Site icon Vistara News

Fact Check: ಪ್ರಧಾನಿ ಮೋದಿ ನೊಬೆಲ್‌ ಶಾಂತಿ ಪ್ರಶಸ್ತಿಗೆ ಸ್ಪರ್ಧಿ ಎಂದು ನಾರ್ವೆಯ ತೊಜೆ ಹೇಳಿದ್ದು ನಿಜವೇ?

Is it true Toje said that Modi is a contender for the Nobel Peace Prize?

ನವದೆಹಲಿ: ಭಾರತದಲ್ಲಿ ಪ್ರವಾಸದಲಿರುವ ನೊಬೆಲ್ ಪ್ರಶಸ್ತಿ ಸಮಿತಿ ಸದಸ್ಯ ಆಸ್ಲೆ ತೊಜೆ(Asle Toje) ಅವರು, ನೊಬೆಲ್ ಶಾಂತಿ ಪುರಸ್ಕಾರಕ್ಕೆ (Nobel Peace Prize) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರಮುಖ ಸ್ಪರ್ಧಿಯಾಗಿದ್ದಾರೆ. ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಭಾರತವು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಗುರುವಾರ ಬೆಳಗ್ಗೆ ವರದಿಯಾಗಿತ್ತು. ಆದರೆ, ಸಂಜೆಯಾಗುತ್ತಲೇ ಈ ವರದಿ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಫ್ಯಾಕ್ಟ್‌ ಚೆಕರ್ಸ್ ಹೇಳಿದ್ದಾರೆ. ವಾಸ್ತವದಲ್ಲಿ ತೊಜೆ, ಅವರು ಪ್ರಧಾನಿ ನಾಯಕತ್ವವನ್ನು ಹೊಗಳಿದ್ದು ನಿಜ. ಆದರೆ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಪ್ರಮುಖ ಸ್ಪರ್ಧಿ ಎಂದು ಹೇಳಿರಲಿಲ್ಲ(Fact Check).

ನೊಬೆಲ್ ಶಾಂತಿ ಪ್ರಶಸ್ತಿಗೆ ನರೇಂದ್ರ ಮೋದಿ ಅವರು ಪ್ರಮುಖ ಸ್ಪರ್ಧಿಯಾಗಿದ್ದಾರೆಂಬ ಹೇಳಿಕೆಯನ್ನು ಎಲ್ಲ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಈ ಸುದ್ದಿ ವ್ಯಾಪಕತೆಯನ್ನು ಪಡೆದುಕೊಳ್ಳುತ್ತಿದ್ದಂತೆ ಸ್ಪಷ್ಟಿಕರಣ ನೀಡಿರುವ ತೊಜೆ, ”ಫೇಕ್ ನ್ಯೂಸ್ ಟ್ವೀಟ್ ಅನ್ನು ಸುದ್ದಿ ಮಾಡಲಾಗಿದೆ. ಹಾಗಾಗಿ, ಅದನ್ನು ನಾವು ಫೇಕ್ ಟ್ವೀಟ್ ಎಂದೇ ಪರಿಗಣಿಸೋಣ. ಅದು ಖಂಡಿತವಾಗಿಯೂ ಫೇಕ್ ಟ್ವೀಟ್. ಮತ್ತೆ ಅದರ ಬಗ್ಗೆ ಚರ್ಚಿಸುವುದು ಬೇಡ. ಟ್ವೀಟ್‌ನಲ್ಲಿ ಹೇಳಲಾಗಿರುವ ಯಾವುದೇ ಸಂಗತಿಯನ್ನು ನಾನು ಹೇಳಿದ್ದಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆಸ್ಲೆ ತೊಜೆ ನೀಡಿದ ಸ್ಪಷ್ಟಿಕರಣದ ಟ್ವೀಟ್

ಆಸ್ಲೆ ತೊಜೆ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದೇನು?

ಭಾರತದ ಪ್ರವಾಸದಲ್ಲಿರುವ ನೊಬೆಲ್ ಪ್ರಶಸ್ತಿ ಸಮಿತಿಯ ಸದಸ್ಯ ಆಸ್ಲೆ ತೊಜೆ ಅವರು, ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿ. ಇಂದಿನ ಜಗತ್ತಿನಲ್ಲಿ ಅವರು ಶಾಂತಿಸ್ಥಾಪನೆಯ ಅತ್ಯಂತ ವಿಶ್ವಾಸಾರ್ಹ ಮುಖ. ನಾನು ಅವರ ದೊಡ್ಡ ಅಭಿಮಾನಿ ಹೇಳಿದ್ದಾರೆಂದು ವರದಿಯಾಗಿತ್ತು.

ಸಮರ ನಿರತರಾಗಿರುವ ದೇಶಗಳ ನಡುವೆ ಶಾಂತಿ ಸ್ಥಾಪನೆ ಮಾಡಬಲ್ಲ ಸಾಧ್ಯತೆ ಹೊಂದಿರುವ ನಾಯಕರಲ್ಲಿ ಪಿಎಂ ಮೋದಿ ಅವರು ಮುಖ್ಯರು. ಮೋದಿ ಅವರ ಪಾಲಿಸಿಗಳ ಪರಿಣಾಮವಾಗಿ ಭಾರತ ಶ್ರೀಮಂತ- ಶಕ್ತಿಯುತ ದೇಶವಾಗುತ್ತಿದೆ. ಅವರು ನೊಬೆಲ್‌ ಪುರಸ್ಕಾರಕ್ಕೆ ಅರ್ಹರಾಗಿದ್ದು, ಅವರದನ್ನು ಪಡೆದರೆ ಐತಿಹಾಸಿಕವೆನಿಸುತ್ತದೆ ಎಂದು ತೊಜೆ ನುಡಿದಿದ್ದಾರೆ.

ಇದನ್ನೂ ಓದಿ: Asle Toje: ಭಾರತ ಯಾವ ರಾಷ್ಟ್ರಕ್ಕೂ ಬೆದರಿಕೆ ಹಾಕಲ್ಲ; ನೊಬೆಲ್ ಪ್ರಶಸ್ತಿ ಸಮಿತಿ ಸದಸ್ಯ ಬಣ್ಣನೆ

ತೊಜೆ ಅವರು ನಾರ್ವೆಯವರಾಗಿದ್ದು, ನೊಬೆಲ್‌ ಶಾಂತಿ ಪುರಸ್ಕಾರ ಕಮಿಟಿಯ ಉಪಾಧ್ಯಕ್ಷರಾಗಿದ್ದಾರೆ. ಜರ್ಮನಿ, ಫ್ರಾನ್ಸ್‌, ಬೆಲ್ಜಿಯಂ, ಇಂಗ್ಲೆಂಡ್‌, ಅಮೆರಿಕ ಮುಂತಾದ ಕಡೆ ಕೆಲಸ ಮಾಡಿರುವ ಅವರು ರಾಜಕೀಯ ಶಾಸ್ತ್ರದ ವಿದ್ವಾಂಸ ಹಾಗೂ ಹತ್ತಾರು ಕೃತಿಗಳ ಕರ್ತೃ. ಓಸ್ಲೋ ಯೂನಿವರ್ಸಿಟಿ ಹಾಗೂ ಕೇಂಬ್ರಿಡ್ಜ್‌ ಯೂನಿವರ್ಸಿಟಿಗಳಲ್ಲಿ ಅಧ್ಯಯನ ಮಾಡಿ ಪಿಎಚ್‌ಡಿ ಪಡೆದಿದ್ದಾರೆ.

Exit mobile version