Site icon Vistara News

Smriti Irani: ಸ್ಮೃತಿ ಇರಾನಿ ತಮ್ಮ ಗೆಳತಿಯ ಗಂಡನನ್ನೇ ಮದ್ವೆ ಆಗಿದ್ದಾರಾ? ಸಚಿವೆ ಹೇಳೋದೇನು?

Smriti Irani On Rahul Gandhi

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಸ್ಮೃತಿ ಇರಾನಿ (Woman and Child Development Minister Smriti Irani) ತಮ್ಮ ಗೆಳತಿಯ ಗಂಡನನ್ನೇ (Friend’s Husband) ಮದುವೆಯಾಗಿದ್ದಾರೆಂಬ ಗುಸು ಗುಸು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ವದಂತಿಗೆ ಸ್ವತಃ ಸ್ಮೃತಿ ಇರಾನಿ ಅವರೇ ಈಗ ಉತ್ತರಿಸಿದ್ದಾರೆ. ಸ್ಮೃತಿ ಇರಾನಿ ಅವರು ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ (Instagram App) ಆಸ್ಕ್ ಮಿ ಎನಿಥಿಂಗ್ (Ask me Anything) ಸೆಷನ್ ನಡೆಸಿದರು. ಈ ವೇಳೆ, ಇರಾನಿ ಅವರು ವೈಯಕ್ತಿಕ ಬದುಕಿನ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಪೈಕಿ ಅವರ ವಿವಾಹದ ಕುರಿತಾಗಿಯೂ ಇತ್ತು.

ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಸ್ಮೃತಿ ಇರಾನಿ ಅವರು ತುಸು ಇರಸುಮುರಸುಗೊಂಡರಾದರೂ ಆ ಪ್ರಶ್ನೆಯನ್ನು ನಿರ್ಲಕ್ಷ್ಯ ಮಾಡಲು ಮುಂದಾದರು. ಕ್ಯೂಂ ಕೀ ಸಾಸ್ ಭಿ ಕಭೀ ಬಹು ಥಿ ನಟಿ ಇರಾನಿ ಕೊನೆಗೆ ಆ ಬಳಕೆದಾರರಿಗೆ ಮುಟ್ಟಿ ನೋಡಿಕೊಳ್ಳುವಂಥ ಉತ್ತರ ನೀಡಿ, ತನ್ನ ಗೆಳತಿಯನ್ನು ಈ ರಾಜಕೀಯಕ್ಕೆ ಎಳೆಯಬೇಡಿ ಎಂದು ತಾಕೀತು ಮಾಡಿದರು.

ಸ್ಮೃತಿ ಇರಾನಿಗೆ ಬಳಕೆದಾರ ಕೇಳಿದ್ದು ಏನು?

ಆಪ್ ಕೀ ಶಾದಿ ಆಪ್ಕೆ ಫ್ರೆಂಡ್‌ ಕೆ ಪತಿ ಸೇ ಹುಯಿ ಕ್ಯಾ(ನೀವು ನಿಮ್ಮ ಗೆಳತಿಯ ಗಂಡನನ್ನೇ ಮದುವೆಯಾದ್ರಾ?) ಎಂದು ಬಳಕೆದಾರೊಬ್ಬರು ನೇರವಾಗಿ ಸ್ಮೃತಿ ಇರಾನಿ ಅವರಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಇರಾನಿ, ನಹೀ ಜೀ… ಮೋನಾ ಅವರು ನನಗಿಂತಲೂ 13 ವರ್ಷ ದೊಡ್ಡವರು…. ಹಾಗಾಗಿ, ಆಕೆ ನನ್ನ ಬಾಲ್ಯದ ಗೆಳತಿಯಾಗಲು ಸಾಧ್ಯವೇ ಇಲ್ಲ. ಅವರು ಕುಟುಂಬವಾಗಿದ್ದಾರೆ ಹೊರತು ರಾಜಕಾರಣಿಯಲ್ಲ ಎಂದು ಹೇಳಿದರು.

ಆಕೆಯನ್ನು(ಮೋನಾ) ಈ ಕೆಲಸಕ್ಕೆ ಎಳೆಯಬೇಡಿ. ನನ್ನ ಜತೆ ಜಗಳಾಡಿ, ವಾದ ಮಾಡಿ, ನನಗೆ ಕೀಳಾಗಿ ಮಾತನಾಡಿ. ಆದರೆ, ಯಾರು ರಾಜಕಾರಣದೊಂದಿಗೆ ಬೆರೆತಿಲ್ಲ ಅವರನ್ನು ನಿಮ್ಮೊಂದಿಗೆ ಗಟಾರ್‌ಗೆ ಎಳೆಯಬೇಡಿ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

Smriti Irani: ಯಾರು ಈ ಜುಬಿನ್ ಇರಾನಿ?

ಸ್ಮೃತಿ ಇರಾನಿ ಅವರು 2001ರಲ್ಲಿ ಪಾರ್ಸಿ ಉದ್ಯಮಿ ಜುಬಿನ್ ಅವರನ್ನು ವಿವಾಹವಾದರು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಅವರಿಗೆ ಗಂಡು ಮಗುವಾಯಿತು. 2003 ಸೆಪ್ಟೆಂಬರ್‌ ತಿಂಗಳಲ್ಲಿ ದಂಪತಿಗೆ ಎರಡನೇ ಮಗು ಆಯ್ತು. ಸ್ಮೃತಿ ಇರಾನಿ ಅವರು ಮದುವೆಯಾಗಿರುವ ಉದ್ಯಮಿ ಜುಬಿನ್ ಇರಾನಿ ಅವರು ಈ ಹಿಂದೆ ಮಾಡೆಲ್ ಕೋಆರ್ಡಿನೇಟರ್ ಮೋನಾ ಇರಾನಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಶಾನೆಲ್ಲೆ ಎಂಬ ಮಗಳಿದ್ದಾಳೆ.

ಈ ಸುದ್ದಿಯನ್ನೂ ಓದಿ: Rahul Gandhi: ಸಂಸತ್ತಲ್ಲಿ ಸ್ಮೃತಿ ಇರಾನಿಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ರಾಹುಲ್‌ ಗಾಂಧಿ; ಸಂಸದೆಯರಿಂದ ದೂರು

ರಾಜಕಾರಣಕ್ಕೆ ಸ್ಮೃತಿ ಇರಾನಿ ಎಂಟ್ರಿ

ಏಕ್ತಾ ಕಪೂರ್ ನಿರ್ಮಾಣದ ಕ್ಯೂಂಕೀ ಸಾಸ್ ಭೀ ಕಭೀ ಬಹು ಥಿ ಧಾರಾವಾಹಿಯ ತುಳಸಿ ಪಾತ್ರದ ಮೂಲಕ ಸ್ಮೃತಿ ಇರಾನಿ ಅವರು ಪ್ರಖ್ಯಾತಿಪಡೆದುಕೊಂಡರು. ರಾಮಯಾಣ, ವಿರುಧ್, ತೀನ್ ಬಹುರಾಣಿಯಾ, ಆತಿಶ್ ಮತ್ತು ಇತರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2003ರಲ್ಲಿ ಭಾರತೀಯ ಜನತಾ ಪಾರ್ಟಿ ಸೇರುವ ಮೂಲಕ ರಾಜಕಾರಣಕ್ಕೆ ಪ್ರವೇಶ ಕೊಟ್ಟರು. ಲೋಕಸಭೆಯಲ್ಲಿ ಗೆಲ್ಲುವ ಮುಂಚೆ ಅವರು ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಹಾಲಿ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಕೆಲಸ ಮಾಡುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version