Site icon Vistara News

ISRO | ದೇಶದ ಮೊದಲ ವಾಣಿಜ್ಯಿಕ ಉಡಾವಣೆ ಯಶಸ್ವಿ, 36 ಉಪಗ್ರಹ ನಭಕ್ಕೆ ಹಾರಿಸಿ ಇಸ್ರೊ ಇತಿಹಾಸ

Isro 3

ಅಮರಾವತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಮೊದಲ ಬಾರಿಗೆ ವಾಣಿಜ್ಯಿಕ ಉಡಾವಣೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಬಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದೆ. ಬ್ರಿಟನ್‌ನ ಒನ್‌ವೆಬ್‌ (OneWeb) ಕಂಪನಿಯ ೩೬ ಉಪಗ್ರಹಗಳನ್ನು ಹೊತ್ತ ಎಲ್‌ವಿಎಂ-3 (LVM-3) ರಾಕೆಟ್‌ ನಭಕ್ಕೆ ಹಾರಿದೆ. ಇದರಿಂದ ಇಸ್ರೊ ಜಾಗತಿಕವಾಗಿ ವಾಣಿಜ್ಯಿಕ ಉಡಾವಣೆ ಮಾರುಕಟ್ಟೆಗೆ ಪ್ರವೇಶಿಸಿದಂತೆ ಆಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಧ್ಯರಾತ್ರಿ ಉಪಗ್ರಹಗಳ ಉಡಾವಣೆ ಮಾಡಲಾಗಿದೆ. ಎಲ್ಲ ಉಪಗ್ರಹಗಳು ಲೋ ಅರ್ತ್‌ ಆರ್ಬಿಟ್‌ ಸೇರಿವೆ. ವಾಣಿಜ್ಯಿಕ ಉಡಾವಣೆಗಾಗಿ ಬ್ರಿಟನ್‌ನ ಒನ್‌ವೆಬ್‌ ಹಾಗೂ ಭಾರತದ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ (NSIL) ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ | ವಿಸ್ತಾರ Explainer | ರಷ್ಯಾದ ನಷ್ಟ ಭಾರತಕ್ಕೆ ಲಾಭ! ನಾಳೆ ವನ್‌ವೆಬ್ ಉಪಗ್ರಹಗಳ ಉಡಾವಣೆ

Exit mobile version