Site icon Vistara News

Oceansat 3 | ಓಷ್ಯನ್‌ಸ್ಯಾಟ್‌ 3 ಸೇರಿ 9 ಉಪಗ್ರಹ ಉಡಾವಣೆ ಮಾಡಿದ ಇಸ್ರೊ

ISRO Oceansat 3

ಹೈದರಾಬಾದ್:‌ ಓಷ್ಯನ್‌ಸ್ಯಾಟ್‌‌ 3 (Oceansat 3) ಸೇರಿ ಒಟ್ಟು ಒಂಬತ್ತು ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿ-ಸಿ54 (PSLV-C54 Rocket) ರಾಕೆಟ್‌ ನಭಕ್ಕೆ ಹಾರಿತು.

ನಭಕ್ಕೆ ಹಾರಿದ 17 ನಿಮಿಷದಲ್ಲಿಯೇ ರಾಕೆಟ್‌ನಿಂದ ಬೇರ್ಪಟ್ಟ ಓಷ್ಯನ್‌ಸ್ಯಾಟ್ ಉಪಗ್ರಹ ಸೇರಿ ಎಲ್ಲ ಒಂಬತ್ತು ಉಪಗ್ರಹಗಳು ಕಕ್ಷೆ ಸೇರಿದವು. ಒಂಬತ್ತು ಉಪಗ್ರಹಗಳಲ್ಲಿ ಓಷನ್‌ಸ್ಯಾಟ್‌ ಪ್ರಮುಖವಾಗಿದ್ದು, ಇದು ಭೂಮಿಯ ಪರಿವೀಕ್ಷಣೆ ಮಾಡಲಿದೆ. ಸಾಗರಶಾಸ್ತ್ರ ಹಾಗೂ ವಾತಾವರಣದ ಅಧ್ಯಯನಕ್ಕೆ ಇದು ನೆರವಾಗಲಿದೆ.

ಓಷ್ಯನ್‌ಸ್ಯಾಟ್‌ ಹೊರತುಪಡಿಸಿ ಆನಂದ್‌, ಥೈಬೋಲ್ಟ್‌, ಐಎನ್‌ಎಸ್‌ 2-ಬಿ, ಆಸ್ಟ್ರೊಕ್ಯಾಸ್ಟ್‌ ಒಳಗೊಂಡ ಎಂಟು ಉಪಗ್ರಹಗಳು ನ್ಯಾನೋ ಸ್ಯಾಟಲೈಟ್ಸ್‌ ಆಗಿವೆ. ಓಷ್ಯನ್‌ಸ್ಯಾಟ್‌ 1 ಉಪಗ್ರಹವನ್ನು 1999ರಲ್ಲಿ ಹಾಗೂ ಓಷ್ಯನ್‌ಸ್ಯಾಟ್ 2 ಅನ್ನು 2009ರಲ್ಲಿ ಉಡಾವಣೆ ಮಾಡಲಾಗಿದೆ.

ಇದನ್ನೂ ಓದಿ | Mann ki baat | ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಸಾಧನೆಗೆ ಮೆಚ್ಚುಗೆ, ಸೂರ್ಯ ಗ್ರಾಮಗಳ ಅಭಿವೃದ್ಧಿಗೆ ಕರೆ

Exit mobile version