ನವದೆಹಲಿ: ಅಕ್ಟೋಬರ್ 12ರಂದು ಕರ್ನಾಟಕ (Karnataka), ಆಂಧ್ರ ಪ್ರದೇಶ (Andhra Pradesh), ತೆಲಂಗಾಣ (Telangana) ಮತ್ತು ದಿಲ್ಲಿಯ (New Delhi) 55 ಕಡೆ ದಾಳಿ ದಾಳಿ (IT Raid) ನಡೆಸಿ, 94 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಸರ್ಕಾರಿ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಡೆವಲ್‌ಪರ್ಸ್ ಮತ್ತು ಅವರ ನಿಕಟವರ್ತಿಗಳಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ಮಾಡಲಾಗಿತ್ತು ಅಂದು ಅವರು ತಿಳಿಸಿದ್ದಾರೆ.
ಈ ದಾಳಿಯ ವೇಳೆ, ಎಂಟು ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಸೇರಿದಂತೆ ಲೆಕ್ಕಕ್ಕೆ ಸಿಗದ 94 ಕೋಟಿ ರೂಪಾಯಿ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: IT Raid : ಗುತ್ತಿಗೆದಾರರ ಸಂಘ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಎಂದ ಬೊಮ್ಮಾಯಿ
ಪತ್ತೆಯಾದ ತೆರಿಗೆ ವಂಚನೆಯ ವಿಧಾನವು ಒಂದೆ ತೆರನಾಗಿದೆ. ಈ ಗುತ್ತಿಗೆದಾರರು ನಕಲಿ ಖರೀದಿಗಳನ್ನು ಬುಕ್ ಮಾಡುವ ಮೂಲಕ ವೆಚ್ಚಗಳ ಹಣದುಬ್ಬರದಿಂದ ತಮ್ಮ ಆದಾಯವನ್ನು ಕಡಿಮೆ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಉಪ-ಗುತ್ತಿಗೆದಾರರೊಂದಿಗೆ ವ್ಯವಹಾರ ಕುದುರಿಸಿದ್ದಾರೆ. ಒಪ್ಪಂದದ ರಸೀದಿಗಳ ಬಳಕೆಯಲ್ಲಿ ಪತ್ತೆಯಾದ ಅಕ್ರಮಗಳು ಅಪಾರ ಪ್ರಮಾಣದ ಲೆಕ್ಕಕ್ಕೆ ಸಿಗದ ನಗದು ಮತ್ತು ಬಹಿರಂಗಪಡಿಸದ ಆಸ್ತಿಗಳ ಸೃಷ್ಟಿಗೆ ಕಾರಣವಾಗಿವೆ ಎಂದು ಐಟಿ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಐಟಿ ದಾಳಿ ವೇಳೆ, ಜಿಎಸ್‌ಟಿ ವಂಚಿಸಿರುವುದು ಕೂಡ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿ ವೇಳೆ, ಖಾಸಗಿ ನೌಕರನ ಮನೆಯಲ್ಲಿ ವಿದೇಶಿದಲ್ಲಿ ನಿರ್ಮಾಣವಾದ 30 ಭಾರೀ ದುಬಾರಿ ಕೈಗಡಿಯಾರಗಳು ದೊರೆತಿವೆ. ಈ ನೌಕರ ಯಾವುದೇ ವಾಚ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿಲ್ಲವಾದರೂ ಭಾರೀ ಬೆಲೆಗಳ ವಾಚ್ ದೊರೆತಿವೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.