Site icon Vistara News

International Yoga Day 2024: ‘ಯೋಗ’ ವಿಶ್ವಕ್ಕೆ ಭಾರತದ ಕೊಡುಗೆ; ಇದರ ಪಿತಾಮಹ ಮಹರ್ಷಿ ಪತಂಜಲಿ

International Yoga Day 2024

ಮನಸ್ಸು (mind) ಮತ್ತು ದೇಹವನ್ನು (body) ಸಮತೋಲನಗೊಳಿಸುವ ಯೋಗ ಒಂದು ರೀತಿಯ ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗ ಪದವು ಸಂಸ್ಕೃತದ “ಯುಜ್” (Yuj) ಎಂಬ ಪದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ “ಸೇರಲು” (join), “ನೊಗಕ್ಕೆ” (yoke) ಅಥವಾ “ಒಗ್ಗೂಡಿಸಲು” ( unite) ಎಂಬ ಅರ್ಥವಿದೆ.

ಯೋಗದ ಬೋಧನೆಗಳ ಪ್ರಕಾರ ಯೋಗವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಸ್ವಂತ ಪ್ರಜ್ಞೆಯು ಬ್ರಹ್ಮಾಂಡದೊಂದಿಗೆ ಏಕೀಕರಣಗೊಳ್ಳುತ್ತದೆ. ಇದು ಮಾನವ ಮನಸ್ಸು ಮತ್ತು ದೇಹದ ನಡುವೆ ಮತ್ತು ಮಾನವರು ಮತ್ತು ನೈಸರ್ಗಿಕ ಪ್ರಪಂಚದ ನಡುವೆ ಸಂಪೂರ್ಣ ಸಾಮರಸ್ಯವನ್ನು ಸೂಚಿಸುತ್ತದೆ. ವಿಶ್ವದಾದ್ಯಂತ 2024ರ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿಶಿಷ್ಟ ಮತ್ತು ವಿಭಿನ್ನ ಥೀಮ್‌ನೊಂದಿಗೆ ಗೌರವಿಸಲಾಗುತ್ತದೆ.

ಅಂತರಾಷ್ಟ್ರೀಯ ಯೋಗ ದಿನ 2024ರ ವಿಷಯ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’. ಯೋಗವು ಜನರು ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿಯನ್ನು ನಡೆಸಲು ಸಹಾಯ ಮಾಡುತ್ತದೆ. ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗಾಭ್ಯಾಸದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ಯೋಗದ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಕೂಡ ಬಹು ಮುಖ್ಯವಾಗಿದೆ. ಯೋಗ ಯಾರಿಂದ, ಯಾವಾಗ ಹುಟ್ಟಿಕೊಂಡಿತು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಗದ ಪಿತಾಮಹ ಯಾರು?

ಅನೇಕ ಜನರು ಮಹರ್ಷಿ ಪತಂಜಲಿ ಅವರನ್ನು ಇತಿಹಾಸದಲ್ಲಿ ಮೊದಲ ಯೋಗ ಗುರು ಎಂದು ಉಲ್ಲೇಖಿಸುತ್ತಾರೆ. ಅವರ ಪುಸ್ತಕ “ಯೋಗ ಸೂತ್ರಗಳು” ಯೋಗ ಸಿದ್ಧಾಂತ ಮತ್ತು ಅಭ್ಯಾಸವನ್ನು ಯುಗಗಳಿಂದಲೂ ರೂಪಿಸಿದೆ. ಜೀವನದ ಮೇಲೆ ಪರಿಣಾಮ ಬೀರುವ ಅವರು ಹೇಳಿರುವ ಯೋಗ ಭಂಗಿಗಳು ಅನೇಕ ತಲೆಮಾರುಗಳು ಅಭ್ಯಾಸ ನಡೆಸುತ್ತೀಯೆ. ಅವರು 196 ಯೋಗ ಭಂಗಿಗಳನ್ನು ಹೇಳಿದ್ದಾರೆ.

ಮಹರ್ಷಿ ಪತಂಜಲಿಯ ಜನನದ ಸುತ್ತ ಅನೇಕ ದಂತಕಥೆಗಳಲ್ಲಿವೆ. ಅವುಗಳಲ್ಲಿ ಇದು ಒಂದು. ಪುಷ್ಯಮಿತ್ರ ಸುಂಗನ ಆಳ್ವಿಕೆಯಲ್ಲಿ (ಕ್ರಿ.ಪೂ. 195-142) ಉತ್ತರ ಪ್ರದೇಶದ ಗೊಂಡಾದಲ್ಲಿ ಪತಂಜಲಿಯವರು ಜನಿಸಿದರು. ಬಳಿಕ ಅವರು ಕಾಶಿಯಲ್ಲಿ ನೆಲೆಸಿದರು ಎಂದು ಭಾವಿಸಲಾಗಿದೆ. ಕಾಶಿಯಲ್ಲಿ ಪತಂಜಲಿಯು ಶೇಷನಾಗನ ಅವತಾರ ಎಂದೇ ಜನರು ಭಾವಿಸಿ ಪೂಜಿಸುತ್ತಿದ್ದರು. ಇತರ ದಂತಕಥೆಗಳಲ್ಲಿ ಅವರನ್ನು ಸಂತ ಪಾಣಿನಿಯ ವಿದ್ಯಾರ್ಥಿ ಎಂದು ಪರಿಗಣಿಸಲಾಗಿದ್ದು, ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ.

ಅಷ್ಟಾಂಗ ಯೋಗ ಸಾಧಕರು

ಯೋಗ ಸೂತ್ರಗಳನ್ನು ಜೋಡಿಸಿ ಮಹರ್ಷಿ ಪತಂಜಲಿಯವರು ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದರು. ಈ ಮೂಲಕ ಯೋಗಕ್ಕೆ ಕ್ರಮಬದ್ಧ ರೂಪ ನೀಡಿದರು. ಭಾರತೀಯ ಸಮಾಜದಲ್ಲಿ ಯೋಗವನ್ನು ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ ಎಂಬ ವಾಸ್ತವದ ಹೊರತಾಗಿಯೂ, ಅಭ್ಯಾಸದ ಯಾವುದೇ ಲಿಖಿತ ದಾಖಲೆಗಳು ಅಸ್ತಿತ್ವದಲ್ಲಿಲ್ಲ ಎಂದು ಭಾವಿಸಲಾಗಿದೆ.

ಮಹರ್ಷಿ ಪತಂಜಲಿ ಯೋಗವನ್ನು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಅಷ್ಟಾಂಗ ಯೋಗ ಸಾಧಕರಾಗಿದ್ದರು. ಇದರಲ್ಲಿ ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಈ ಭಂಗಿಗಳನ್ನು ಒಳಗೊಂಡಿದೆ. ಮಹರ್ಷಿ ಪತಂಜಲಿ ಯೋಗವನ್ನು ನಿರ್ವಹಿಸಬಹುದಾದ ಭಾಗಗಳಾಗಿ ವಿಭಜಿಸಿದರು ಮತ್ತು ವಿವಿಧ ರೀತಿಯಲ್ಲಿ ಸಾರ್ವಜನಿಕರು ಅನುಷ್ಠಾನಗೊಳಿಸುವಂತೆ ಮಾಡಿದರು.

ಇದನ್ನೂ ಓದಿ: International Yoga Day 2024: ಈ ಉಸಿರಾಟದ ತಂತ್ರಗಳು ಮಾನಸಿಕ ಒತ್ತಡ ನಿವಾರಿಸುತ್ತವೆ!

ಯೋಗದ ಸರಳೀಕರಣ

ಮಹರ್ಷಿ ಪತಂಜಲಿ ಯೋಗವನ್ನು ಸರಳೀಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರಿಂದ ಸಾಧ್ಯವಾದಷ್ಟು ಜನರು ಅದನ್ನು ಅಭ್ಯಾಸ ಮಾಡಬಹುದು. ಆದರೂ ಯೋಗ ಪತಂಜಲಿಗಿಂತ ಹಿಂದಿನದು. ಧರ್ಮ ಮತ್ತು ಮೂಢನಂಬಿಕೆಗಳ ಪ್ರಭಾವದಿಂದಾಗಿ ಹಲವರು ಯೋಗವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅಥವಾ ಅಭ್ಯಾಸ ಮಾಡಲಿಲ್ಲ.
ಪತಂಜಲಿಯು ಮೂಢನಂಬಿಕೆ ಮತ್ತು ಧರ್ಮದ ಕ್ಷೇತ್ರದಿಂದ ಯೋಗವನ್ನು ಬಿಡುಗಡೆ ಮಾಡಿದೆ ಎನ್ನಲಾಗುತ್ತದೆ.

ಅವರು ಅದನ್ನು ಜಾತ್ಯತೀತ ಆಚರಣೆಯನ್ನಾಗಿ ಮಾಡಿದರು. ಹೆಚ್ಚಿನ ಸಂಖ್ಯೆಯ ಜನರು ಅದನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಟ್ಟರು. ಈ ರೀತಿಯಾಗಿ ಯೋಗವು ವ್ಯಾಪಕವಾದ ಆಕರ್ಷಣೆಯನ್ನು ಗಳಿಸಿತು ಮತ್ತು ಜನರು ಅದರ ಪ್ರಯೋಜನಗಳನ್ನು ಗುರುತಿಸಲು ಪ್ರಾರಂಭಿಸಿದರು.

Exit mobile version