Site icon Vistara News

Aditya – L1 : ಇಸ್ರೊ ಅಧ್ಯಕ್ಷ ಎಸ್​. ಸೋಮನಾಥ್​ಗೆ ಮುದ್ದಾದ ಗಿಫ್ಟ್​ ಕೊಟ್ಟ ಪಕ್ಕದ ಮನೆಯ ಮಗು!

ISRO president

ಬೆಂಗಳೂರು: ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಮತ್ತು ಬಹುನಿರೀಕ್ಷಿತ ಆದಿತ್ಯ ಎಲ್ 1 (Aditya – L1) ಉಡಾವಣೆ ಸೇರಿದಂತೆ ಇತ್ತೀಚಿನ ಯಶಸ್ವಿ ಬಾಹ್ಯಾಕಾಶ ಕಾರ್ಯಾಚರಣೆಗಳೊಂದಿಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಶ್ವಾದ್ಯಂತ ವ್ಯಾಪಕ ಮೆಚ್ಚುಗೆ ಪಡೆಯುತ್ತಿದೆ. ಅಂತೆಯೇ ಇದೀಗ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರ ನೆರೆಮನೆಯ ಪುಟ್ಟ ಮಗುವೊಂದು, ಚಂದ್ರದ ಮೇಲೆ ಇಳಿದ ವಿಕ್ರಮ್​ ಲ್ಯಾಂಡರ್​​ನ ಮಾದರಿಯನ್ನು ಉಡುಗೊರೆಯಾಗಿ ನೀಡಿದೆ. ಮಗುವಿನ ಈ ಕ್ರಮಕ್ಕೆ ವ್ಯಾಪಕ ಬೆಂಬಲ ದೊರಕಿದೆ.

ಇಸ್ರೋ ವಿಜ್ಞಾನಿ ಪಿ.ವಿ.ವೆಂಕಟಕೃಷ್ಣನ್ ಅವರು ಹೃದಯಸ್ಪರ್ಶಿ ಕ್ಷಣವನ್ನು ಸಾಮಾಜಿಕ ಮಾಧ್ಯಮವಾಗಿರುವ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ, “ಇಸ್ರೋ ಮುಖ್ಯಸ್ಥ ಶ್ರೀ ಸೋಮನಾಥ್ ಅವರು ಇಂದು ಅಚ್ಚರಿಯ ಭೇಟಿ ಎದುರಾಯಿತು. ನೆರೆ ಮನೆಯ ಮಗುವೊಂದು ತಾನು ರಚಿಸಿದ ವಿಕ್ರಮ್ ಲ್ಯಾಂಡರ್ ಮಾದರಿಯನ್ನು ಎಲ್ಲರ ಪರವಾಗಿ ಇಸ್ರೋ ಮುಖ್ಯಸ್ಥರಿಗೆ ಹಸ್ತಾಂತರಿಸಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಇಂತಹ ಬೆಂಬಲಗಳು ಇಸ್ರೊ ಅಧ್ಯಕ್ಷರಿಗೆ ಮುಂದುವರಿದಿದೆ. ಇಸ್ರೋ ವಿಜ್ಞಾನಿಗಳಿಗೆ ನಾನಾ ಭಾಗಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿವೆ. ಆದಿತ್ಯ ಮಿಷನ್​ ಉಡಾವಣೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್​ ಸೋಷಿಯಲ್ ಮೀಡಿಯಾ ಫ್ಲ್ಯಾಟ್​ಫಾರ್ಮ್​ನಲ್ಲಿ , ಪಿಎಂ ಮೋದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. “ಚಂದ್ರಯಾನ -3 ಯಶಸ್ಸಿನ ನಂತರ, ಭಾರತವು ತನ್ನ ಬಾಹ್ಯಾಕಾಶ ಪ್ರಯಾಣವನ್ನು ಮುಂದುವರಿಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ -ಎಲ್ 1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋದ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಗೆ ಅಭಿನಂದನೆಗಳು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Aditya- L1 : ಆದಿತ್ಯ ಎಲ್​1 ಮಿಷನ್​ನ ಉಡಾವಣೆಯ ಮೊದಲ ಚಿತ್ರಗಳು ಹೀಗಿವೆ

ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಉಳಿ ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗಗನಸಖಿ ಕೂಡ ಅವರಿಗೆ ಪ್ರಶಂಸೆಗಳನ್ನು ಸಲ್ಲಿಸಿದ್ದರು.

ಆದಿತ್ಯ ಎಲ್1 ಉಡಾವಣೆ

ಬಾಹ್ಯಾಕಾಶದಿಂದ ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ನೂತನ ಪ್ರಯತ್ನವಾದ ಆದಿತ್ಯ ಎಲ್ 1 ಮಿಷನ್, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್​ವಿ ) ರಾಕೆಟ್​​ ಮೂಲಕ ಯಶಸ್ವಿಯಾಗಿ ಉಡಾವಣೆಯಾಯಿತು.

ಆದಿತ್ಯ-ಎಲ್ 1 ಸ್ವಯಂ ಶಕ್ತಿ ಉತ್ಪಾದನೆಯನ್ನು ಪ್ರಾರಂಭಿಸಿದೆ. ಅದರ ಸೌರ ಫಲಕಗಳನ್ನು ಸಂಪೂರ್ಣವಾಗಿ ಕೆಲಸ ಮಾಡುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಸೆಪ್ಟೆಂಬರ್ 3 ರಂದು ಬೆಳಗ್ಗೆ 11:45 ರ ಸುಮಾರಿಗೆ ತನ್ನ ಕಕ್ಷೆಯನ್ನು ಹೆಚ್ಚಿಸಲಾಗುತ್ತದೆ.

ಆದಿತ್ಯ ಎಲ್ 1 ಮಿಷನ್​​ನ ಪ್ರಾಥಮಿಕ ಉದ್ದೇಶವೆಂದರೆ ಸೂರ್ಯನ ಕರೋನಾವನ್ನು ಗಮನಿಸುವುದು ಮತ್ತು ಅದರ ಅಸಾಧಾರಣ ಶಾಖದ ಬಗ್ಗೆ ಒಳನೋಟಗಳನ್ನು ಪಡೆಯುವುದು. ಚಂದ್ರಯಾನ 3 ಮಿಷನ್​ಗಿಂತ ಭಿನ್ನವಾಗಿ, ವಿಕ್ರಮ್ ಲ್ಯಾಂಡರ್ ಪ್ರಜ್ಞಾನ್ ರೋವರ್​ನೊಂದಿಗೆ ಚಂದ್ರನ ದಕ್ಷಿಣ ಧ್ರುವದ ಬಳಿ ಮೃದುವಾಗಿ ಸ್ಪರ್ಶಿಸಿತು. ಆದಿತ್ಯ ಎಲ್ 1 ಸೌರ ಶೋಧಕವನ್ನು ಭೂಮಿ-ಸೂರ್ಯ ವ್ಯವಸ್ಥೆಯ ಮೊದಲ ಲ್ಯಾಗ್ರೇಂಜ್ ಬಿಂದುವಿನಲ್ಲಿ ಇರಿಸಲಾಗಿದೆ.

Exit mobile version