ್

International Womens Day

International Womens Day

ನವದೆಹಲಿ: ಭಾರತ ಸೇರಿ ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (International Women’s Day 2023) ಆಚರಿಸಲಾಗುತ್ತಿದೆ. ಮಹಿಳೆಯರ ಸಾಧನೆ, ಅವರ ತ್ಯಾಗ, ಮಮತೆ, ಪ್ರೀತಿ, ಪುರುಷರ ಏಳಿಗೆಗೆ ಅವರ ಸಹಕಾರ ಸೇರಿ ಹಲವು ವಿಷಯಗಳನ್ನು ನೆನೆದು ಹೆಣ್ಣುಮಕ್ಕಳಿಗೆ ಶುಭ ಕೋರಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ವಿಶಿಷ್ಟವಾಗಿ ಮಹಿಳಾ ದಿನದ ಶುಭ ಕೋರಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಮ್ಮ ಎಲ್ಲ ನಾರಿಶಕ್ತಿಯ ಸಾಧನೆಗೆ ಗೌರವ ಸಲ್ಲುತ್ತದೆ. ಭಾರತದ ಏಳಿಗೆಗೆ ಹೆಣ್ಣುಮಕ್ಕಳ ಕೊಡುಗೆ ಅಪಾರವಾಗಿದೆ. ಮಹಿಳಾ ಸಬಲೀಕರಣದ ದಿಸೆಯಲ್ಲಿ ನಮ್ಮ ಸರ್ಕಾರ ಮುಂದೆಯೂ ಶ್ರಮ ವಹಿಸಲಿದೆ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಇದರ ಜತೆಗೆ ದೇಶದ ಹೆಣ್ಣುಮ್ಕಕಳು ಸಕಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುರಿತು ವಿಶೇಷ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹೆಣ್ಣುಮಕ್ಕಳ ಸಾಧನೆ ಕುರಿತು ಮೋದಿ ಅವರು ಮನ್‌ ಕೀ ಬಾತ್‌ನಲ್ಲಿ ಪ್ರಶಂಸಿಸಿರುವುದು, ಸಾಧನೆ ಮಾಡಿದ ಹೆಣ್ಣುಮಕ್ಕಳ ಪರಿಚಯ ಕೂಡ ವಿಡಿಯೊದಲ್ಲಿದೆ.

ಇದನ್ನೂ ಓದಿ: International Women’s Day : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು

Exit mobile version