Site icon Vistara News

IRCTC website: ಐಆರ್‌ಸಿಟಿಸಿ ವೆಬ್‌ಸೈಟ್‌ ಡೌನ್‌, ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕಿದ್ದರೆ ಹೀಗೆ ಮಾಡಿ

irctc down

ಹೊಸದಿಲ್ಲಿ: ರೈಲ್ವೆ ಟಿಕೆಟ್‌ (railway ticket) ಬುಕಿಂಗ್‌ ಜಾಲತಾಣ IRCTC (IRCTC website) ಇಂದು ಬೆಳಗ್ಗಿನಿಂದ ಸಂಪೂರ್ಣ ಡೌನ್‌ ಆಗಿದೆ. ವೆಬ್‌ಸೈಟ್‌ ತೆರೆದುಕೊಳ್ಳುತ್ತಿಲ್ಲ ಹಾಗೂ ಆನ್‌ಲೈನ್ ಬುಕಿಂಗ್ (online booking) ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಗ್ರಾಹಕರು ಟ್ವಿಟ್ಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಬುಕ್ಕಿಂಗ್‌ ಪೀಕ್ ಸಮಯದಲ್ಲಿ IRCTC ಸರ್ವರ್ ಡೌನ್ ಆಗಿದ್ದು, ಗ್ರಾಹಕರು ವೆಬ್‌ನಲ್ಲಿ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. IRCTC ವೆಬ್‌ಸೈಟ್‌ ತಕ್ಷಣಕ್ಕೆ ನೀಡಿರುವ ಹೇಳಿಕೆಯಲ್ಲಿ, ʼʼತಾಂತ್ರಿಕ ಕಾರಣಗಳಿಂದ ಟಿಕೆಟ್ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸುತ್ತಿದೆ. ಸರಿಪಡಿಸಿದ ತಕ್ಷಣ ತಿಳಿಸುತ್ತೇವೆ” ಎಂದಿದೆ.

IRCTC ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿದರೆ ಈ ಸಂದೇಶ ಕಾಣಿಸಿಕೊಳ್ಳುತ್ತದೆ: “ನಿರ್ವಹಣೆ ಚಟುವಟಿಕೆಯಿಂದಾಗಿ ಇ-ಟಿಕೆಟ್ ಸೇವೆ ಲಭ್ಯವಿಲ್ಲ. ದಯವಿಟ್ಟು ನಂತರ ಪ್ರಯತ್ನಿಸಿ.ʼʼ

ʼʼನಿಮ್ಮ ಟಿಕೆಟ್‌ಗಳ ರದ್ದತಿ ಅಥವಾ TDR ಫೈಲ್‌ ಮಾಡಲು ಈ ಮುಂದಿನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ: 14646,0755-6610661 & 0755-4090600 ಅಥವಾ etickets@irctc.co.inಗೆ ಇಮೇಲ್ ಮಾಡಿ.ʼʼ

ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಪ್ರಯತ್ನಿಸುತ್ತಿರುವವರು ತಾತ್ಕಾಲಿಕವಾಗಿ ಅಮೆಜಾನ್, ಮೇಕ್‌ಮೈಟ್ರಿಪ್ ಮತ್ತಿತರ B2C ಪ್ಲೇಯರ್‌ಗಳನ್ನು ಬಳಸಬಹುದು ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

ಇದನ್ನೂ ಓದಿ: IRCTC Warning: ವೈಯಕ್ತಿಕ ದಾಖಲೆ, ಹಣ ಕಳವು ಭೀತಿ; ಈ ಆ್ಯಪ್ ಬಳಸದಂತೆ ಐಆರ್‌ಸಿಟಿಸಿ ಎಚ್ಚರಿಕೆ

Exit mobile version