Site icon Vistara News

Congress Party: ಕಾಂಗ್ರೆಸ್‌ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!

IT department has withdrawn 65 crore rupees from the Congress party accounts

ನವದೆಹಲಿ: ತೆರಿಗೆ ಆದಾಯ ಪಾವತಿ (Income Tax) ವಿಷಯವು ಕೋರ್ಟ್‌ನಲ್ಲಿದ್ದಾಗ್ಯೂ ಆದಾಯ ತೆರಿಗೆ ಇಲಾಖೆಯು (IT Department) ಕಾಂಗ್ರೆಸ್ ಪಕ್ಷದ (Congress party) ವಿವಿಧ ಖಾತೆಗಳಿಂದ 65 ಕೋಟಿ ರೂಪಾಯಿ ವಿತ್‌ಡ್ರಾ (Crores Rupees Withdrawn) ಮಾಡಿಕೊಂಡಿದೆ ಎಂದು ಪಕ್ಷದ ಖಜಾಂಚಿಯಾಗಿರುವ ಅಜಯ್ ಮಾಕೇನ್ (Ajay Maken) ಅವರು ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆಯ ವಿರುದ್ದ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದು ಸಾಮಾನ್ಯವೇ? ಇಲ್ಲ. ಬಿಜೆಪಿ ಆದಾಯ ತೆರಿಗೆ ಪಾವತಿಸುತ್ತದೆಯೇ? ಇಲ್ಲ. ಹಾಗಾದರೆ ಕಾಂಗ್ರೆಸ್ ಪಕ್ಷವು ₹210 ಕೋಟಿಗಳ ತೆರಿಗೆ ಕಟ್ಟಬೇಕು ಎಂಬ ಬೇಡಿಕೆಯನ್ನು ಏಕೆ ಎದುರಿಸುತ್ತಿದೆ? ಇಂದಿನ ಐಟಿಎಟಿ ಪ್ರಕ್ರಿಯೆಯಲ್ಲಿ, ನಾವು ನಮ್ಮ ವಾದವನ್ನು ಮಂಡಿಸಿದ್ದೇವೆ. ವಿಚಾರಣೆಯನ್ನು ನಾಳೆ ಮುಂದುವರಿಸಲು ನಿರ್ಧರಿಸಲಾಗಿದೆ. ಐವೈಸಿ ಮತ್ತು ಎನ್ಎಸ್‌ಯುಐ ಮೂಲಕ ಕ್ರೌಡ್‌ಫಂಡಿಂಗ್ ಮತ್ತು ಸದಸ್ಯತ್ವ ಮೂಲಕ ಸೇರಿದಂತೆ ತಳಮಟ್ಟದ ಪ್ರಯತ್ನಗಳ ಮೂಲಕ ಹಣವನ್ನು ಸಂಗ್ರಹಿಸಲಾಗಿದೆ. ಈ ಹಣಕ್ಕೆ ತೆರಿಗೆ ಕಟ್ಟಬೇಕು ಎಂಬುದು ಈ ಪರಿಸ್ಥಿತಿಯು ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ನಿರ್ಣಾಯಕ ಪ್ರಶ್ನೆಯನ್ನು ಎತ್ತುತ್ತದೆ. ಇದು ಬೆದರಿಕೆಯಲ್ಲಿದೇ ಮತ್ತೇನು ಎಂದು ಅಜಯ್ ಮಾಕೇನ್ ಅವರು ಪ್ರಶ್ನಿಸಿದ್ದಾರೆ.

ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಆದಾಯ ತೆರಿಗೆಯಿಂದ ಎಷ್ಟು ಮೊತ್ತವನ್ನು ಹಿಂಪಡೆಯಲಾಗಿದೆ ಎಂಬ ವಿವರಗಳನ್ನುಅಜಯ್ ಮಾಕೇನ್ ಅವರು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ, ಆದರೆ ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ಮೊತ್ತವನ್ನು ಹಿಂಪಡೆಯಲಾಗಿದೆ ಎಂದು ಅಜಯ್ ಅವರು ತಿಳಿಸಿದ್ದಾರೆ.

ದಿಲ್ಲಿಯ ಕೆ ಜಿ ಮಾರ್ಗ್‌ನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಖಾತೆಯಿಂದ 17.65 ಕೋಟಿ ರೂ, ದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 41.85 ಕೋಟಿ ರೂ. ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮತ್ತೊಂದು ಖಾತೆಯಿಂದ 74.62 ಲಕ್ಷ ರೂಪಾಯಿ ಆದಾಯ ತೆರಿಗೆ ಇಲಾಖೆ ಪಡೆದುಕೊಂಡಿದೆ ಎಂಬ ಮಾಹಿತಿಯನ್ನು ಹಂಚಿಕೊಂಡದ್ದಾರೆ.

₹210 ಕೋಟಿ ಆದಾಯ ತೆರಿಗೆ ಬೇಡಿಕೆಗೆ ಸಂಬಂಧಿಸಿದಂತೆ ಫೆಬ್ರವರಿ 16 ರಂದು ಕಾಂಗ್ರೆಸ್‌ನ ಪ್ರಮುಖ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ನಂತರ ಆದಾಯ ತೆರಿಗೆ ಇಲಾಖೆಯು ಬ್ಯಾಂಕ್‌ಗಳಿಂದ ಹಣವನ್ನು ಹಿಂಪಡೆದಿರುವ ಆರೋಪ ಹೊರಬಿದ್ದಿದೆ. ಐಟಿ ಮೇಲ್ಮನವಿ ನ್ಯಾಯಮಂಡಳಿಯು ಗುರುವಾರ ನಿಗದಿತ ವಿಚಾರಣೆಯ ಬಾಕಿ ಉಳಿದಿರುವ ಮುಖ್ಯ ಖಾತೆಯನ್ನು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು.

ಈ ಸುದ್ದಿಯನ್ನೂ ಓದಿ: Congress Party: ಪಕ್ಷದ ಬ್ಯಾಂಕ್ ಖಾತೆ ಸ್ಥಗಿತ; ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ

Exit mobile version