Site icon Vistara News

Bhagavad Gita | ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ಭಗವದ್ಗೀತೆ, ಸಂಸ್ಕೃತ ವ್ಯಾಕರಣದ ದೇವಭಾಷಾ ಸಿಲಬಸ್ ಜಾರಿ

Bhagavad Gita

ತ್ರಿಶೂರ್: ಕೇರಳದ ಇಸ್ಲಾಮಿಕ್ ಸಂಸ್ಥೆಯೊಂದು 11 ಮತ್ತು 12ನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಂಸ್ಕೃತ ವ್ಯಾಕರಣ, ಭಗವದ್ಗೀತೆ (Bhagavad Gita) ಹಾಗೂ ಹಿಂದೂ ಧರ್ಮದ ಇತರ ಗ್ರಂಥಗಳ ಬಗ್ಗೆ ಬೋಧನೆ ಮಾಡಲಿದೆ. ತ್ರಿಶೂರ್‌ ನಗರದ ಮಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (MIC) ನಡೆಸುವ ಅಕಾಡೆಮಿ ಆಫ್ ಷರಿಯಾ ಆ್ಯಂಡ್ ಅಡ್ವಾನ್ಸ್ಡ್ ಸ್ಟಡೀಸ್(ASAS) ಸಂಸ್ಥೆಯು ಹಿಂದೂ ಧಾರ್ಮಿಕ ದೇವ ಭಾಷಾ ಸಿಲಬಸ್ ಸಿದ್ಧಪಡಿಸಿದೆ. ಈ ಹೊಸ ಸಿಲಬಸ್ ಜೂನ್‌ ತಿಂಗಳಿಂದ ಜಾರಿಯಾಗಲಿದೆ.

ಪುರಾತನ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಸಂಸ್ಕೃತವನ್ನು ಕಲಿಸಲು ರಚನಾತ್ಮಕ ಪಠ್ಯಕ್ರಮ ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಉಪನಿಷತ್‌ಗಳು, ಮಹಾಭಾರತ, ರಾಮಾಯಣದ ಕೆಲವು ಆಯ್ದ ಭಾಗಗಳು ಹಾಗೂ ಸಂಸ್ಕೃತವನ್ನು ಕಳೆದ ಏಳು ವರ್ಷಗಳಿಂದ ಬೋಧಿಸುತ್ತಾ ಬಂದಿದೆ. ಇದೀಗ, ದೇವ ಭಾಷಾ ಎಂಬ ಹೊಸ ಸಿಲಬಸ್ ಅನ್ನು ಪರಿಚಯಿಸುತ್ತಿದೆ.

ಈ ಮೊದಲು ಕಲಿಸಲಾಗುತ್ತಿದ್ದ ಸಂಸ್ಕೃತ ಸಿಲಬಸ್ ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ. ಈಗ ಹೊಸದಾಗಿ ಜಾರಿಗೆ ತರಲು ನಿರ್ಧರಿಸಲಾಗಿರುವ ದೇವಭಾಷಾ ಸಿಲಬಸ್, ಎಂಟು ವರ್ಷಗಳ ಕೋರ್ಸ್ ಆಗಿದ್ದು, ಪದವಿ ಪೂರ್ವದಿಂದ ಹಿಡಿದು, ಪದವಿಯವರೆಗೂ ಕಲಿಸಬಹುದಾಗಿದೆ ಎಂದು ಸಂಸ್ಥೆಯ ಸಂಚಾಲಕ ಹಫೀಜ್ ಅಬೂಬಕರ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Sanskrit Classes | ಮಕ್ಕಳಿಗೆ ಆನ್‌ಲೈನ್‌ನಲ್ಲಿ ಸಂಸ್ಕೃತ ಕಲಿಯಲು ಅವಕಾಶ

Exit mobile version