Site icon Vistara News

Jaage Ho | ಮಧ್ಯರಾತ್ರಿ ಮೋದಿ ಕರೆ ಮಾಡಿ ಎಚ್ಚರವಾಗಿದ್ದೀರಾ ಎಂದು ಜೈಶಂಕರ್‌ಗೆ ಕೇಳಿದ್ದೇಕೆ?

Modi

ನ್ಯೂಯಾರ್ಕ್:‌ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿವರೆಗೂ ಕಾರ್ಯನಿರ್ವಹಿಸುತ್ತಾರೆ ಹಾಗೂ ಅವರು ನಿತ್ಯ ಕೆಲವೇ ಗಂಟೆ ಮಲಗುತ್ತಾರೆ ಎಂಬುದು ತುಂಬ ಜನಜನಿತ. ಆದರೆ, ಅವರು ಅಚ್ಚರಿ ಎಂಬಂತೆ, ಮಧ್ಯರಾತ್ರಿ ಕರೆ ಮಾಡಿ ಮಾತನಾಡಿರುವ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಮಾಹಿತಿ ನೀಡಿದ್ದಾರೆ. ಜೈಶಂಕರ್‌ ಅವರು ವಿದೇಶಾಂಗ ಕಾರ್ಯದರ್ಶಿ ಆಗಿದ್ದಾಗ ಅಂದರೆ, ೨೦೧೬ರಲ್ಲಿ ಮೋದಿ ಕರೆ ಮಾಡಿ “ಎಚ್ಚರವಾಗಿದ್ದೀರಾ” (Jaage Ho) ಎಂದು ಕೇಳಿದ ಕುರಿತು ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ್ದಾರೆ.

“೨೦೧೬ರಲ್ಲಿ ಅಫಘಾನಿಸ್ತಾನದ ಮಜಾರ್-ಎ-ಷರೀಫ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮೇಲೆ ಉಗ್ರರು ದಾಳಿ ಮಾಡಿದ್ದರು. ರಾತ್ರಿ ೧೨.೩೦ ಸುಮಾರಿಗೆ ನನ್ನ ಫೋನ್‌ ರಿಂಗಾಯಿತು. ಕರೆ ಸ್ವೀಕರಿಸಿದರೆ ಆ ಕಡೆಯಿಂದ ಮೋದಿ ಅವರು ʼಎಚ್ಚರದಿಂದ ಇದ್ದೀರಾ?ʼ ಎಂದು ಕೇಳಿದರು. ʼಹೌದು ಸರ್‌ʼ ಎಂದೆ. “ಟಿ.ವಿ ನೋಡುತ್ತಿದ್ದೀರಾʼ ಎಂದು ಕೇಳಿದರು. ʼನೋಡುತ್ತಿದ್ದೇನೆ ಸರ್‌ʼ ಎಂದು ಉತ್ತರಿಸಿದೆ. ʼಅಲ್ಲೇನಾಗುತ್ತಿದೆʼ ಎಂದು ಕೇಳಿದರು. ʼಉಗ್ರರ ದಾಳಿ ಆಗಿದೆ, ನೆರವು ನೀಡಲಾಗುತ್ತಿದೆʼ ಎಂಬುದಾಗಿ ಪ್ರತಿಕ್ರಿಯಿಸಿದೆ” ಎಂದು ಹೇಳಿದ್ದಾರೆ.

“ರಕ್ಷಣಾ ಕಾರ್ಯಾಚರಣೆ, ದಾಳಿ ಮುಗಿದ ಮೇಲೆ ನನಗೆ ಕರೆ ಮಾಡಿ ತಿಳಿಸಿ” ಎಂದರು. ಆಗ ನಾನು, ʼಸರ್‌, ಇದಕ್ಕೆ ಎರಡು-ಮೂರು ಆಗುತ್ತದೆʼ ಎಂದೆ. ಆಗಲೂ ಅವರು, ʼಮುಗಿದ ಬಳಿಕ ಕರೆ ಮಾಡಿ ತಿಳಿಸಿʼ ಎಂದರು. ಇದು ನರೇಂದ್ರ ಮೋದಿ ಅವರ ನಾಯಕತ್ವ, ಜನರ ಮೇಲೆ ಇಟ್ಟಿರುವ ಕಾಳಜಿಗೆ ಉದಾಹರಣೆಯಾಗಿದೆ. ಒಳ್ಳೆಯದ್ದೇ ಆಗಲಿ, ಕೆಟ್ಟದ್ದೇ ನಡೆಯಲಿ, ಮೋದಿ ಅವರಿದ್ದಾರೆ ಎಂಬುದೇ ಬಲ” ಎಂದು ಜೈಶಂಕರ್‌ ಸ್ಮರಿಸಿದ್ದಾರೆ.

“ಕೊರೊನಾ ಬಿಕ್ಕಟ್ಟಿನಿಂದಾಗಿ ವಿದೇಶದಲ್ಲಿ ಸಿಲುಕಿದವರು, ಅಫಘಾನಿಸ್ತಾನದಲ್ಲಿ ಕಳೆದ ವರ್ಷ ತಾಲಿಬಾನಿಗಳು ಪ್ರಾಬಲ್ಯ ಸಾಧಿಸಿದಾಗ ಸೇರಿ ಯಾವಾಗಲೂ ಜನ, ರಾಯಭಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾಗ ಮೋದಿ ಅವರು ಅಪ್ರತಿಮ ನಾಯಕತ್ವ ಪ್ರದರ್ಶಿಸಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನ ವಿವಿ ಪುರಂ ಫುಡ್‌ ಸ್ಟ್ರೀಟ್‌ನಲ್ಲಿ ತಿಂಡಿ ಸವಿದ ಕೇಂದ್ರ ಸಚಿವ ಜೈಶಂಕರ್‌

Exit mobile version