Site icon Vistara News

Modi Rally | ಮೈದಾನ ಸುತ್ತ ಜೈ ಕೆ.ಸಿ.ಆರ್‌ ಬಲೂನ್‌ ಹಾರಾಟ

Modi Rally

ಹೈದರಾಬಾದ್‌: ಹೈದರಾಬಾದ್‌ನಲ್ಲಿ ಬಿಜೆಪಿ ವಿರುದ್ಧ ಬ್ಯಾನರ್‌ ವಾರ್‌ ನಡೆಸುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು Modi Rally ನಡೆದ ಪರೇಡ್‌ ಮೈದಾನದ ಸುತ್ತಲೂ ಜೈ ಕೆ.ಸಿ.ಆರ್‌ ಎಂದು ಬರೆದ ಬಲೂನು ಹಾರಿ ಬಿಟ್ಟಿರುವುದು ವರದಿಯಾಗಿದೆ.

ಮೋದಿ ರ‍್ಯಾಲಿ (Modi Rally) ನಡೆದ ಮೈದಾನದಲ್ಲಿ ಕಾಣಿಸುವಂತೆ ಟಿಆರ್‌ಎಸ್‌ ಪಕ್ಷದ ಧ್ವಜದ ಬಣ್ಣದ ಗುಲಾಬಿ ಬಲೂನುಗಳನ್ನು ಹಾರಿ ಬಿಡಲಾಗಿತ್ತು ಎಂದು ವರದಿಯಾಗಿದೆ. ಬಲೂನ್‌ಗಳಲ್ಲಿ ಜೈ ಕೆ.ಸಿ.ಆರ್‌ ಎಂದು ಬರೆಯಲಾಗಿತ್ತು.

ಹೈದಾರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ Modi Rally ಆಯೋಜನೆಗೊಂಡ ಬಳಿಕದಿಂದ ಅಲ್ಲಿನ ಟಿಆರ್‌ಎಸ್‌ ಪಕ್ಷ ನಾನಾ ರೀತಿಯಲ್ಲಿ ಪ್ರಧಾನಿಗೆ ಮುಜುಗರ ಉಂಟು ಮಾಡಲು ಯತ್ನಿಸುತ್ತಿದೆ. ಅದಕ್ಕಾಗಿ ಬ್ಯಾನರ್‌ ಅನ್ನೇ ಅಸ್ತ್ರವನ್ನಾಗಿಸಿದೆ. ಅಂತೆಯೇ ಕೇಂದ್ರ ಬಿಜೆಪಿ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಹಲವಾರು ಬ್ಯಾನರ್‌ಗಳನ್ನು ನಗರದ ಅಲ್ಲಲ್ಲಿ ಅಂಟಿಸಲಾಗಿದೆ.

ಪ್ರಮುಖವಾಗಿ, ಬ್ಯಾಂಕ್‌ ದರೋಡೆ ಮಾಡುವವರ ರೋಚಕ ಕತೆಯನ್ನು ಒಳಗೊಂಡ ವೆಬ್‌ ಸೀರಿಸ್‌ “ಮನಿ ಹೇಸ್ಟ್‌” ನ ಚಿತ್ರಗಳನ್ನು ಬಳಸಿಕೊಂಡು, ಮೋದಿ ಜನರ ದುಡ್ಡನ್ನು ದರೋಡೆ ಮಾಡುತ್ತಿದ್ದಾರೆ ಎಂಬ ಒಕ್ಕಣೆಗಳ ಸಮೇತ ಬ್ಯಾನರ್‌ ಅಂಟಿಸಲಾಗಿತ್ತು.

ಇದನ್ನೂ ಓದಿ: BJP executive : ವಂಶಪಾರಂಪರ್ಯ ರಾಜಕೀಯದ ಅಧಃಪತನ ಗಮನಿಸಲು ಮುಖಂಡರಿಗೆ ಮೋದಿ ಕರೆ

Exit mobile version