Site icon Vistara News

PSLV C56 Launch: ಇಸ್ರೋ ಮತ್ತೊಂದು ಮೈಲುಗಲ್ಲು; ಸಿಂಗಾಪುರದ 7 ಉಪಗ್ರಹ ಉಡಾವಣೆ ಯಶಸ್ವಿ

ISRO Launches PSLV 56 Mission

ISRO launches PSLV-C56 with 7 foreign satellites to space

ಶ್ರೀಹರಿಕೋಟ: ಕೆಲ ದಿನಗಳ ಹಿಂದಷ್ಟೇ ಚಂದ್ರಯಾನ 3 (Chandrayaan 3) ಮಿಷನ್‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಭಾನುವಾರ (July 30) ಬೆಳಗ್ಗೆ ಸಿಂಗಾಪುರದ ಏಳು ಉಪಗ್ರಹಗಳನ್ನು (PSLV C56 Launch) ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಡಿಎಸ್‌-ಎಸ್‌ಎಆರ್‌ (DS-SAR) ಉಪಗ್ರಹ ಸೇರಿ ಏಳು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-56 ರಾಕೆಟ್‌ ಯಶಸ್ವಿಯಾಗಿ ನಭಕ್ಕೆ ಹಾರಿತು.

ಉಡಾವಣೆಯ ದೃಶ್ಯ

ಉಡಾವಣೆಗೊಂಡ 20 ನಿಮಿಷಗಳಲ್ಲಿಯೇ ಎಲ್ಲ ಏಳು ಉಪಗ್ರಹಗಳು ಸರಿಯಾದ ಕಕ್ಷೆ ಸೇರಿವೆ ಎಂದು ಇಸ್ರೋ ತಿಳಿಸಿದೆ. “ಏಳು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಎಲ್ಲ ಉಪಗ್ರಹಗಳು ಸರಿಯಾದ ಕಕ್ಷೆ ಸೇರಿವೆ” ಎಂದು ಇಸ್ರೋ ಅಧ್ಯಕ್ಷ ಎಸ್.‌ ಸೋಮನಾಥ್‌ ತಿಳಿಸಿದರು.

ಡಿಎಸ್-ಎಸ್ಎಆರ್ ಉಪಗ್ರಹದ ಪ್ರಾಥಮಿಕ ಪೇಲೋಡ್ 360 ಕೆಜಿ ಇದೆ. ಈ ಉಪಗ್ರಹವನ್ನು ಸಿಂಗಾಪುರ ಸರ್ಕಾರವನ್ನು ಪ್ರತಿನಿಧಿಸುವ ಡಿಎಸ್‌ಟಿಎ ಮತ್ತು ಎಸ್ ಇಟಿ ಎಂಜಿನಿಯರಿಂಗ್ ನಡುವಿನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉಪಗ್ರಹವನ್ನು ಇಸ್ರೋ 5 ಡಿಗ್ರಿ ಇಳಿಜಾರು ಮತ್ತು 535 ಕಿಮೀ ಎತ್ತರದಲ್ಲಿ ಸಮಭಾಜಕ ಕಕ್ಷೆಗೆ (NEO) ಸೇರಿಸಿದೆ.

ಇದನ್ನೂ ಓದಿ: ISRO: ನೆಕ್ಸ್ಟ್ ಜೆನ್ ನ್ಯಾವಿಗೇಷನ್ ಉಪಗ್ರಹ ಹೊತ್ತ ಇಸ್ರೋದ ಜಿಎಸ್ಎಲ್‌ವಿ ರಾಕೆಟ್ ಯಶಸ್ವಿ ಉಡಾವಣೆ

ಡಿಎಸ್-ಎಸ್ಎಆರ್ ಉಪಗ್ರಹ ನಿಯೋಜನೆಗೆ ಇಸ್ರೋ ನ್ಯೂ ಸ್ಪೇಸ್ ಇಂಡಿಯಾ ಲಿ.(ಎನ್ಎಸ್ಐಎಲ್)ನಿಂದ ಪಿಎಸ್ಎಲ್‌ವಿ-ಸಿ56 ಖರೀದಿಸಿದೆ. ಸಿಂಗಾಪುರಕ್ಕೆ ಸೇರಿದ TeLEOS-2 ಮತ್ತು Lumelite-4 ಎಂಬ ಎರಡು ಉಪಗ್ರಹಗಳನ್ನು ಪಿಎಸ್ಎಲ್‌ವಿ ಇಸ್ರೋ ಈ ಹಿಂದೆ ಉಡಾವಣೆ ಮಾಡಿತ್ತು.

Exit mobile version