ಶ್ರೀಹರಿಕೋಟ: ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ 3 ಮಿಷನ್‌ಅನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಮಿಷನ್ ಹೊತ್ತ ಲಾಂಚ್ ವೆಹಿಕಲ್ ಮಾರ್ಕ್ III (LVM 3) ರಾಕೆಟ್ ನಭಕ್ಕೆ ಹಾರಿದೆ. ಇದರೊಂದಿಗೆ ಬಾಹ್ಯಾಕಾಶ ಕ್ಷೇತ್ರ ಹಾಗೂ ಚಂದ್ರನ ಅಂಗಳದಲ್ಲಿ ಮಹತ್ವದ ಸಂಶೋಧನೆ ಮಾಡಬೇಕು ಎಂಬ ಇಸ್ರೊ ಕನಸಿಗೆ ರೆಕ್ಕೆ-ಪುಕ್ಕ ಬಂದಂತಾಗಿದೆ.
ಸಾಫ್ಟ್ ಲ್ಯಾಂಡಿಂಗ್ ಆದರೆ ಸಕ್ಸೆಸ್
2019ರಲ್ಲಿ ಕೈಗೊಂಡ ಚಂದ್ರಯಾನ 2 ಉಡಾವಣೆ ಯಶಸ್ವಿಯಾದರೂ ಸಾಫ್ಟ್ ಲ್ಯಾಂಡಿಂಗ್ ಆಗದ ಕಾರಣ ಮಿಷನ್ ವಿಫಲವಾಯಿತು. ಹಾಗಾಗಿ, ಈ ಬಾರಿ ಇಸ್ರೊ ವಿಜ್ಞಾನಿಗಳು ಸಾಫ್ಟ್ ಲ್ಯಾಂಡಿಂಗ್‌ಅನ್ನು ಕೇಂದ್ರೀಕರಿಸಿ ಚಂದ್ರಯಾನ 3 ಮಿಷನ್ ಕೈಗೊಂಡಿದ್ದಾರೆ. ಹಾಗಾಗಿ, ಶುಕ್ರವಾರ ಉಡಾವಣೆಯಾದ ಚಂದ್ರಯಾನ 3 ಮಿಷನ್‌ನ ಲ್ಯಾಂಡರ್, ಆಗಸ್ಟ್ 23ರ ಸಂಜೆ 5.47ಕ್ಕೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ.
ಉಡಾವಣೆಯ ಕ್ಷಣಗಳು
MAJESTIC #Chandrayaan3 🇮🇳 pic.twitter.com/b5VKkfMzQX
— BALA (@erbmjha) July 14, 2023
ಹಾಗಾಗಿ, ಮಿಷನ್ ಯಶಸ್ವಿಯಾಗಿದೆ ಎಂಬುದನ್ನು ತಿಳಿಯಲು ನಾವು ಆಗಸ್ಟ್ 23ರವರೆಗೆ ಕಾಯಬೇಕಾಗುತ್ತದೆ. ಭೂಮಿಗಿಂತ ಚಂದ್ರನ ಅಂಗಳದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಇರುವುದರಿಂದ ಸಾಫ್ಟ್ ಲ್ಯಾಂಡಿಂಗ್ ಸವಾಲಾಗಿದೆ.
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಜಗತ್ತಿಗೇ ಸ್ಫೂರ್ತಿ; ಮಿಷನ್ ಕುರಿತು ನಂಬಿ ನಾರಾಯಣನ್ ಹೇಳಿದ್ದೇನು?
ಆಗಸ್ಟ್ 23ರಂದು ಭಾರತದ ಚಂದ್ರಯಾನ 3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಆದರೆ ಹೊಸ ಮೈಲುಗಲ್ಲು ಸ್ಥಾಪನೆಯಾಗಲಿದೆ. ಅಮೆರಿಕ, ಚೀನಾ ಹಾಗೂ ರಷ್ಯಾ ನಂತರ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಚಂದ್ರನ ಅಂಗಳದಲ್ಲಿ ಭೂಮಿಗಿಂತ ಕಡಿಮೆ ಗುರುತ್ವಾಕರ್ಷಣೆ ಇರುವುದರಿಂದ ಸಾಫ್ಟ್ ಲ್ಯಾಂಡಿಂಗ್ ಸವಾಲಾಗಿದೆ. ಹಾಗಾಗಿ, ಈ ಬಾರಿ ಇಸ್ರೊ ವಿಜ್ಞಾನಿಗಳು ಸಾಫ್ಟ್ ಲ್ಯಾಂಡಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.