ನವದೆಹಲಿ: ಭಯೋತ್ಪಾದಕರು, ಭ್ರಷ್ಟರು ಮತ್ತು ಅಪರಾಧಿಗಳ ಸುರಕ್ಷಿತ ಸ್ಥಳಗಳನ್ನು ತೊಡೆದು ಹಾಕಲು ತಲೆಮರೆಸಿಕೊಂಡಿರುವ ಅಪರಾಧಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಇಂಟರ್‌ಪೋಲ್ (Interpol) ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
90ನೇ ಇಂಟರ್‌ಪೋಲ್ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಗತ್ತಿನ ಕೆಲವು ಪ್ರದೇಶಗಳು ಅಪರಾಧಿಗಳಿಗೆ ಸುರಕ್ಷಿತ ಪ್ರದೇಶಗಳಾಗಿವೆ. ಅವರು ಅಲ್ಲಿ ಹೋಗಿ ತಲೆಮರೆಸಿಕೊಳ್ಳುವುದರಿಂದ ಅವರ ವಿರುದ್ಧದ ಕಾನೂನು ಪ್ರಕ್ರಿಯೆಗಳಿಗೆ ತೊಡಕು ಉಂಟಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ವಿಶ್ವದ ಬಡವರಿಂದ ಹಣವನ್ನು ಕಿತ್ತುಕೊಂಡು ಕೆಟ್ಟ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಈ ಮಾದರಿಯೇ ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹದ ದಾರಿಯಾಗಿದೆ. ಯುವ ಸಮೂಹವನ್ನು ಹಾಳು ಮಾಡುವ ಡ್ರಗ್ಸ್‌ನಿಂದ ಹಿಡಿದು, ಮಾನವ ಕಳ್ಳಸಾಗಣೆವರೆಗೆ, ಪ್ರಜಾಪ್ರಭುತ್ವವನ್ನುಅಸ್ಥಿರಗೊಳಿಸುವುದರಿಂದ ಹಿಡಿದು ಅಕ್ರಮ ಶಸ್ತ್ರಾಸ್ತ್ರ ಮಾರಾಟದವರೆಗೆ ಈ ರೀತಿಯ ಹಣವನ್ನು ಬಳಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | CBI | ಆಪರೇಷನ್ ಗರುಡ, ಡ್ರಗ್ಸ್ ಕಳ್ಳಸಾಗಣೆ ಮಟ್ಟ ಹಾಕಲು ಸಿಬಿಐ ಕಾರ್ಯಾಚರಣೆ