Site icon Vistara News

Yasin Malik: ಹೌದು, ಯಾಸಿನ್ ಮಲಿಕ್‌ನೇ ಐಎಎಫ್‌ ಅಧಿಕಾರಿಗೆ ಗುಂಡು ಹೊಡೆದಿದ್ದು! ಗುರುತು ಹಿಡಿದ ಸಾಕ್ಷಿ

It was Yasin Malik who shot the IAF soldiers Eyewitness Identified him

ನವದೆಹಲಿ: 1990ರ ನಾಲ್ವರು ಐಎಎಫ್‌ ಯೋಧರನ್ನು ಗುಂಡಿಟ್ಟು (Attack On Air Force Men) ಕೊಂದ ಪ್ರಕರಣದ ಆರೋಪಿಯಾಗಿರುವ ಕಾಶ್ಮೀರ ಪ್ರತ್ಯೇಕತಾ ನಾಯಕ ಯಾಸಿನ್ ಮಲಿಕ್‌ನನ್ನು (Yasin Malik) ಪ್ರತ್ಯಕ್ಷದರ್ಶಿ ಹಾಗೂ ಪ್ರಮುಖ ಸಾಕ್ಷಿಯಾಗಿರುವ ಭಾರತೀಯ ವಾಯು ಪಡೆಯ ಮಾಜಿ ಯೋಧ (IAF) ಗುರುತಿಸಿದ್ದಾರೆ. ಈ ಪ್ರಕರಣದಲ್ಲಿ ಯಾಸಿನ್ ಮಲಿಕ್ ಪ್ರಮುಖವಾಗಿ ಗುಂಡು ಹಾರಿಸಿದ ವ್ಯಕ್ತಿ ಎಂದು ಆರೋಪಿಸಲಾಗಿದೆ.

1990 ಜನವರಿ 25ರಂದು ಶ್ರೀನಗರದ ಹೊರವಲಯದಲ್ಲಿರುವ ರಾವಲ್ಪೋರಾದಲ್ಲಿ ಯಾಸಿನ್ ಮಲಿಕ್ ನಡೆಸಿದ ಗುಂಡಿನ ದಾಳಿಯಲ್ಲಿ ಐಎಎಫ್ ಅಧಿಕಾರಿ ರವಿ ಖಾನ್ ಮತ್ತು ಇತರ ಮೂವರು ಮೃತಪಟ್ಟಿದ್ದರು ಮತ್ತು 22 ಮಂದಿ ಗಾಯಗೊಂಡಿದ್ದರು.

ದೆಹಲಿಯ ತಿಹಾರ್ ಜೈಲಿನಿಂದ ಶ್ರೀನಗರದಲ್ಲಿರುವ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ವಿಶೇಷ ನ್ಯಾಯಾಲಯದ ಮುಂದೆ ಮಲಿಕ್ ಅವರನ್ನು ಹಾಜರುಪಡಿಸಿದಾಗ, ರಾಜವರ್ ಉಮೇಶ್ವರ್ ಸಿಂಗ್ ಗುರುತಿಸಿದ್ದಾರೆ. 2018ರಿಂದಲೂ ಯಾಸಿನ್ ಮಲಿಕ್ ತಿಹಾರ್ ಜೈಲಿನಲ್ಲಿದ್ದಾರೆ.

1990 ಜನವರಿ 25ರಂದು ಏನಾಗಿತ್ತು?

ಯಾಸಿನ್ ಮಲಿಕ್ ನೇತೃತ್ವದ ಭಯೋತ್ಪಾದಕರ ಗುಂಪು 1990 ಜನವರಿ 25ರಂದು ಶ್ರೀನಗರದಲ್ಲಿ ಭಾರತೀಯ ವಾಯುಪಡೆಯ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿತು. ಈ ಗುಂಡಿನ ದಾಳಿಯಲ್ಲಿ ನಾಲ್ವರು ಕೊಲ್ಲಲ್ಪಟ್ಟರು ಮತ್ತು 22 ಮಂದಿ ಗಾಯಗೊಂಡರು. ಆ ಸಮಯದಲ್ಲಿ ಮಲಿಕ್ ಭಯೋತ್ಪಾದಕ ಗುಂಪಿನ ಜೆಕೆಎಲ್‌ಎಫ್‌ನ ನಾಯಕರಾಗಿದ್ದರು.

1990ರಲ್ಲಿ ಯಾಸೀನ್ ಮಲಿಕ್‌ನನ್ನು ಬಂಧಿಸಲಾಯಿತು. ಸಿಬಿಐ ಚಾರ್ಜ್‌ಶೀಟ್ ಕೂಡ ದಾಖಲಿಸಿತು. ಆದರೆ, ತನಿಖೆ ಮಾತ್ರ ಮುಂದಕ್ಕೆ ಸಾಗಿರಲಿಲ್ಲ. ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲಿಕ್‌ನನ್ನು 1994 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 1995 ರಲ್ಲಿ ಹೈಕೋರ್ಟ್ ವಿಚಾರಣೆಗೆ ತಡೆ ನೀಡಿತು. ಬಿಡುಗಡೆಯ ನಂತರ ಮಲಿಕ್ ಜೆಕೆಎಲ್‌ಎಫ್ ವಿಭಜಿಸಿ ಅಹಿಂಸಾತ್ಮಕ ಪ್ರತ್ಯೇಕತಾವಾದಿ ಬಣವನ್ನು ಮುನ್ನಡೆಸಿದರೆ, ಸಂಸ್ಥಾಪಕ ಅಮಾನುಲ್ಲಾ ಖಾನ್ ಹಿಂಸಾತ್ಮಕ ಬಣವನ್ನು ಮುನ್ನಡೆಸಿದರು.

ಈ ಸುದ್ದಿಯನ್ನೂ ಓದಿ: Yasin Malik Wife: ತಿಹಾರ್ ಜೈಲಲ್ಲಿರುವ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಹೆಂಡತಿ ಪಾಕ್ ಸಚಿವೆ?

Exit mobile version