Site icon Vistara News

Jailer Movie: ‘ಪೊನ್ನಿಯನ್ ಸೆಲ್ವನ್-2’ ದಾಖಲೆ ಧೂಳಿಪಟ, ಅತಿ ಹೆಚ್ಚು ಗಳಿಕೆ ಮಾಡಿದ ‘ಜೈಲರ್’!

Jailer Rajinikanth

ಚೆನ್ನೈ, ತಮಿಳುನಾಡು: ಸೂಪರ್ ಸ್ಟಾರ್ ರಜನಿಕಾಂತ್ (Super Star rajinikanth) ಅಭಿನಯದ ಜೈಲರ್ (Jailer Movie) ಚಿತ್ರವು, ಪೊನ್ನಿಯನ್ ಸೆಲ್ವನ್-2 (Ponniyin Selvan 2) ನಂತರದಲ್ಲಿ ಈ ವರ್ಷದ ಅತಿ ಹೆಚ್ಚು ಗಳಿಕೆಯ ತಮಿಳು ಸಿನಿಮಾ (Tamil Cinema) ಖ್ಯಾತಿಗೆ ಪಾತ್ರವಾಗಿದೆ. ಮಣಿರತ್ನಮ್ (mani ratnam) ಅವರ ನಿರ್ದೇಶನದ ಪೊನ್ನಿಯನ್ ಸೆಲ್ವನ್-2 ಸಿನಿಮಾ 345 ಕೋಟಿ ರೂಪಾಯಿ ಗಳಿಸಿತ್ತು. ನೆಲ್ಸನ್ ದಿಲಿಪ್ ಕುಮಾರ್ ನಿರ್ದೇಶನದ ಜೈಲರ್‌ನಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಿನಾಯಕನ್, ಶಿವರಾಜಕುಮಾರ್, ನಾಗೇಂದ್ರ ಬಾಬು ಸೇರಿ ಇನ್ನಿತರರು ನಟಿಸಿದ್ದಾರೆ.

ಸಿನಿಮಾ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅವರು ಈ ಕುರಿತು ಟ್ವೀಟ್ ಮಾಡಿ, ಮಣಿರತ್ನಮ್ ನಿರ್ದೇಶನದ ಪೊನ್ನಿಯನ್ ಸೆಲ್ವನ್-2 ಚಿತ್ರದ ಗಳಿಕೆಯನ್ನು ಜೈಲರ್ ಸಿನಿಮಾ ಮುರಿದಿದೆ. 2023ನೇ ವರ್ಷದಲ್ಲಿ ಪಿಎಸ್‌-2 ಗಳಿಕೆಯನ್ನು ಮೀರಿ ಜೈಲರ್ ಮುಂದೆ ಸಾಗಿದೆ. ತಮಿಳುನಾಡು ಬಾಕ್ಸ್‌ ಆಫೀಸ್‌ನಲ್ಲಿ ಜೈಲರ್ ನಂಬರ್ 1 ಸಿನಿಮಾವಾಗಿ ಹೊರ ಹೊಮ್ಮಿದೆ ಎಂದು ಹೇಳಿದ್ದಾರೆ.

ಐಶ್ವರ್ಯ ರೈ ಬಚ್ಚನ್-ವಿಕ್ರಮ್-ತ್ರಿಶಾ ಅಭಿನಯದ ಪೊನ್ನಿಯಿನ್ ಸೆಲ್ವನ್ -2 ಚಿತ್ರದ ಗಳಿಕೆಯನ್ನು ಮೀರಿದ ಜೈಲರ್ 2023ರ ಸಾಲಿನ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಶಾರುಖ್ ಖಾನ್ ಅವರ ಪಠಾಣ್ ಮತ್ತು ಪ್ರಭಾಸ್ ಅವರ ಆದಿಪುರುಷ ಚಿತ್ರಗಳಿವೆ.

ತಮಿಳುನಾಡಿನಲ್ಲೇ 100 ಕೋಟಿ ರೂ. ಬಾಚಿದ ಜೈಲರ್

ವಿಶೇಷ ಎಂದರೆ, ರಜನಿಕಾಂತ್ ಅವರ ಜೈಲರ್ ತಮಿಳುನಾಡಿನಲ್ಲೇ 100 ಕೋಟಿ ರೂ. ಗಳಿಕೆ ಮಾಡಿದೆ. ಜತೆಗೆ ಎಲ್ಲ ಭಾಷೆಗಳ ಮಾರುಕಟ್ಟೆಯನ್ನು ಸೇರಿ 174 ಕೋಟಿ ರೂ. ಗಳಿಕೆಯಾಗಿದೆ. ಐದು ದಿನದಲ್ಲಿ ತಮಿಳು ಆವೃತ್ತಿಯಲ್ಲಿ 139 ಕೋಟಿ ರೂ. ಆದಾಯ ಬಂದಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ತೆಲುಗು ವರ್ಷನ್ 32.25 ಕೋಟಿ ರೂ, ಹಿಂದಿ ವರ್ಷನ್ 1.25 ಕೋಟಿ ರೂ. ಗಳಿಕೆ ಮಾಡಿದೆ.

ಈ ಸುದ್ದಿಯನ್ನೂ ಓದಿ: Jailer Movie: ‘ಜೈಲರ್’ ಸಿನಿಮಾ ಒಟಿಟಿ ರಿಲೀಸ್‌ ಪಕ್ಕಾ! ಯಾವ ಒಟಿಟಿಗೆ ಬರಲಿದೆ?

ಭಾರತದಲ್ಲಿ ಚಿತ್ರವು ಗುರುವಾರ,

ಆಗಸ್ಟ್ 10 ರಂದು ಬಿಡುಗಡೆಯಾದ ಜೈಲರ್ 48.35 ಕೋಟಿ ರೂ.(ಎಲ್ಲಾ ಭಾಷೆಗಳು) ಆರಂಭದಲ್ಲಿ ಗಳಿಕೆ ಮಾಡಿತು. ಎರಡನೇ ದಿನದಲ್ಲಿ 25.75 ಕೋಟಿ ಗಳಿಸಿದಾಗ ದೊಡ್ಡ ಕುಸಿತವನ್ನು ಕಂಡಿತು. ವಾರಾಂತ್ಯದಲ್ಲಿ ಸಂಗ್ರಹಗಳು ಹೆಚ್ಚಿವೆ. ಸೋಮವಾರದ ಅಂಕಿಅಂಶಗಳು ಜೈಲರ್‌ಗೆ ಗಮನಾರ್ಹ ಬೆಳವಣಿಗೆಯನ್ನು ತೋರಿಸಿದವು ಮತ್ತು ಭಾರತದಲ್ಲಿ ಐದನೇ ದಿನಕ್ಕೆ 23.55 ಕೋಟಿ ಗಳಿಸಿದೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version