ನವದೆಹಲಿ: ದೆಹಲಿ ಪೊಲೀಸರಿಂದ (Delhi Police) ಬಂಧನಕ್ಕೊಳಗಾಗಿರುವ ಐಸಿಸ್ ಉಗ್ರ ಶಾಹ್‌ನವಾಜ್ (ISIS Operative Shehnawaz) ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ. 26/11 ರೀತಿಯ ಉಗ್ರ ದಾಳಿ (26/11-Like Attack) ನಡೆಸುವುದಕ್ಕಾಗಿ, ನುಹ್, ಮೇವಾತ್, ದಿಲ್ಲಿ, ಲಕ್ನೋ ಮತ್ತು ರುದ್ರಪ್ರಯಾಗದಲ್ಲಿ ಪರೀಕ್ಷಾರ್ಥ ಸ್ಫೋಟಗಳನ್ನು ನಡೆಸಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಆದರೆ, ಉಗ್ರ ಕೃತ್ಯಗಳನ್ನು ಅನುಷ್ಠಾನಗೊಳಿಸುವ ಮುನ್ನವೇ ದಿಲ್ಲಿ ಪೊಲೀಸರ ಉಗ್ರರ ಯೋಜನೆಗಳನ್ನು ತಲೆ ಕೆಳಗಾಗುವಂತೆ ಮಾಡಿದ್ದಾರೆ.
ಅಹಮದಾಬಾದ್, ಸೂರತ್ ಮತ್ತು ಬರೋಡಾದಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಹಿಂದೂ ಸಂಘಟನೆಗಳ 15 ಆವರಣಗಳನ್ನು ಪರಿಶೀಲಿಸದ್ದೇನೆ. ಬಲಪಂಥೀಯ ಸಂಸ್ಥೆಗಳು ಮತ್ತು ನಾಯಕರ ಮೇಲೆ ದಾಳಿ ಮಾಡಲು ಯೋಜಿಸಲಾಗಿತ್ತು ಎಂದು ಐಸಿಸ್ ಉಗ್ರ ಶಾಹ್‌ನವಾಜ್ ಪೊಲೀಸರಿಗೆ ತಿಳಿಸಿದ್ದಾನೆ.
ಶಾಹ್‌ನವಾಜ್ ದಿಲ್ಲಿ ಮೂಲದವನಾಗಿದ್ದು, ಎನ್‌ಐಟಿ ನಾಗ್ಪುರದಲ್ಲಿ ಎಂಜಿನಿಯರಿಂಗ್ ಮಾಡಿದ್ದಾನೆ. ಈತನ ತಂದೆ ಹಜಾರಿಬಾಗ್‌ನಲ್ಲಿ ಶಿಕ್ಷಕರಾಗಿದ್ದರು. ಈತ ಆಗಾಗ ದಿಲ್ಲಿಗೆ ಭೇಟಿ ನೀಡುತ್ತಿದ್ದ. ಶಾಹ್‌ನವಾಜ್ ನಿಯಮಿತವಾಗಿ ದಾರ್ಸ್‌ಗೆ ಹಾಜರಾಗುತ್ತಿದ್ದ ಮತ್ತು ನಿಧಾನವಾಗಿ ತೀವ್ರಗಾಮಿಯಾದ, ಬಳಿಕ ಈ ವೇಳೆ ರಿಜ್ವಾನ್ ಸಂಪರ್ಕಕ್ಕೆ ಬಂದ.
2019-20ರಲ್ಲಿ ಶಾಹ್‌ನವಾಜ್ ಸ್ಫೋಟಕಗಳನ್ನು ಹೇಗೆ ತಯಾರಿಸಬೇಕೆಂದು ಕಲಿಯಲು ಪ್ರಾರಂಭಿಸಿದ. ಅಲ್ಲದೇ, ವಿದೇಶಿ ಹ್ಯಾಂಡ್ಲರ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಹ್ಯಾಂಡ್ಲರ್ ರಿಜ್ವಾನ್ ಮತ್ತು ಶೆಹ್ನವಾಜ್ ಇಬ್ಬರಿಗೂ ಆನ್‌ಲೈನ್ ತರಗತಿಗಳ ಸಹಾಯದಿಂದ ಸ್ಫೋಟಕಗಳ ತಯಾರಿಸುವುದನ್ನು ಕಲಿಯಲು ಸಹಾಯ ಮಾಡಿದರು.
ಈ ಸುದ್ದಿಯನ್ನೂ ಓದಿ: ISIS Terrorist: ದೆಹಲಿಯಲ್ಲಿ ಐಸಿಸ್ ಉಗ್ರ ಶಾಹ್‌ನವಾಜ್ ಬಂಧನ; ಎಂಜಿನಿಯರ್ ಉಗ್ರನಾಗಿದ್ದು ಹೇಗೆ?
ಇಬ್ಬರೂ ಸ್ಫೋಟಕಗಳ ಪ್ರಾಯೋಗಿಕ ಪರೀಕ್ಷೆ ನಡೆಸುವುದು ಮಾತ್ರವಲ್ಲದೇ, ಅಡಗುತಾಣಗಳು ಮತ್ತು ಟಾರ್ಗೆಟ್‌ಗಳನ್ನ ಗುರುತಿಸುವುದು ಪ್ರಾರಂಭಿಸಿದರು ಎಂದು ಮೂಲಗಳು ತಿಳಿಸಿವೆ. ನಂತರ ಹ್ಯಾಂಡ್ಲರ್, ಶಾಹ್‌ನವಾಜ್ ಅವರನ್ನು ಪುಣೆಗೆ ತೆರಳಲು ಹೇಳಿದರು. ಚಿತ್ತೋರಗಢದಿಂದ ಬಂಧಿಸಲ್ಪಟ್ಟ ಇಬ್ಬರು ಶಂಕಿತರು ಕೂಡ ಇಲ್ಲಿಯೇ ವಾಸವಾಗಿದ್ದರು. ಈ ಮಧ್ಯೆ ಅವರು ನಿರಂತರವಾಗಿ ಐಇಡಿ ಸ್ಫೋಟಕಗಳನ್ನು ತಯಾರಿಸುವುದನ್ನು ಮುಂದುವರಿಸಿದ್ದರು. ಯಾವಾಗ ಪುಣೆಯಲ್ಲಿ ಗುಂಪು ಸಿಕ್ಕಿ ಬಿದ್ದಿತ್ತೋ ಅವರಿಬ್ಬರು ದಿಲ್ಲಿಗೆ ಓಡಿ ಹೋಗಿದ್ದರು. ಮೂಲಗಳ ಪ್ರಕಾರ, ಶಾಹ್‌ನವಾಜ್ ಐಸಿಸ್‌ನ ದಿಲ್ಲಿ ಮತ್ತು ಪುಣೆ ಘಟಕದ ನಡುವಿನ ಸಾಮಾನ್ಯ ಕೊಂಡಿಯಾಗಿದ್ದ.