Site icon Vistara News

Mukul Roy: ತೃಣಮೂಲ ನಾಯಕ ಮುಕುಲ್ ರಾಯ್ ಕಾಣೆಯಾಗಿದ್ದಾರೆಯೇ! ಅವರ ಪುತ್ರ ಹೇಳೋದೇನು?

Is mukul Roy untraceable? What did his son said?

ನವದೆಹಲಿ: ತೃಣಮೂಲ ಕಾಂಗ್ರೆಸ್ ಹಾಗೂ ಪಶ್ಚಿಮ ಬಂಗಾಳದ ಹಿರಿಯ ನಾಯಕ ಮುಕುಲ್ ರಾಯ್ (Mukul Roy) ಅವರು ನಾಪತ್ತೆಯಾಗಿದ್ದಾರೆಯೇ? ಹೌದು, ಅವರ ಪುತ್ರ ತಮ್ಮ ತಂದೆ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಮಾಡಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಮುಕುಲ್ ರಾಯ್ ಅವರು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಕಾಣಿಸಿಕೊಂಡಿದ್ದಾರೆ! ಏತನ್ಮಧ್ಯೆ, ಅವರ ಮಾನಸಿಕ ಸ್ಥಿತಿ ಸರಿಯಾಗಿಲ್ಲ ಎಂದು ಅವರ ಪುತ್ರ ಹೇಳಿದ್ದಾರೆ.

69 ವರ್ಷದ ಮುಕುಲ್ ರಾಯ್ ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದಾರೆಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಬೆಂಗಾವಲು ಪಡೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ನನಗೆ ದೆಹಲಿಯಲ್ಲಿ ಕೆಲಸವಿದೆ, ನಾನು ಇಲ್ಲಿಗೆ ಬರಬಹುದಲ್ಲವೇ? ಎಂದು ದಿಲ್ಲಿಗೆ ಏಕೆ ಬಂದಿದ್ದೀರಿ ಎಂದು ಕೇಳಿದ ವರದಿಗಾರರಿಗೆ ಮರು ಪ್ರಶ್ನೆ ಮಾಡಿದ್ದಾರೆ.

ಚಿಕಿತ್ಸೆ ಪಡೆಯಲು ಏನಾದರೂ ದಿಲ್ಲಿಗೆ ಬಂದಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ ಇಲ್ಲ, ವಿಶೇಷ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಇಲ್ಲಿಗೆ ಬರಬಾರದೇ? ನಾನು ಶಾಸಕ, ಸಂಸದನಾಗಿದ್ದವನು ಎಂದು ಹೇಳಿಕೊಂಡಿದ್ದಾರೆ. ಆದರೆ, ರಾಜಕೀಯ ಕಾರಣಕ್ಕಾಗಿ ದಿಲ್ಲಿಗೆ ಬಂದಿರುವುದನ್ನು ನಿರಾಕರಿಸಿದ್ದಾರೆ. 2021ರಲ್ಲಿ ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್‌ಗೆ ಬಂದಿದ್ದ ಮುಕುಲ್ ರಾಯ್ ಅವರು ಮತ್ತೆ ಪಕ್ಷಾಂತರ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.

ಮುಕುಲ್ ರಾಯ್ ಕಾಣೆಯಾಗಿದ್ದಾರೆಂದು ದೂರು ನೀಡಿದ ಕುಟುಂಬ

ಏತನ್ಮಧ್ಯೆ, ತಮ್ಮ ತಂದೆ ಕಾಣೆಯಾಗಿದ್ದಾರೆ ಹಾಗೂ ಯಾರ ಕೈಗೆ ಸಿಗುತ್ತಿಲ್ಲ ಎಂದು ಅವರ ಪುತ್ರ ಪೊಲೀಸರಿಗೆ ದೂರು ನೀಡಿದ್ದರು. ಮುಕುಲ್ ರಾಯ್ ಅವರ ಪುತ್ರ, ತೃಣಮೂಲ ಕಾಂಗ್ರೆಸ್ ಸುಭ್ರಾಗ್ಶು ಅವರು, ನಮ್ಮ ತಂದೆಯ ಫೋನ್ ಸ್ವಿಚ್ ಆಫ್ ಆಗಿದೆ. ಕೆಲವರು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಮುಕುಲ್ ರಾಯ್ ಅವರೊಂದಿಗೆ ಕೆಲವು ಪಕ್ಷಗಳು ಕೆಟ್ಟ ರಾಜಕಾರಣವನ್ನು ಮಾಡುತ್ತಿವೆ. ಅವರೊಂದಿಗೆ ನಾನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸುಭ್ರಾಗ್ಶು ಅವರು ಹೇಳಿದ್ದಾರೆ.

ಇದೇ ವೇಳೆ, ಅವರು ತಮ್ಮ ತಂದೆ ಮತ್ತೆ ಬಿಜೆಪಿಯನ್ನು ಸೇರಲಿದ್ದಾರೆಂಬ ಸುದ್ದಿಯನ್ನು ತಳ್ಳಿ ಹಾಕಿದ ಸುಭ್ರಾಗ್ಶು ಅವರು, ನನ್ನ ತಂದೆ ಈಗ ಬಿಜೆಪಿಗೆ ಸೇರಿದರೂ, ಅವರ ಮಾನಸಿಕ ಆರೋಗ್ಯವು ಅವರು ಅಂದುಕೊಂಡಂತಿಲ್ಲ. ಈಗ ಅವರನ್ನು ಮರಳಿ ಕರೆತಂದು ಚಿಕಿತ್ಸೆ ನೀಡುವುದು ನನ್ನ ಆದ್ಯತೆಯಾಗಿದೆ. ಅವರ ಸ್ಥಿತಿಯ ಬಗ್ಗೆ ನನ್ನ ಕುಟುಂಬಕ್ಕೆ ತಿಳಿದಿದೆ. ತಂದೆಯೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ತೃಣಮೂಲ ಮುಖಂಡನ ಹತ್ಯೆ ಪ್ರಕರಣವೂ ಸಿಬಿಐಗೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರ ಹೆಸರನ್ನು ಹಾಳು ಮಾಡುವುದಕ್ಕಾಗಿ ಕೆಲವರು ಹೀಗೆಲ್ಲ ಸುದ್ದಿ ಹರಡುತ್ತಿದ್ದಾರೆಂದು ಹೇಳಿದರು. ಮಮತಾ ಬ್ಯಾನರ್ಜಿ ಅವರ ನಂತರದ ಸ್ಥಾನದಲ್ಲಿದ್ದ ಮುಕುಲ್ ರಾಯ್ ಅವರು, 2917ರಲ್ಲಿ ಬಿಜೆಪಿ ಸೇರಿದ್ದರು. ಬಳಿಕ ಮತ್ತೆ ವಾಪಸ್ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

Exit mobile version